Advertisement

ಯುಪಿ: ಯುವತಿ ಅಪಹರಣದ ನಂತರ ಮತಾಂತರಗೊಳಿಸಿ ವಿವಾಹಕ್ಕೆ ಯತ್ನ; ಇಬ್ಬರ ಬಂಧನ

04:16 PM Dec 21, 2020 | Nagendra Trasi |

ಷಹಜಹಾನ್ ಪುರ್:21 ವರ್ಷದ ಯುವತಿಯನ್ನು ಅಪಹರಿಸಿದ ನಂತರ ಮತಾಂತರಗೊಳಿಸಲು ಯತ್ನಿಸಿದ್ದ ಇಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಭಾನುವಾರ(ಡಿಸೆಂಬರ್ 20, 2020) ಬಂಧಿಸಿರುವುದಾಗಿ ತಿಳಿಸಿದ್ದಾರೆ.

Advertisement

ನೂತನ ಮತಾಂತರ ನಿಗ್ರಹ ಕಾಯ್ದೆಯಡಿ ಆರೋಪಿಗಳಾದ ಮೊಹ್ಸಿನ್ ಮತ್ತು ಸಾದಿಖ್ ನನ್ನು ಬಂಧಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಅಪಹರಿಸಲ್ಪಟ್ಟ ಯುವತಿಯನ್ನು ಬಲವಂತವಾಗಿ ಮತಾಂತರಿಸಿ ವಿವಾಹ(ನಿಖಾಹ್)ವಾಗಲು ಸಿದ್ದತೆ ನಡೆಸಿದ್ದರು ಎಂದು ತಿಳಿಸಿದೆ.

ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಪಿಟಿಐ ಜತೆ ಮಾತನಾಡುತ್ತ, ಸಂತ್ರಸ್ತ ಯುವತಿ ಮನೆಯವರು ಡಿಸೆಂಬರ್ 19ರಂದು ಮೂವರು ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದು, ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿದ್ದು, ಜೈಲಿಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.

ಆರೋಪಿಗಳ ವಿರುದ್ಧ ಉತ್ತರಪ್ರೇಶ ಸರ್ಕಾರ ಕಾನೂನು ಬಾಹಿರಿ ಧಾರ್ಮಿಕ ಮತಾಂತರ ಪ್ರಕರಣದಡಿ ದೂರು ದಾಖಲಿಸಿಕೊಂಡಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳೀದೆ. ಅಲ್ಲದೇ ಪ್ರಕರಣದ ಮೂರನೇ ಆರೋಪಿ ಬಂಧನಕ್ಕಾಗಿ ಬಲೆ ಬೀಸಿರುವುವಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next