Advertisement

ಬುಡಕಟ್ಟು ಸಮುದಾಯದವರಿಗೆ 2 ಎಕರೆ ಕೃಷಿ ಭೂಮಿ​​​​​​​

06:25 AM Sep 15, 2018 | |

ಬೆಂಗಳೂರು: “ಅರಣ್ಯದಲ್ಲಿ ಪರಂಪರಾಗತವಾಗಿ ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿರುವ ಬುಡಕಟ್ಟು
ಸಮುದಾದವರಿಗೆ 2 ಎಕರೆ ಅರಣ್ಯ ಕೃಷಿ ಭೂಮಿಯನ್ನು ಅವರ ಹೆಸರಿಗೆ ಮಾಡಿಕೊಡಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಹೇಳಿದ್ದಾರೆ.

Advertisement

ರಾಷ್ಟ್ರೀಯ ಪೌಷ್ಠಿಕ ಮಾಸದ ಅಂಗವಾಗಿ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಬುಡಕಟ್ಟು
ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಬುಡಕಟ್ಟು ಜನರು ಅರಣ್ಯ ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೆತ್ತಿಕೊಂಡಿದ್ದರೆ ಸರ್ಕಾರ ಆ ಜಮೀನಿನಲ್ಲಿ 2 ಎಕರೆ ಕೃಷಿ ಜಮೀನನ್ನು ಅವರ ಹೆಸರಿಗೆ ಮಾಡಿಕೊಡಲಿದೆ.

ಬುಡಕಟ್ಟು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಈಗಾಗಲೇ ಸರ್ಕಾರ 46 ಸಾವಿರ ಎಕರೆ ಜಮೀನನ್ನು ಬುಡಕಟ್ಟು ಜನರಿಗೆ ನೀಡಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿÇÉೆಗಳಲ್ಲಿರುವ ಬುಡಕಟ್ಟು ಜನಾಂಗ ಈ ಯೋಜನೆಯ ಸದುಪಯೋಗವನ್ನು ಹೆಚ್ಚಾಗಿ ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಪೌಷ್ಠಿಕ ಆಹಾರದ ಬಗ್ಗೆ ಸೂಕ್ತ ತಿಳಿವಳಿಕೆ ನೀಡಲು ಸಾಕಷ್ಟು ಮಾರ್ಗ ಹಾಗೂ ಅಗತ್ಯ ವ್ಯವಸ್ಥೆಗಳಿವೆ. ಆದರೆ,ಬುಡಕಟ್ಟು ಜನರಲ್ಲಿ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ಕೊರತೆಯಿದೆ. ಈ ಬಗ್ಗೆ ಅವರಿಗೆ ಅರಿವು ಮೂಡಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಬುಡಕಟ್ಟು ಜನರು ಆರು ತಿಂಗಳು ತಮ್ಮ ಆಹಾರ ಸಂಗ್ರಹಿಸಿಟ್ಟುಕೊಳ್ಳುವ ಪರಿಸ್ಥಿತಿ ಇದೆ. ಸರ್ಕಾರ ಅವರಿಗೆ ಆರು ತಿಂಗಳಿಗೆ ಆಗುವಷ್ಟು ಪೌಷ್ಠಿಕ ಆಹಾರ ನೀಡುವ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಬುಡಕಟ್ಟು ವ್ಯವಹಾರ ನಿರ್ದೇಶನಾಲಯದ ನಿರ್ದೇಶಕ ಸಂಗಪ್ಪ, ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಟಿ.ಟಿ. ಬಸನಗೌಡ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಡಾ. ಆಶಾ ಬೆನಕಪ್ಪ ಮತ್ತಿತರರು ಹಾಜರಿದ್ದರು.

Advertisement

ಎಲ್ಲ ರೀತಿಯ ಸೌಕರ್ಯ
ಬುಡಕಟ್ಟು ಮಕ್ಕಳನ್ನು ಏಕಲವ್ಯ, ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸೇರಿಸಿದರೆ ಸರ್ಕಾರ ಎಲ್ಲ ರೀತಿಯ ಸೌಕರ್ಯ ನೀಡುತ್ತದೆ. ಬುಡಕಟ್ಟು ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ಆಸಕ್ತರಿರುವುದರಿಂದ ಆ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುತ್ತದೆ. ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬುಡಕಟ್ಟು ನಿರ್ದೇಶನಾಲಯ ಪ್ರಯತ್ನ ನಡೆಸಬೇಕು ಎಂದು ಎಂ.ಲಕ್ಷ್ಮೀನಾರಾಯಣ ಹೇಳಿದರು.

ಈ ಸಮುದಾಯದವರಿಗೆ ಸಂಬಂಧಪಟ್ಟ ಯೋಜನೆಗಳನ್ನು ಅಧಿಕಾರಿಗಳು ಸರಿಯಾಗಿ ಜಾರಿಗೊಳಿಸದಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ ಅವರು, ಬುಡಕಟ್ಟು ಜನರು ಈ ಬಗ್ಗೆ ಕಲ್ಯಾಣ ಕೇಂದ್ರ ಸಹಾಯವಾಣಿಯ ಮೂಲಕ ದೂರು ನೀಡಬಹುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next