ರಾಮನಗರ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪತ್ತೆ ಪ್ರಯೋಗಾಲಯಕ್ಕೆ 2.62 ಕೋಟಿ ರೂ, ಕ್ವಾರಂಟೈನ್ ವ್ಯವಸ್ಥೆಗೆ 50 ಲಕ್ಷ ರೂ, ವಲಸೆ ಕಾರ್ಮಿಕರಿಗೆ ತತ್ಕಾಲಿಕ ವಸತಿ ಕಲ್ಪಿಸಲು 30 ಲಕ್ಷ ರೂ ಬಿಡುಗಡೆ ಮಾಡಲಾ ಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀ ರ್ಣದಲ್ಲಿ ಅಧಿಕಾರಿಗಳ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಿಪತ್ತು ನಿರ್ವಹಣಾ ನಿಧಿಯಿಂದ ಈ ಅನು ದಾನ ಬಿಡುಗಡೆಯಾಗಿದೆ. ವಿಪತ್ತು ನಿರ್ವಹಣಾ ಮಂಡಳಿಯ ಉಪಾಧ್ಯಕ್ಷರಾಗಿ ತಾವು ಈ ನಿರ್ಧಾರ ಪ್ರಕಟಿಸಿರುವುದಾಗಿ ತಿಳಿಸಿದರು. ರಾಮನಗರ ಜಿಲ್ಲೆಯಲ್ಲಿ ಕನಕಪುರ ಮತ್ತು ರಾಮನಗರ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಕನಕಪುರಕ್ಕೆ 153 ಲಕ್ಷ ಮತ್ತು 117.85 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಕೋವಿಡ್-19 ಸೋಂಕು ಸಂದರ್ಭದ ಬಳಕೆಗೆಂದು ಜಿಲ್ಲಾಧಿಕಾರಿಗಳ ಅಕೌಂಟ್‌ನಲ್ಲಿ 13.05 ಕೋಟಿ ರೂ. ಇದೆ ಎಂದರು. ಜಿಲ್ಲೆಯ ಕನಕಪುರ, ರಾಮನಗರ ಮತ್ತು ಮಾಗಡಿಗಳಲ್ಲಿ ಹೊಸ ನಾಡ ಕಚೇರಿ ಕಟ್ಟಡ ಗಳ ನಿರ್ಮಾಣಕ್ಕೆ 56.56 ಲಕ್ಷ ರೂ. ಅನು ದಾನ ಬಿಡುಗಡೆಯಾಗಿದೆ. ಮಾಗಡಿಯಲ್ಲಿ ನಾಡ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ಇನ್ನಷ್ಟೆ ಪೂರ್ಣಗೊಳ್ಳಬೇಕಾಗಿದೆ ಎಂದರು. ಬರ, ಪ್ರವಾಹ, ಕೋವಿಡ್-19 ಸೋಂಕು ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ನೀಡಿರುವ ಅನುದಾನದ ಅಂಕಿ ಅಂಶಗಳನ್ನು ಸಚಿವರು ನೀಡಿದರು.
ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್.ಡಿ.ಆರ್.ಎಫ್) ರಾಜ್ಯದಲ್ಲಿ ಒಟ್ಟು 284 ಕೋಟಿ ರೂ. ಬಿಡುಗಡೆ ಯಾಗಿದೆ ಎಂದರು. ಕೋವಿಡ್-19 ಸೋಂಕಿನ ನಿಯಂತ್ರಣದ ಜೊತೆಗೆ ರಾಜ್ಯದ ಅಭಿವೃದಿಟಛಿಗೂ ಸರ್ಕಾರ ಮುಂದಾಗಿದೆ ಎಂದರು. ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಪಂ ಸಿಇಒ ಇಕ್ರಂ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಉಪವಿಭಾಗಾಧಿಕಾರಿ ದ್ರಾಕ್ಷಾಯಿಣಿ, ಜಿಲ್ಲೆಯ ನಾಲ್ವರೂ ತಹಸೀಲಾ ªರರು ಹಾಜರಿದ್ದರು.
27 ಎಕರೆ ಭೂಮಿ ಮಂಜೂರು: ರಾಮನಗರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಬೇಡಿಕೆಗಳಿಗೆ ಅನುಗುಣ ವಾಗಿ 27 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಮಾಗಡಿ ಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ 6 ಎಕರೆ, ರಾಮನಗರ ತಾಲೂಕು ಶೇಷಗಿರಿಹಳ್ಳಿಯಲ್ಲಿ ಕಸ ವಿಲೇವಾರಿಗೆ 3.5 ಎಕರೆ ನೀಡಲಾಗಿದೆ ಎಂದು ಉದಾಹರಣೆ ನೀಡಿದರು.