Advertisement

Mobile ಸ್ಟೋರ್‌ ಉದ್ಯೋಗಿಯಿಂದ 2.36 ಲಕ್ಷ ರೂ. ಮೌಲ್ಯದ ಮೊಬೈಲ್‌, 58 ಸಾವಿರ ರೂ. ನಗದು ಕಳವು

08:47 PM Aug 22, 2024 | Team Udayavani |

ಮಂಗಳೂರು: ಬಂಟ್ಸ್‌ ಹಾಸ್ಟೆಲ್‌ ಮೊಬೈಲ್‌ ಫೋನ್‌ ಸ್ಟೋರ್‌ ಒಂದರ ಉದ್ಯೋಗಿ ಮೊಹಮ್ಮದ್‌ ಶಿಬಾನ್‌ ಎಂಬಾತ 2,36,510 ರೂ. ಮೌಲ್ಯದ 7 ಮೊಬೈಲ್‌ ಫೋನ್‌ ಮತ್ತು ಅಂಗಡಿಯ ಕ್ಯಾಶ್‌ ಡ್ರಾಯರ್‌ನಲ್ಲಿದ್ದ 58,100 ರೂ. ನಗದು ಕಳವು ಮಾಡಿರುವ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇಲ್ಲಿನ ಜಾನ್ವಿ ಪ್ಲಾಝಾದಲ್ಲಿರುವ ಮೊಬೈಲ್‌ ಅಂಗಡಿಯ ಸ್ಟೋರ್‌ ಮ್ಯಾನೇಜರ್‌ ಸಂದೇಶ್‌ ಶೆಟ್ಟಿ ಎನ್ನುವವರು ರಜೆಯಲ್ಲಿ ತೆರಳುವ ಕಾರಣಕ್ಕಾಗಿ ಸ್ಟೋರ್‌ನ ಸಂಪೂರ್ಣ ಜವಾಬ್ದಾರಿಯನ್ನು ಮೊಹಮ್ಮದ್‌ ಶಿಬಾನ್‌ಗೆ ವಹಿಸಿದ್ದರು. ಆದರೆ ಆತ ಕಂಪೆನಿಯ ಕೆಲಸವನ್ನು ಸರಿಯಾಗಿ ನಿರ್ವಹಿಸದೇ ಇದ್ದುದರಿಂದ ಅವರು ರಜೆಯನ್ನು ಅರ್ಧದಲ್ಲಿ ಮೊಟಕುಗೊಳಿಸಿ ಬಂದಾಗ ಸ್ಟೋರಿನ ಬಾಗಿಲು ಹಾಕಲಾಗಿತ್ತು.

ಈ ಬಗ್ಗೆ ಕಂಪೆನಿಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಅನುಮತಿ ಮೇರೆಗೆ ಬಾಗಿಲನ್ನು ತೆರೆದಾಗ ಅಂಗಡಿಯ ಒಳಗಿನ ಸೊತ್ತುಗಳು ಅಸ್ತವ್ಯಸ್ತವಾಗಿತ್ತು. ಅವರು ಬೆಂಗಳೂರಿನಿಂದ ಬಂದು ಅಡಿಟ್‌ ಮಾಡಿ ಪರಿಶೀಲಿಸಿದಾಗ ಅಂಗಡಿಯಲ್ಲಿದ್ದ ಒಟ್ಟು 2,36,510 ರೂ. ಮೌಲ್ಯದ 7 ಮೊಬೈಲ್‌ ಫೋನ್‌ಗಳು ಮತ್ತು ಅಂಗಡಿಯ ಕ್ಯಾಶ್‌ ಡ್ರಾಯರ್‌ನಲ್ಲಿದ್ದ ನಗದು 58,100 ರೂ. ಇಲ್ಲದಿರುವುದು ಕಂಡುಬಂದಿತ್ತು.

ಈ ಬಗ್ಗೆ ಮೊಹಮ್ಮದ್‌ ಶಿಬಾನ್‌ಗೆ ಕರೆ ಮಾಡಿ ವಿಚಾರಿಸಿದಾಗ ತಾನು ತೆಗೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದು, ಅವುಗಳನ್ನು ವಾಪಸು ನೀಡುವುದಾಗಿ ಹೇಳಿದ್ದ. ಆದರೆ ವಾಪಸು ನೀಡದಿರುವದರಿಂದ ಸಂದೀಪ್‌ ಶೆಟ್ಟಿ ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next