Advertisement
ಕೇಂದ್ರ ಸರಕಾರ, ಕೇಂದ್ರ ನೌಕಾಯಾನ ಮಂತ್ರಾಲಯ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್ ಅವರು ಸೂಚಿಸಿದ ಸುರಕ್ಷೆ ಕ್ರಮಗಳನ್ನು ಅನುಸರಿಸಿ ಕನಿಷ್ಠ ಕಾರ್ಮಿಕರನ್ನು ಬಳಸಿಕೊಂಡು ಮಂಗಳೂರಿನಿಂದ ನೌಕೆಗಳಲ್ಲಿ ಲಕ್ಷದ್ವೀಪಕ್ಕೆ ಅಕ್ಕಿ, ತರಕಾರಿ ಮೊದ ಲಾದ ಆಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ. ಸಾಮಾನ್ಯವಾಗಿ ಲಕ್ಷದ್ವೀಪ ನಿವಾಸಿಗಳು ತಿಂಗಳಿಗೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಹಡಗಿನಲ್ಲಿ ಬಂದು ಅಗತ್ಯ ವಸ್ತುಗಳನ್ನು ಮಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿಸಿ ವಾಪಸಾಗುತ್ತಿದ್ದರು. ಆದರೆ ಕೊರೊನಾ ಲಾಕ್‌ಡೌನ್ ಆರಂಭವಾದ ತತ್ ಕ್ಷಣ ಹಡಗು ಸಂಚಾರವನ್ನು ಕೂಡ ಸ್ಥಗಿತಗೊಳಿಸಲು ಜಿಲ್ಲಾಡಳಿತ ಸೂಚಿಸಿತ್ತು. ಅನಂತರ ನೌಕೆಗಳಲ್ಲಿ ಲಕ್ಷದ್ವೀಪಕ್ಕೆ ಆಹಾರ ಸಾಮಗ್ರಿ ಸಾಗಿಸಲಾಯಿತು.
ಇಲ್ಲಿ ಪ್ರಸ್ತುತ ಲಕ್ಷದ್ವೀಪದೊಂದಿಗೆ ಮಾತ್ರ ಸರಕು ಸಾಗಾಟ ವ್ಯವಹಾರ ನಡೆಯುತ್ತಿದೆ. ಸುಮಾರು 2,000ದಿಂದ 2,500 ಮೆಟ್ರಿಕ್ ಟನ್ ಸಾಮರ್ಥ್ಯದ ಯಾಂತ್ರೀಕೃತ ನೌಕೆಗಳು ಮಾತ್ರ ಸಂಚರಿಸುತ್ತಿವೆ. ಹಲವು ವರ್ಷಗಳ ಹಿಂದೆ ಹಿಂದೆ 4,500ರಿಂದ 5,000 ಮೆಟ್ರಿಕ್ ಟನ್ ಸಾಮರ್ಥ್ಯದ ಸರಕು ಹಡಗುಗಳು ಗುಜರಾತ್‌ನಿಂದ ಸೋಡಾ ಪುಡಿ ಸರಕು ಹೊತ್ತು ಬರುತ್ತಿದ್ದವು.
Related Articles
ಲಾಕ್‌ಡೌನ್ ಸಮಯದಲ್ಲಿಯೂ ಕಾರವಾರ ಹಾಗೂ ಹಳೆ ಮಂಗಳೂರು ಬಂದರುಗಳಿಂದ 2.30 ಲಕ್ಷ ಮೆಟ್ರಿಕ್ ಟನ್ ಸರಕುಗಳನ್ನು ಸಾಗಾಟ ನಡೆಸಿ 3 ತಿಂಗಳುಗಳಲ್ಲಿ ಒಟ್ಟು 5.20 ಕೋಟಿ ರೂ. ಮೊತ್ತದ ಆದಾಯ ಗಳಿಸಲಾಗಿದೆ. ಇದು ಉಳಿದ ಸಮಯಕ್ಕೆ ಹೋಲಿಸಿದರೆ ದಾಖಲೆ.
- ಕೋಟ ಶ್ರೀನಿವಾಸ ಪೂಜಾರಿ, ಸಚಿವರು, ಬಂದರು ಇಲಾಖೆ
Advertisement