ನವದೆಹಲಿ : ಆಗಸ್ಟ್ ಒಂದು ತಿಂಗಳಲ್ಲಿ 2.3 ಮಿಲಿಯನ್ ಭಾರತೀಯ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿದ್ದು ಅದರಲ್ಲಿ 10 ಲಕ್ಷಕ್ಕೂ ಹೆಚ್ಚಿನ ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿ ಪಡೆಯುವ ಮೊದಲೇ ಪೂರ್ವಭಾವಿಯಾಗಿ ತೆಗೆದುಹಾಕಲಾಗಿದೆ ಎಂದು ವಾಟ್ಸಾಪ್ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.
ಇದು ಹಿಂದಿನ ತಿಂಗಳಿನಲ್ಲಿ ಮಾಡಲಾದ ನಿಷೇಧಕ್ಕಿಂತ ಕಡಿಮೆಯಾಗಿದೆ ಎಂದು ಹೇಳಿಕೊಂಡಿದೆ. ಅಂದಹಾಗೆ ಜುಲೈನಲ್ಲಿ 23.87 ಲಕ್ಷ ಭಾರತೀಯ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿತ್ತು. 2022 ಆಗಸ್ಟ್ 1 ರಿಂದ ಆಗಸ್ಟ್ 31ರ ನಡುವೆ 23,28,000 ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ.
ಕಳೆದ ವರ್ಷ ಜಾರಿಗೆ ಬಂದ ಕಠಿಣ ಐಟಿ ನಿಯಮಗಳ ಪ್ರಕಾರ ಕಾನೂನು ಉಲ್ಲಂಘನೆ ಸೇರಿದಂತೆ ಹಲವು ಕಟ್ಟುನಿಟ್ಟಿನ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಳೆದ ಜೂನ್‌ನಲ್ಲಿ 2.2 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧಿಸಿದೆ. ಇದಕ್ಕೂ ಮೊದಲು, ಮೇನಲ್ಲಿ 1.9 ಮಿಲಿಯನ್ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿದೆ, ಏಪ್ರಿಲ್‌ನಲ್ಲಿ 1.6 ಮಿಲಿಯನ್ ಮತ್ತು ಮಾರ್ಚ್‌ನಲ್ಲಿ 1.8 ಮಿಲಿಯನ್ ಖಾತೆಗಳನ್ನು ನಿಷೇದಿಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ವಾಟ್ಸಾಪ್ ವಕ್ತಾರರ ಹೇಳಿಕೆಯಂತೆ “ವಾಟ್ಸ್ಆ್ಯಪ್ ಬಳಕೆದಾರರಿಂದ -ಸುರಕ್ಷತಾ ವರದಿಯನ್ನು ಸ್ವೀಕರಿಸಿದೆ. ಜೊತೆಗೆ ದೂರುಗಳ ವಿವರಗಳನ್ನು ಪಡೆದಿದ್ದು, ಅದಕ್ಕೆ ಅನುಗುಣವಾದ ಕ್ರಮವನ್ನು ತೆಗೆದುಕೊಂಡಿದೆ, ಜೊತೆಗೆ ಪ್ಲಾಟ್‌ಫಾರ್ಮ್ ದುರುಪಯೋಗವನ್ನು ತಡೆಗಟ್ಟಲು ಕ್ರಮ ಕೈಗೊಂಡಿದೆ. ಖಾತೆಗಳಲ್ಲಿ ಅನಗತ್ಯ ಸಂದೇಶಗಳನ್ನು ಕಳುಹಿಸುವುದನ್ನು ತಡೆಯುವುದು ಅಥವಾ ಅಸಹಜವಾದ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ಗುರುತಿಸಿ ಸುಧಾರಿತ ಕ್ರಮವನ್ನು ವಾಟ್ಸ್ಆ್ಯಪ್ ಕೈಗೊಂಡಿದೆ ಎಂದಿದೆ.
ಇದನ್ನೂ ಓದಿ : ಗಾಂಧಿ ಜಯಂತಿ: ರಾಜ್ ಘಾಟ್ ನಲ್ಲಿ ಪುಷ್ಪ ನಮನ ಸಲ್ಲಿಸಿದ ಮೋದಿ, ಸೋನಿಯಾ, ಖರ್ಗೆ