ಉತ್ತರ ಪ್ರದೇಶ : ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ನಿವಾಸಿ ಅಜೀಂ ಮನ್ಸೂರಿ ಅವರ ಕನಸಿನ ಹುಡುಗಿ ಕೊನೆಗೂ ಸಿಕ್ಕಿದ್ದಾಳೆ ಅದರಂತೆ ಬರುವ ನವೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಮುಂದಾಗಿದ್ದಾರೆ.
ಮದುವೆ ತಯಾರಿಯಲ್ಲಿರುವ ಮನ್ಸೂರಿ ತನ್ನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲು ಬಯಸಿದ್ದಾರಂತೆ ಅದರಂತೆ ಅವರಿಗೆ ಅಹ್ವಾನ ಪತ್ರಿಕೆ ನೀಡಲು ದೆಹಲಿಗೆ ಹೊರಡಲಿದ್ದಾರಂತೆ.
ಮನ್ಸೂರಿ ಅವರು ಹಲವಾರು ವರ್ಷಗಳಿಂದ ವಧುವನ್ನು ಹುಡುಕುತ್ತಿದ್ದರು, ಏಕೆಂದರೆ ಅವರ ಎತ್ತರದ ಕೊರತೆಯಿಂದಾಗಿ ಜೋಡಿಯನ್ನು ಹುಡುಕುವುದೇ ಕಷ್ಟಕರವಾಗಿತ್ತು. ಅವರು ತಮ್ಮ ಮದುವೆಗೆ ಸಂಬಂಧಿಸಿದಂತೆ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. 2019 ರಲ್ಲಿ, ಅವರು ವಧುವನ್ನು ಹುಡುಕಲು ಸಹಾಯ ಮಾಡಲು ಅಂದಿನ ಯುಪಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಸಂಪರ್ಕಿಸಿದ್ದರಂತೆ.
ತನ್ನ ಜೀವನ ಸಂಗತಿಯ ಹುಡುಕಾಟದಲ್ಲಿದ್ದ ಮನ್ಸೂರಿ ತನ್ನ ಕನಸಿನ ಹುಡುಗಿಯನ್ನು ಮಾರ್ಚ್ 2021 ರಲ್ಲಿ ಭೇಟಿಯಾದರು. ಅದರಂತೆ ಹಾಪುರ್‌ನ 3 ಅಡಿ ಎತ್ತರದ ಬುಶಾರಾ ಅವರೊಂದಿಗೆ ಏಪ್ರಿಲ್ 2021 ರಲ್ಲಿ ಅಜೀಮ್ ಮನ್ಸೂರಿ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಬುಷಾರಾ ತನ್ನ ಪದವಿಯನ್ನು ಪೂರ್ಣಗೊಳಿಸಿದ ಬಳಿಕವೇ ಮದುವೆ ಆಗುವುದಾಗಿ ತಿಳಿಸಿದ ಕಾರಣ ಮದುವೆ ದಿನಾಂಕ ಮುಂದೂಡಲಾಗಿತ್ತು, ಈಗ ಬುಶಾರಾ ಅವರ ಪದವಿ ಶಿಕ್ಷಣ ಪೂರ್ಣಗೊಂಡಿದ್ದು ಅದರಂತೆ ನವೆಂಬರ್ ೭ ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ, ಸದ್ಯ ಮದುವೆ ತಯಾರಿಯಲ್ಲಿರುವ ಮನ್ಸೂರಿ ಮದುವೆಯಂದು ವಿಶೇಷವಾದ ಶೆರ್ವಾನಿಯಲ್ಲಿ ಮಿಂಚಲಿದ್ದಾರಂತೆ.
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ 2.3 ಅಡಿ ಎತ್ತರದ ಅಜೀಂ ಮನ್ಸೂರಿ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸೋಣ…
ಇದನ್ನೂ ಓದಿ : ಜಮ್ಮು – ಕಾಶ್ಮೀರದ ಕಿಶ್ತ್ವಾರ್ ಸುರಂಗದಲ್ಲಿ ಭೂಕುಸಿತ : 4 ಸಾವು, 6 ಮಂದಿಗೆ ಗಾಯ