Advertisement

ವಿದೇಶಿ ನಾಯಿ ತರಿಸಿಕೊಡುವುದಾಗಿ ಧಾರವಾಡದ ಯುವತಿಗೆ 2.25 ಲಕ್ಷ ರೂ. ವಂಚನೆ

06:36 PM Jun 05, 2021 | Team Udayavani |

ಹುಬ್ಬಳ್ಳಿ: ಧಾರವಾಡದ ಓರ್ವರಿಗೆ ಅಪರಿಚಿತನು ಸೈಬೀರಿಯನ್‌ ಹಸ್ಕಿ ತಳಿಯ ನಾಯಿಯನ್ನು ವಿದೇಶದಿಂದ ಮನೆಗೆ ತಲುಪಿಸುವುದಾಗಿ ನಂಬಿಸಿ, ಆನ್‌ಲೈನ್‌ ಮೂಲಕ 2.25 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

Advertisement

ಧಾರವಾಡದ ಯುವತಿಯು ಸೈಬೀರಿಯನ್‌ ಹಸ್ಕಿ ತಳಿಯ ನಾಯಿ ಖರೀದಿಸಲು ಗೂಗಲ್‌ ಕ್ರೋಮ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಅದರಲ್ಲಿ ಸಂಪರ್ಕಕ್ಕಾಗಿ ದೊರೆತ ಮೊಬೈಲ್‌ಗೆ ವಾಯ್ಸ ಕರೆ ಮಾಡಿ ವಿಚಾರಿಸಿದಾಗ, ಅಶಿಶ ಹಂಡಾ ಎಂಬಾತ ಸೈಬೀರಿಯನ್‌ ತಳಿಯ ನಾಯಿಯನ್ನು ಕಾರ್ಗೋ ಫ್ಲೈಟ್‌ ಕಳುಹಿಸಿ, ಕಾನ್ಪುರ ಏಜೆನ್ಸಿ ಮೂಲಕ ಮನೆಗೆ ತಲುಪಿಸುವುದಾಗಿ ನಂಬಿಸಿದ್ದಾನೆ.

ನಂತರ ವಿವಿಧ ಚಾರ್ಜ್‌ಗಳ ರೂಪದಲ್ಲಿ ಮೇ 28ರಿಂದ ಜೂ. 3ರ ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್‌ ಖಾತೆಗಳಿಂದ ಆನ್‌ಲೈನ್‌ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ­

ವೈದ್ಯಕೀಯ ತುರ್ತು ನೆಪದಲ್ಲಿ ವಂಚನೆ: ಅಪರಿಚಿತನೊಬ್ಬ ನಗರ ವೈದ್ಯರಿಗೆ ಅವರ ಗೆಳೆಯನ ಹ್ಯಾಕ್‌ ಮಾಡಿದ ಮೊಬೈಲ್‌ ಸಂಖ್ಯೆಯಿಂದ ವಾಟ್ಸ್‌ಆ್ಯಪ್‌ಗೆ ವೈದ್ಯಕೀಯ ತುರ್ತು ಸಲುವಾಗಿ ಹಣ ಬೇಕೆಂದು ಸಂದೇಶ ಕಳುಹಿಸಿ, ತನ್ನ ಎಸ್‌ಬಿಐ ಖಾತೆಗೆ 80 ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿದ ಘಟನೆ ನಡೆದಿದೆ. ಗೋಕುಲ ರಸ್ತೆ ಸಿಲ್ವರ್‌ ಟೌನ್‌ನ ವೈದ್ಯರೇ ಮೋಸಗೊಂಡಿದ್ದು, ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next