Advertisement
ಹುಬ್ಬಳ್ಳಿ: ವಾಕರಸಾ ಸಂಸ್ಥೆ ಎಲ್ಲಾ ಅಧಿಕಾರಿ ಹಾಗೂ ನೌಕರರ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಒಂದು ದಿನದ ವೇತನದ ಒಟ್ಟು ಮೊತ್ತ 2.03 ಕೋಟಿ ರೂ.ನೀಡಲಾಗಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಹೇಳಿದರು.
ಸಾರಿಗೆ ಸಂಸ್ಥೆ ಜನರ ಸೇವೆಗೆ ಇರುವಂತಹದ್ದು. ಸಂಸ್ಥೆ ಲಾಭಕ್ಕಿಂತ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದೆ. ಬಡಜನರು ಹಾಗೂ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಹೆಚ್ಚು ಅನುಕೂಲವಾಗುತ್ತಿದೆ. ಜನರು ಎರಡು ತಿಂಗಳಿಂದ ಸಾರಿಗೆ ಸಂಸ್ಥೆ ಸೌಲಭ್ಯವಿಲ್ಲದೆ ಹೆಚ್ಚು ತೊಂದರೆ ಅನುಭವಿಸಿದ್ದಾರೆ. 20ನೇ ತಾರೀಖೀನ ನಂತರ ಸರ್ಕಾರದ ಆದೇಶದನ್ವಯ ಬಸ್‌ಗಳ ಕಾರ್ಯಾಚರಣೆ ಆರಂಭಿಸಲಾಗುವುದು. ನಿಯಮಾವಳಿಗಳಂತೆ ಒಂದು ಬಸ್‌ನಲ್ಲಿ 25ರಿಂದ 30 ಜನರು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು. ಇದರಿಂದ ಸಂಸ್ಥೆಗೆ ಪ್ರತಿದಿನ 3ಕೋಟಿ ನಷ್ಟ ಸಂಭವಿಸಬಹುದು. ಆದರೂ ಸರ್ಕಾರದ ನಿರ್ದೇಶನದಂತೆ ಬಸ್ ಕಾರ್ಯಾಚರಣೆ ಆರಂಭಿಸಲಾಗುವುದು ಎಂದರು. ನೌಕರರ ವೇತನ ಪಾವತಿಗೆ ಸರ್ಕಾರದ ಸಹಾಯ ಅಗತ್ಯ. ಸಂಸ್ಥೆಯಲ್ಲಿ ಚಾಲಕರು, ನಿರ್ವಾಹಕರು ಸೇರಿದಂತೆ ಕೆಳ ಹಂತದ ಹಾಗೂ ಬಡತನ ಹಿನ್ನೆಲೆ ಇರುವ ನೌಕರರು ಹೆಚ್ಚಿದ್ದಾರೆ. ಆದರೂ ಉದಾರತೆಯಿಂದ ಒಂದು ದಿನದ ವೇತನ ನೀಡಿ ಸರ್ಕಾರದ ನೆರವಿಗೆ ನಿಂತಿದ್ದಾರೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಕಾರ್ಯ ಅಭಿನಂದನೀಯ. ಸಾರಿಗೆ ಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಸಂಸ್ಥೆಗೆ ಇನ್ನೂ ಹೆಚ್ಚು ನೆರವು ಪಡೆಯಲು ಪ್ರಯತ್ನಿಸುವುದಾಗಿ ಹೇಳಿದರು.
Related Articles
Advertisement