Advertisement

226 ರನ್ನುಗಳಿಂದ ಗೆದ್ದ  ವೆಸ್ಟ್‌ಇಂಡೀಸ್‌

06:00 AM Jun 12, 2018 | Team Udayavani |

ಪೋರ್ಟ್‌ ಆಫ್ ಸ್ಪೇನ್‌: ಪ್ರವಾಸಿ ಶ್ರೀಲಂಕಾ ವಿರುದ್ಧದ ಪೋರ್ಟ್‌ ಆಫ್ ಸ್ಪೇನ್‌ ಟೆಸ್ಟ್‌ ಪಂದ್ಯವನ್ನು ವೆಸ್ಟ್‌ ಇಂಡೀಸ್‌ 226 ರನ್ನುಗಳ ಬೃಹತ್‌ ಅಂತರದಿಂದ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Advertisement

ಗೆಲುವಿಗೆ 453 ರನ್ನುಗಳ ಕಠಿನ ಗುರಿ ಪಡೆದ ಶ್ರೀಲಂಕಾ 226ಕ್ಕೆ ಆಲೌಟ್‌ ಆಯಿತು. ಆರಂಭಕಾರ ಕುಸಲ್‌ ಮೆಂಡಿಸ್‌ 102 ರನ್‌ ಮಾಡಿ ಹೋರಾಟವೊಂದನ್ನು ಸಂಘಟಿಸಿದರೂ ಉಳಿದವರು ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾದರು. ಚೇಸ್‌ 4, ದೇವೇಂದ್ರ ಬಿಶೂ 3, ಗ್ಯಾಬ್ರಿಯಲ್‌ 2 ವಿಕೆಟ್‌ ಕಿತ್ತರು. ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ ಶತಕ ಹೊಡೆದಿದ್ದ ಶೇನ್‌ ಡೌರಿಚ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌ 
ವೆಸ್ಟ್‌ ಇಂಡೀಸ್‌-8 ವಿಕೆಟಿಗೆ 424 ಡಿಕ್ಲೇರ್‌ ಮತ್ತು 7 ವಿಕೆಟಿಗೆ 223 ಡಿಕ್ಕೇರ್‌. ಶ್ರೀಲಂಕಾ-185 ಮತ್ತು 226.

Advertisement

Udayavani is now on Telegram. Click here to join our channel and stay updated with the latest news.

Next