Advertisement

Nuke Plant;ಭಾರತದ ಮೊದಲ ದೇಶೀ ನಿರ್ಮಿತ ನ್ಯೂಕ್ಲಿಯರ್‌ ಘಟಕ ಕಾರ್ಯಾರಂಭ: ಪ್ರಧಾನಿ ಅಭಿನಂದನೆ

12:37 PM Sep 01, 2023 | Team Udayavani |

ನವದೆಹಲಿ: ಗುಜರಾತ್‌ ನ ಕಾಕ್ರಾಪರ್‌ ನಲ್ಲಿ ಭಾರತದ ಮೊದಲ ದೇಶಿ ನಿರ್ಮಿತ 700 ಮೆಗಾ ವ್ಯಾಟ್‌ ಸಾಮರ್ಥ್ಯದ ನ್ಯೂಕ್ಲಿಯರ್‌ ಇಂಧನ ಘಟಕ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯಾರಂಭಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:Droupadi Murmu: ನೆಹರು ಸ್ಮಾರಕ ವಸ್ತುಸಂಗ್ರಹಾಲಯದ ಮರುನಾಮಕರಣಕ್ಕೆ ರಾಷ್ಟ್ರಪತಿ ಅನುಮೋದನೆ

ಕಾಕ್ರಾಪರ್‌ ಆಟೋಮಿಕ್‌ ಪವರ್‌ ಪ್ರಾಜೆಕ್ಟ್‌ (KAPP) ಜೂನ್‌ 30ರಂದು ವಾಣಿಜ್ಯ ಬಳಕೆಯ ಕಾರ್ಯಾಚರಣೆ ಆರಂಭಿಸಿತ್ತು. ಆದರೆ ಇದೀಗ ನ್ಯೂಕ್ಲಿಯರ್‌ ಘಟಕ ಶೇ.90ರಷ್ಟ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯಾಚರಿಸುತ್ತಿರುವುದಾಗಿ ವರದಿ ತಿಳಿಸಿದೆ.

ಈ ಕುರಿತು X ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ” ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಗುಜರಾತ್‌ ನಲ್ಲಿ ದೇಶಿ ನಿರ್ಮಿತ 700 ಮೆಗಾ ವ್ಯಾಟ್‌ ಸಾಮರ್ಥ್ಯದ ಕಾಕ್ರಾಪರ್‌ ನ್ಯೂಕ್ಲಿಯರ್‌ ಪವರ್‌ ಪ್ಲ್ಯಾಂಟ್‌ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯಾಚರಿಸುತ್ತಿದ್ದು, ಇದಕ್ಕಾಗಿ ಶ್ರಮಿಸಿದ ನಮ್ಮ ವಿಜ್ಞಾನಿಗಳಿಗೂ ಹಾಗೂ ಇಂಜಿನಿಯರ್ಸ್‌ ಗಳಿಗೆ ಅಭಿನಂದನೆ ಸಲ್ಲಿಸುವುದಾಗಿ” ತಿಳಿಸಿದ್ದಾರೆ.

Advertisement

ನ್ಯೂಕ್ಲಿಯರ್‌ ಪವರ್‌ ಕಾರ್ಪೋರೇಶನ್‌ ಇಂಡಿಯಾ ಲಿಮಿಟೆಡ್‌ ( NPCIL) ಎರಡು 700 ಮೆಗಾ ವ್ಯಾಟ್‌ ಸಾಮರ್ಥ್ಯದ, ಭಾರೀ ನೀರಿನ ಒತ್ತಡದ ರಿಯಾಕ್ಟರ್‌ ಗಳನ್ನು ಕಾಕ್ರಾಪರ್‌ ನಲ್ಲಿ ನಿರ್ಮಿಸಿದ್ದು, ಇದು ಎರಡು 220 ಮೆಗಾ ವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಸ್ಥಾವರಕ್ಕೆ ನೆಲೆಯಾಗಲಿದೆ ಎಂದು ವರದಿ ವಿವರಿಸಿದೆ.

ನ್ಯೂಕ್ಲಿಯರ್‌ ಪವರ್‌ ಕಾರ್ಪೋರೇಶನ್‌ ಇಂಡಿಯಾ ಲಿಮಿಟೆಡ್‌ ದೇಶಾದ್ಯಂತ 700 ಮೆಗಾ ವ್ಯಾಟ್‌ ಸಾಮರ್ಥ್ಯದ Pressurised heavy water reactorsಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದು, ಇದಕ್ಕೆ ಹಣಕಾಸು ನೆರವು ಮತ್ತು ಆಡಳಿತಾತ್ಮಕ ಅನುಮತಿಗಾಗಿ ಕಾಯುತ್ತಿರುವುದಾಗಿ ವರದಿ ತಿಳಿಸಿದೆ.

ಹರ್ಯಾಣದ ಗೋರಖ್‌ ಪುರ್‌, ಮಧ್ಯಪ್ರದೇಶದ ಚುಟ್ಕಾ, ರಾಜಸ್ಥಾನದ ಬನ್ಸಾವಾರಾ ಹಾಗೂ ಕರ್ನಾಟಕದ ಕೈಗಾ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ದೇಶೀ ನಿರ್ಮಿತ 10 ಪಿಎಚ್‌ ಡಬ್ಲ್ಯುಆರ್‌ ಎಸ್‌ ಘಟಕ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next