ಡೊಂಬಿವಲಿ: ನಗರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ತುಳು- ಕನ್ನಡಿಗರೇ ಹೆಚ್ಚಾಗಿ ನೆಲೆಸಿರುವಂತಹ ಅಜೆªಪಾಡಾದ ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ಸಂಚಾಲಕತ್ವದಲ್ಲಿ ಇರುವಂತಹ ಅಯ್ಯಪ್ಪ ಮಂದಿರವು ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ನಿಂತಿದೆ. ಇಲ್ಲಿ ನಡೆಯುತ್ತಿರುವ ವಿಧಿವತ್ತಾದ ಧಾರ್ಮಿಕ ಕಾರ್ಯಕ್ರಮಗಳೆ ಇದಕ್ಕೆ ಕಾರಣ. ದೇವಾಲಯಗಳಿಗೆ ಬರುವ ಭಕ್ತರಿಗೆ ಬೇಕಾದಂತಹ ಉತ್ತಮ ರೀತಿಯ ಸವಲತ್ತು ನೀಡಿದರೆ ಇಲ್ಲಿ ಭಕ್ತಿ ಪ್ರಧಾನ ವಾತಾವರಣ ನಿರ್ಮಾಣವಾಗುವುದರಲ್ಲಿ ಸಂಶಯ ವಿಲ್ಲ. ಅದಕ್ಕಾಗಿ ನಾವೆಲ್ಲರೂ ಪ್ರಯತ್ನಿಸುತ್ತಿದ್ದೇವೆ. ಈ ರೀತಿಯ ಅಭಿವೃದ್ಧಿಯ ಮುಖೇನ ಧರ್ಮ ರಕ್ಷಣೆಗೆ ದಾರಿ ಮಾಡಿಕೊಡಬೇಕು. ಉತ್ತಮ ಕಾರ್ಯಕಾರಿ ಸಮಿತಿಯು ತನ್ನೆಲ್ಲ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದೆ. ಎಂದು ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಅಜೆªಪಾಡಾ ಅಧ್ಯಕ್ಷ ಸದಾನಂದ ಶೆಟ್ಟಿ ಅವರು ನುಡಿದರು.
ಇತ್ತೀಚೆಗೆ ಅಜೆªಪಾಡಾದ ಶ್ರೀ ಅಯ್ಯಪ್ಪ ಮಂದಿರದ ಸುಧರ್ಮ ಸಭಾಗೃಹದಲ್ಲಿ ನಡೆದ ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ 19ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂದಿರದ ಅಭಿವೃದ್ಧಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ನಿರಂತರವಾಗಿರಲಿ ಎಂದರು.
ಸುನಂದಾ ನಾರಾಯಣ ಶೆಟ್ಟಿ ಅವರ ದೇವರ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಜತೆ ಕಾರ್ಯದರ್ಶಿ ಹೇಮಂತ್ ಶೆಟ್ಟಿ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಯರಾಮ ಶೆಟ್ಟಿ ಅವರು ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಭವಿಷ್ಯದಲ್ಲಿ ಮಂದಿರದ ಅಭಿವೃದ್ಧಿಗೆ ಯಾವ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂಬುವುದನ್ನು ತಿಳಿಸಿದರು.
ಗೌರವ ಕೋಶಾಧಿಕಾರಿ ಜೆ.ಆರ್. ಅಮೀನ್ ಅವರು ತಯಾರಿಸಿದ ವಾರ್ಷಿಕ ಲೆಕ್ಕಪತ್ರವನ್ನು ಜತೆ ಕೋಶಾಧಿಕಾರಿ ವಿಶಾಂತ್ ರೈ ಮಂಡಿಸಿದರು. ಸಭೆಯಲ್ಲಿ ನಾಲ್ವರು ಸದಸ್ಯರನ್ನು ಅಧಿಕೃತವಾಗಿ ಸಮಿತಿಗೆ ಸೇರ್ಪಡೆಗೊಳಿಸಲಾಯಿತು. ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ದೇವಸ್ಥಾನದ ಮುಂದಿನ ಅಭಿವೃದ್ಧಿಯಲ್ಲಿ ನೂತನ ಸಮಿತಿಗೆ ಬಹಳಷ್ಟು ಜವಾಬ್ದಾರಿ ಇದೆ ಎಂದರು.
ಕ್ಷೇತ್ರದ ಹಿರಿಯ ಗುರುಸ್ವಾಮಿ ನಾರಾಯಣ ಶೆಟ್ಟಿ ಮಾತನಾಡಿ, ಮುಂಬರುವ ಮಹಾಪೂಜೆ ಹಾಗೂ ಮಾಲಾಧಾರಣೆಯ ಬಗ್ಗೆ ವಿವರಿಸಿ, 34 ವರ್ಷಗಳಿಂದ ದೇವಸ್ಥಾನ ಯಾವ ರೀತಿಯಲ್ಲಿ ಅಭಿವೃದ್ಧಿಗೊಳ್ಳುತ್ತಾ ಬಂದಿದೆ, ಅದಕ್ಕೆ ಕ್ಷೇತ್ರದ ಪಾವಿತ್ರÂತೆ, ಧಾರ್ಮಿಕ ವಿಧಿ-ವಿಧಾನಗಳು ಕಾರಣ ವಾಗಿರುವುದನ್ನು ತಿಳಿಸಿ, ಕಾರ್ಯಕಾರಿ ಸಮಿತಿಯನ್ನು ಅಭಿನಂದಿಸಿದರು.
ನೂತನ ಸದಸ್ಯ ಲಕ್ಷ್ಮಣ್ ಕಾಂಚನ್ ಮಾತನಾಡಿ, ಹಲವಾರು ಸಂಸ್ಥೆಗಳಲ್ಲಿ ಕಾರ್ಯವೆಸಗುತ್ತಿರುವ ನಾನು ಈ ದೇವಸ್ಥಾನದ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಸದಸ್ಯನಾಗಲು ಮುಂದಾದೆ ಎಂದರು. ಸಭಿಕರ ಪರವಾಗಿ ಸುರೇಶ್ ಶೆಟ್ಟಿ ಮಾತನಾಡಿ, ದೇವಸ್ಥಾನದ ಕಾರ್ಯಕಾರಿ ಸಮಿತಿಯು ಉತ್ತಮ ರೀತಿಯಲ್ಲಿ ಭಕ್ತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ. ಸಮಿತಿಯ ಕಾರ್ಯ ವೈಖರಿ ಅಭಿನಂದನೀಯವಾಗಿದೆ. ದೇವಸ್ಥಾನದ ಮುಂದಿನ ಯೋಜನೆ ಗಳಾದ ಶಿಲಾಮಯ ದೇವಸ್ಥಾನ ನಿರ್ಮಾಣಕ್ಕೆ ಈಗಾಗಲೇ ಅದೆಷ್ಟೋ ಭಕ್ತರು, ದಾನಿಗಳು ಸಹಕಾರ ನೀಡಿದ್ದಾರೆ. ಮುಂದೆಯೂ ಈ ಶಿಲಾಮಯ ದೇವಸ್ಥಾನ ನಿರ್ಮಾಣಕ್ಕೆ ಎಲ್ಲರ ಸಹಕಾರವಿರಲಿ ಎಂದರು.
ವೇದಿಕೆಯಲ್ಲಿ ಅಧ್ಯಕ್ಷ ಸದಾನಂದ ಶೆಟ್ಟಿ, ಕಾರ್ಯದರ್ಶಿ ಜಯರಾಮ ಶೆಟ್ಟಿ, ಕೋಶಾಧಿಕಾರಿ ಜೆ. ಆರ್. ಅಮೀನ್, ಗೌರವಾಧ್ಯಕ್ಷ ಮೋಹನ್ ರೈ, ತುಕಾರಾಮ ರೈ, ಉಪಾಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಶೇಖರ ಶೆಟ್ಟಿ, ಗುರುಸ್ವಾಮಿ ನಾರಾಯಣ ಶೆಟ್ಟಿ, ಜತೆ ಕಾರ್ಯದರ್ಶಿ ಹೇಮಂತ ಶೆಟ್ಟಿ ಉಪಸ್ಥಿತರಿದ್ದರು. ಹೇಮಂತ ಶೆಟ್ಟಿ ವಂದಿಸಿದರು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.