Advertisement

ಮುಂಬಯಿ ಸರಣಿ ಬಾಂಬ್‌ ಸ್ಫೋಟ: ಆರೋಪಿ ಕಾದಿರ್‌ ಅಹ್ಮದ್‌ ಸೆರೆ

03:10 PM Jul 08, 2017 | Team Udayavani |

ಲಕ್ನೋ : 257 ಜನರ ಸಾವಿಗೆ ಹಾಗೂ 700 ಕ್ಕೂ ಅಧಿಕ ಜನರು ಗಾಯಾಳುಗಳಾಗಲು ಕಾರಣವಾದ 1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದ ಕಾದಿರ್‌ ಅಹ್ಮದ್‌ ಎಂಬ ವ್ಯಕ್ತಿಯನ್ನು ಗುಜರಾತ್‌ ಮತ್ತು ಉತ್ತರ ಪ್ರದೇಶ ಎಟಿಎಸ್‌ ನವರು ನಜೀಬಾಬಾದ್‌ನಲ್ಲಿ  ಇಂದು ಶನಿವಾರ ಬಂಧಿಸಿದರು. 

Advertisement

ಮುಂಬಯಿ ಸರಣಿ ಬಾಂಬ್‌ ಸ್ಫೋಟ ಸಂಭವಿಸಿದ 24 ವರ್ಷಗಳ ತರುವಾಯ ವಿಶೇಷ ಟಾಟಾ ನ್ಯಾಯಾಲಯ ಕಳೆದ ಜೂನ್‌ 16ರಂದು ಅಬು ಸಲೇಂ ಮತ್ತು ಮುಸ್ತಫಾ ದೊಸ್ಸಾ ಸೇರಿದಂತೆ ಆರು ಪ್ರಮುಖ ಆರೋಪಿಗಳನ್ನು ದೋಷಿ ಎಂದು ಘೋಷಿಸಿ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿತ್ತು.

ದೊಸ್ಸಾ ನನ್ನು ಕೊಲೆ ಹಾಗೂ ಕ್ರಿಮಿನಲ್‌ ಸಂಚಿನ ದೋಷಿ ಎಂದು ಪರಿಗಣಿಸಲಾಗಿತ್ತಾದರೆ ಸಲೇಂ ನನ್ನು ಗುಜರಾತ್‌ನಿಂದ ಮುಂಬಯಿಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಿದ ಅಪರಾಧಕ್ಕಾಗಿ ದೋಷಿ ಎಂದು ಸಾರಲಾಗಿತ್ತು. 

ದೇಶದಲ್ಲಿ ಈ ತನಕ ನಡೆದಿರುವ ಅತ್ಯಂತ ಘೋರ ನರಹತ್ಯೆಯ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾದ ಮುಂಬಯಿ ಸರಣಿ ಸ್ಫೋಟದ ಮುಖ್ಯ ದೋಷಿಗಳೆಂದರೆ : 2005ರಲ್ಲಿ ಪೋರ್ಚುಗಲ್‌ನಿಂದ ಭಾರತಕ್ಕೆ ಗಡೀಪಾರುಗೊಂಡಿದ್ದ ಅಬು ಸಲೇಂ, ಯುಎಇಯಿಂದ ಭಾರತಕ್ಕೆ ಗಡೀಪಾರುಗೊಂಡಿದ್ದ ಮುಸ್ತಫಾ ದೊಸ್ಸಾ, ಮೊಹಮ್ಮದ್‌ ತಾಹೀರ್‌ ಮರ್ಚಂಟ್‌ ಅಲಿಯಾಸ್‌ ತಾಹಿರ್‌ ಟಕ್ಲಾ, ಕರೀಮುಲ್ಲಾ ಖಾನ್‌, ರಿಯಾಜ್‌ ಸಿದ್ದಿಕಿ ಮತ್ತು ಫಿರೋಜ್‌ ಅಬ್ದುಲ್‌ ರಶೀದ್‌ ಖಾನ್‌. 

ಮುಸ್ತಫಾ ದೊಸ್ಸಾ ಕಳೆದ ಜೂನ್‌ 28ರಂದು ಮುಂಬಯಿ ಜೆಜೆ ಆಸ್ಪತ್ರೆಯಲ್ಲಿ  ಹೃತ್‌ಕ್ರಿಯೆ ನಿಂತು ಮೃತಪಟ್ಟಿದ್ದ. 

Advertisement
Advertisement

Udayavani is now on Telegram. Click here to join our channel and stay updated with the latest news.

Next