ಜಾಮ್‌ನಗರ್: ವಜಾಗೊಂಡಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ಗೆ 1990ರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ದಂತೆ ಜೀವಾವಧಿ ಶಿಕ್ಷೆ ವಿಧಿಸಿ ಗುಜರಾತ್‌ನ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ.
ಇವರ ಜತೆಗೆ ಪೊಲೀಸ್ ಕಾನ್‌ಸ್ಟೇಬಲ್ ಪ್ರವೀಣ್‌ಸಿನ್ಹ ಝಾಲಾ ಅವರಿಗೂ ಜೀವಾವಧಿ ಶಿಕ್ಷೆ ನೀಡಲಾಗಿದ್ದು, ಇತರೆ ಐವರು ಪೊಲೀಸರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
29 ವರ್ಷಗಳ ಹಿಂದೆ ಹೆಚ್ಚುವರಿ ಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಜೀವ್ ಭಟ್ ನೇತೃತ್ವದ ತಂಡವು ಜಮ್ಜೋಧ್‌ಪುರದಲ್ಲಿ ನಡೆದ ಕೋಮು ಗಲಭೆ ಸಂಬಂಧ 150 ಮಂದಿಯನ್ನು ಬಂಧಿಸಿತ್ತು. ಬಂಧಿತರಲ್ಲಿ ಒಬ್ಬನಾದ ಪ್ರಭುದಾಸ್ ವೈಷ್ಣಾನಿ ಬಿಡುಗಡೆಯ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದ್ದ. ಜೈಲಿನಲ್ಲಿ ಚಿತ್ರಹಿಂಸೆ ನೀಡಿ ಆತನನ್ನು ಕೊಲ್ಲಲಾಯಿತು ಎಂದು ಪ್ರಭುದಾಸ್‌ನ ಸಹೋದರ ಆರೋಪಿಸಿ, ಸಂಜೀವ್ ಭಟ್ ಹಾಗೂ ಇತರೆ 6 ಪೊಲೀಸ್ ಅಧಿಕಾ ರಿಗಳ ವಿರುದ್ಧ ಕೇಸು ದಾಖಲಿ ಸಿದ್ದರು.
ಪ್ರಸ್ತುತ ಸಂಜೀವ್ ಭಟ್ ಅವರು ಪ್ರತ್ಯೇಕ ಪ್ರಕರಣವೊಂದರಲ್ಲಿ, ಮಾದಕದ್ರವ್ಯ ಹೊಂದಿರು ವುದಾಗಿ ಯುವಕ ನೊಬ್ಬನ ವಿರುದ್ಧ ಸುಳ್ಳು ಕೇಸು ದಾಖಲಿಸಿದ ಪ್ರಕರಣ ಸಂಬಂಧ ಬಂಧಿತರಾಗಿದ್ದಾರೆ.
ಮೋದಿ ವಿರುದ್ಧ ಸುಪ್ರೀಂಗೆ: 2002ರ ಗೋಧ್ರೋತ್ತರ ನರಮೇಧ ಪ್ರಕರಣದಲ್ಲಿ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರ ಪಾತ್ರವಿತ್ತು ಎಂದು ಆರೋಪಿಸಿ ಇದೇ ಸಂಜೀವ್ ಭಟ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ವಿಶೇಷ ತನಿಖಾ ತಂಡವು ಇವರ ಆರೋಪವನ್ನು ತಳ್ಳಿಹಾಕಿತ್ತು.