Advertisement

27 ಮಹಿಳೆಯರ ಸಹಿತ 197 ಹಾಲಿ ಸಂಸದರು ಸೀಟು ಉಳಿಸಿಕೊಳ್ಳುವಲ್ಲಿ ಸಫ‌ಲ

10:04 AM May 25, 2019 | Team Udayavani |

ಹೊಸದಿಲ್ಲಿ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 27 ಮಹಿಳಾ ಸಂಸದರ ಸಹಿತ ಒಟ್ಟು 197 ಹಾಲಿ ಸಂಸದರು ತಮ್ಮ ಸೀಟು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸೀಟು ಉಳಿಸಿಕೊಂಡಿರುವ 145 ಹಾಲಿ ಬಿಜೆಪಿ ಸಂಸದರಲ್ಲಿ ಕಿರಣ್‌ ರಿಜಿಜು, ಜುವಾಲ್‌ ಓರಂ ರಾಜಾ ಮೋಹನ್‌ ಸಿಂಗ್‌, ನಿತಿನ್‌ ಗಡ್ಕರಿಮತ್ತು ಬಾಬುಲ್‌ ಸುಪ್ರಿಯೋ ಪ್ರಮುಖರಾಗಿದ್ದಾರೆ.

ಬಿಹಾರದಲ್ಲಿ 12 ಬಿಜೆಪಿ ಸಂಸದರು ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ ಸುಪೋಲ್‌ ಸಂಸದ ಸೀಟು ಕಳೆದುಕೊಂಡಿದ್ದಾರೆ.

ಕಾಂಗ್ರೆಸ್‌ ಕಣಕ್ಕಿಳಿಸಿದ್ದ ಪಟ್ನಾ ಸಾಹಿಬ್‌ ಮಾಜಿ ಬಿಜೆಪಿ ಸಂಸದ, ಬಾಲಿವುಡ್‌ ನಟ, ಶತ್ರುಘ್ನ ಸಿನ್ಹಾ ಸೋತಿದ್ದಾರೆ.

ಜೆಡಿಯು ನ ಇಬ್ಬರು ಹಾಲಿ ಸಂಸದರು ತಮ್ಮ ಸೀಟು ಉಳಿಸಿಕೊಂಡಿದ್ದಾರೆ. ಮೂವರು ಆರ್‌ಜೆಡಿ ಸಂಸದರು ಸೋತಿದ್ದಾರೆ.

Advertisement

ದಿಲ್ಲಿಯ ಐವರು ಹಾಲಿ ಸಂಸದರು ದಾಖಲೆ ಅಂತರದ ವಿಜಯ ದಾಖಲಿಸಿ ಸೀಟು ಉಳಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next