Advertisement

ಬಿಎಂಸಿ ವಿಜೇತರಲ್ಲಿ ಕ್ರಿಮಿನಲ್‌ ಕೇಸ್‌ ಎದುರಿಸುತ್ತಿರುವವರು 43 ಮಂದಿ

12:20 PM Mar 02, 2017 | udayavani editorial |

ಮುಂಬಯಿ : ಈಚೆಗಷ್ಟೇ ಮುಗಿದಿರುವ ಬೃಹನ್ಮುಂಬಯಿ ಮುನಿಸಿಪಲ್‌ ಕಾರ್ಪೊರೇಶನ್‌ ಚುನಾವಣೆಯಲ್ಲಿ  ವಿಜೇತರಾಗಿರುವವರಲ್ಲಿ ಸುಮಾರು 43 ಮಂದಿ (ಶೇ.19 ಮಂದಿ) ಕ್ರಿಮಿನಲ್‌ ಕೇಸುಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

Advertisement

ಅಸೋಸಿಯೇಶನ್‌ ಫಾರ್‌ ಡೆಮೋಕ್ರಾಟಿಕ್‌ ರಿಫಾರ್ಮ್ (ಎಡಿಆರ್‌) ಮತ್ತು ಮಹಾರಾಷ್ಟ್ರ ಎಲೆಕ್ಷನ್‌ ವಾಚ್‌ ಸಂಘಟನೆಗಳು ಬಿಎಂಸಿಗೆ ಚುನಾಯಿತರಾಗಿರುವ 27 ಮಂದಿಯ ಪೈಕಿ 225 ಮಂದಿಯ ಅಫಿದಾವಿತ್‌ಗಳನ್ನು ವಿಶ್ಲೇಷಿಸಿದ್ದು ಈ ಪೈಕಿ ಶೇ. 19 ಮಂದಿ ಕೊಲೆ ಯತ್ನ, ಅತ್ಯಾಚಾರವೇ ಮೊದಲಾದ ಗಂಭೀರ ಬಗೆಯ ಕ್ರಿಮಿನಲ್‌ ಕೇಸುಗಳನ್ನು ಎದುರಿಸುತ್ತಿರುವುದು ಕಂಡುಬಂದಿದೆ.

ಮತದಾರರು ದೊಡ್ಡ ಪ್ರಮಾಣದಲ್ಲಿ ಮತ ಹಾಕಲು ಹೋಗುವ ತನಕ ರಾಜಕೀಯ ಪಕ್ಷಗಳು ಹಣ ಹಾಗೂ ತೋಳ್ಬಲ ಇರುವ  ಅಭ್ಯರ್ಥಿಗಳನ್ನು ಮಾತ್ರವೇ ಕಣಕ್ಕೆ ಇಳಿಸುತ್ತವೆ ಎಂದು ಮಹಾರಾಷ್ಟ್ರ ಎಲೆಕ್ಷನ್‌ ವಾಚ್‌ ಸಂಘಟನೆ ಸಂಚಾಲಕರಾಗಿರುವ ಶರತ್‌ ಕುಮಾರ್‌ ಹೇಳುತ್ತಾರೆ. 

225 ವಿಜೇತರ ಅಫಿದಾವಿತ್‌ ಗಳನ್ನು ವಿಶ್ಲೇಷಿಸಲಾಗಿದ್ದು ಇವುಗಳಲ್ಲಿ ಶಿವಸೇನೆಯ 22, ಬಿಜೆಪಿಯ 11, ಎಂಎನ್‌ಎಸ್‌ನ , ಕಾಂಗ್ರೆಸ್‌ನ 2 ಮತ್ತು ಎನ್‌ಸಿಪಿ, ಎಸ್‌ಪಿ ಮತುತ ಆಲ್‌ ಇಂಡಿಯಾ ಮಜ್‌ಲಿಸ್‌ ಎ ಇತ್ತೆಹಾದುಲ್‌ ಮುಸ್ಲಿಮೀನ್‌ (ಎಂಐಎಂ) ನ ತಲಾ ಒಂದು ಹಾಗೂ ಇಬ್ಬರು ಪಕ್ಷೇತರ ವಿಜೇತರ ಗಂಭೀರ ಕ್ರಿಮಿನಲ್‌ ಕೇಸುಗಳನ್ನು ಎದುರಿಸುತ್ತಿರುವುದು ಗೊತ್ತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next