Advertisement

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

08:39 AM Jun 18, 2024 | Team Udayavani |

ಮುಂಬೈ: ಮುಂಬರುವ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ಬಳಿಕ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಆಡಳಿತಾರೂಢ ಎನ್‌ಸಿಪಿಯ 18 ​​ರಿಂದ 19 ಶಾಸಕರು ತಮ್ಮ ಪಕ್ಷವನ್ನು ಸೇರಲಿದ್ದಾರೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎಸ್‌ಪಿ) ನಾಯಕ ರೋಹಿತ್ ಪವಾರ್ ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್, 2023 ರಲ್ಲಿ ಪಕ್ಷ ವಿಭಜನೆಯಾದ ನಂತರ ಪಕ್ಷದ ಸಂಸ್ಥಾಪಕ ಶರದ್ ಪವಾರ್ ಮತ್ತು ಇತರ ಹಿರಿಯ ನಾಯಕರ ವಿರುದ್ಧ ಎಂದಿಗೂ ಕೆಟ್ಟದಾಗಿ ಮಾತನಾಡದ ಹಲವಾರು ಎನ್‌ಸಿಪಿ ಶಾಸಕರು ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಅವರೆಲ್ಲರೂ ಮುಂದಿನ ಮುಂಗಾರು ಅಧಿವೇಶನ ಮುಗಿಯುವವರೆಗೆ ಅಜಿತ್ ಬಣದಲ್ಲೇ ಇದ್ದು ಅಧಿವೇಶನದಲ್ಲಿ ಭಾಗಿಯಾಗಿ ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣವನ್ನು ಪಡೆದುಕೊಳ್ಳಲು ಕಾಯುತ್ತಿದ್ದಾರೆ ಇದಾದ ಬಳಿಕ ಪಕ್ಷ ತೊರೆದು ನಮ್ಮ ಪಕ್ಷವನ್ನು ಸೇರಿಕೊಳ್ಳಲಿದ್ದಾರೆ ಎಂದು ರೋಹಿತ್ ಪವಾರ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ಅಜಿತ್ ಪವಾರ್ ಅವರೊಂದಿಗೆ ಎನ್‌ಸಿಪಿ ಯ 18 ರಿಂದ 19 ಶಾಸಕರು ಸಂಪರ್ಕದಲ್ಲಿದ್ದಾರೆ ಅವರೆಲ್ಲರೂ ಮುಂಗಾರು ಅಧಿವೇಶನ ಮುಗಿದ ಬಳಿಕ ಪಕ್ಷದಿಂದ ಹೊರ ಬರಲಿದ್ದಾರೆ ಶರದ್ ಪವಾರ್ ಮತ್ತು ಇತರ ಎನ್‌ಸಿಪಿ (ಎಸ್‌ಪಿ) ನಾಯಕರು ಯಾರನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅಹ್ಮದ್‌ನಗರ ಜಿಲ್ಲೆಯ ಕರ್ಜತ್-ಜಮಖೇಡ್‌ನ ಶಾಸಕ ಹೇಳಿಕೆ ನೀಡಿದ್ದಾರೆ.

ವಿಧಾನಮಂಡಲದ ಮುಂಗಾರು ಅಧಿವೇಶನ ಜೂನ್ 27 ರಂದು ಪ್ರಾರಂಭವಾಗಿ ಜುಲೈ 12 ರಂದು ಕೊನೆಗೊಳ್ಳಲಿದೆ.

2019 ರ ಚುನಾವಣೆಯಲ್ಲಿ ಅವಿಭಜಿತ ಎನ್‌ಸಿಪಿ 54 ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು. ಜುಲೈ 2023 ರಲ್ಲಿ ಪಕ್ಷವು ವಿಭಜನೆಯಾದಾಗ, ಅಜಿತ್ ಪವಾರ್ ನೇತೃತ್ವದ ಬಣವು ಸುಮಾರು 40 ಶಾಸಕರ ಬೆಂಬಲ ಇರುವುದಾಗಿ ಹೇಳಿಕೊಂಡಿತ್ತು.

Advertisement

ಇದನ್ನೂ ಓದಿ: Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Advertisement

Udayavani is now on Telegram. Click here to join our channel and stay updated with the latest news.

Next