Advertisement

19 ಲಕ್ಷ ಇವಿಎಂ ಯಂತ್ರಗಳು ಕಾಣೆ : ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್ ನಿಯೋಗ

01:52 PM May 08, 2022 | Team Udayavani |

ಬೆಂಗಳೂರು: ದೇಶದಲ್ಲಿ ಸುಮಾರು 19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾಗಿದ್ದು ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಧೀಶರ ನೇತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದ ಕಾಂಗ್ರೆಸ್ ನಿಯೋಗ ಭಾನುವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ತನಿಖೆಗೆ ಒತ್ತಾಯಿಸಿತು.

Advertisement

19 ಲಕ್ಷ ಇವಿಎಂ ಯಂತ್ರಗಳ ಕಾಣೆಯಾಗಿರುವ ಬಗ್ಗೆ 2,750 ಪುಟಗಳ ದಾಖಲೆಯನ್ನು ಸಲ್ಲಿಸಿ, ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸಮನ್ಸ್ ನೀಡುವಂತೆ ಮನವಿ ಮಾಡಿತು. ಸ್ವತಂತ್ರವಾದ ತನಿಖೆ ನಡೆಯಬೇಕು ಎಂದು ಮನವಿ ಮಾಡಿತು.

ಬಹಳಷ್ಟು ಜನರಿಗೆ ಅನುಮಾನ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಕೆ. ಪಾಟೀಲ್, ಇಂದು ನಮ್ಮ ಸಭಾಧ್ಯಕ್ಷರನ್ನು ಭೇಟಿ ಮಾಡಿದ್ದೇವೆ.  19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾಗಿರುವ ಬಗ್ಗೆ ಪುರಾವೆಗಳು ಮತ್ತು ಕಾಗದ ಪತ್ರಗಳನ್ನು ನೀಡಿದ್ದೇವೆ. ವಿಧಾನಸಭೆಯಲ್ಲಿ ಚುನಾವಣಾ ಸುಧಾರಣೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ‌. ನಾನು ಸಹ ಚರ್ಚೆಯಲ್ಲಿ ಭಾಗಿಯಾಗಿದ್ದೆ. ಹಲವಾರು ಸದಸ್ಯರು ತಮ್ಮ ಅಭಿಪ್ರಾಯ ತಿಳಿಸಿದ್ದರು. ನಾನು ಮಾತಾಡುವಾಗ ಸದನದ ನಾಲ್ಕೈದು ವಿಷಯಗಳನ್ನು ಪ್ರಸ್ತಾಪ ಮಾಡಿದ್ದೆ. ಮೊದಲನೆದ್ದು EVM ಯಂತ್ರಗಳು
ಕಾಣೆಯಾಗಿರಯವ ಬಗ್ಗೆ ಪ್ರಸ್ತಾಪ ಮಾಡಿದ್ದೆ‌. ನ್ಯಾಯಾಲಯಗಳಲ್ಲಿ ಎಲೆಕ್ಷನ್ ಅರ್ಜಿಗಳ ವಿಚಾರಣೆಗೆ ತಡವಾಗುವವ ಬಗ್ಗೆ ಇವಿಎಂ ಮಿಷನ್ ಹ್ಯಾಕ್ ಮಾಡುವ ಬಗ್ಗೆ ಬಹಳಷ್ಟು ಜನರಿಗೆ ಅನುಮಾನವಿದೆ. ಇದನ್ನು ಹೋಗಲಾಡಿಬೇಕಾದರೆ ಎಥಿಕಲ್ ಹ್ಯಾಕ್ಥನ್ ಆಗಬೇಕು ಎಂದರು.

ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ತನಿಖೆ ಮಾಡಬೇಕು. ಚುನಾವಣೆಗಳ ಅಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಿದ್ದೆ‌,19 ಲಕ್ಷ ಇವಿಎಂ ಮಿಷನ್ ಗಳನ್ನು ಕಾಣೆಯಾಗಿರುವ ಬಗ್ಗೆ ಕೇಂದ್ರ ಸರ್ಕಾರ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ. ಇದಕ್ಕೆ ಪೂರಕವಾಗಿ 2750 ಪುಟಗಳ ಕಾಗದ ಪತ್ರಗಳನ್ನು ಸಲ್ಲಿಕೆ ಮಾಡಿದ್ದೇನೆ. ಮನೊರಂಜನ್ ಸಂತೋಷ್ ರಾಯ್ ಪಿಎಲ್ ಮಾಡಿದ್ದರು. ಅದರ ಮಾಹಿತಿಗಳನ್ನು ಸ್ಪೀಕರ್ ಅವರಿಗೆ ಮಾಡಿದ್ದೇನೆ ಎಂದರು.

Advertisement

ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿ, ಪಿಎಸ್ ಐ ಹಗರಣ, 40% ಹಗರಣ, ಸಂತೋಷ ಪಾಟೀಲ್ ಆತ್ಮಹತ್ಯೆ, ದಿಂಗಾಲೇಶ್ವರ ಶ್ರೀಗಳ ಆರೋಪದ ನಂತರವೂ ಅವರಿಗೆ ಯಾವ ನೈತಿಕತೆಯಿದೆ ಸಿದ್ದರಾಮಯ್ಯ ಬಗ್ಗೆ ಮಾತನಾಡಲು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next