ಪಾಂಡವಪುರ: ಬೀಡಿ, ಸಿಗರೇಟು ಹಾಗೂ ತಂಬಾಕುಸೇವನೆಯಿಂದ ಮುಕ್ತಗೊಳಿಸುವ ಸಲುವಾಗಿ ಪಟ್ಟಣದ ಅನೇಕ ಅಂಗಡಿಗಳು ಹಾಗೂ ಸಾರ್ವಜನಿಕಸ್ಥಳಗಳಲ್ಲಿ ಧೂಮಪಾನ ಮಾಡುವ ವ್ಯಕ್ತಿಗಳ ಮೇಲೆದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು19 ಕೇಸ್ ದಾಖಲಿಸಿ, ಸುಮಾರು 2,200 ರೂ. ದಂಡವಿಧಿಸಿರುವ ಘಟನೆ ಭಾನುವಾರ ನಡೆದಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಸೂಚನೆ ಮೇರೆಗೆ ಮಂಡ್ಯ ಜಿಲ್ಲಾತಂಬಾಕು ನಿಯಂತ್ರಣ ಕೋಶದ ಮೇಲ್ವಿಚಾರಕತಿಮ್ಮರಾಜು ಹಾಗೂ ಆರೋಗ್ಯ ಇಲಾಖೆಯಹಿರಿಯ ಮೇಲ್ವಿಚಾರಕ ಪುಟ್ಟಸ್ವಾಮಿ ನೇತೃತ್ವದಆರೋಗ್ಯ ಸಿಬ್ಬಂದಿ ವರ್ಗ ಪಟ್ಟಣದಲ್ಲಿ ಅನೇಕಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣ, ದೊಡ್ಡಿಬೀದಿ,ಪುರಸಭೆ ರಸ್ತೆ, ಎನ್.ಎಂ.ರಸ್ತೆ, ಹಳೇ ಎಸಿ ಕಚೇರಿರಸ್ತೆಯಲ್ಲಿರುವ ಅಂಗಡಿಗಳ ಮೇಲೆ ದಾಳಿನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳುಹಾಗೂ ಸಿಬ್ಬಂದಿ ವರ್ಗ, ಅಂಗಡಿಯಲ್ಲಿ ಮಾರಾಟಮಾಡುತ್ತಿದ್ದ ಬೀಡಿ, ಸಿಗರೇಟ್, ತಂಬಾಕುಪದಾರ್ಥಗಳನ್ನು ವಶಕ್ಕೆ ತೆಗೆದುಕೊಳ್ಳುವಮೂಲಕ ಕೇಸ್ ದಾಖಲಿಸಿಕೊಂಡು, ಸ್ಥಳದಲ್ಲೇದಂಡ ವಿಧಿಸಿದರು.
ದಂಡ: ಅಂಗಡಿ ಮುಂಭಾಗ, ರಸ್ತೆ ಬದಿಯಲ್ಲಿಹಾಗೂ ಜನಸಂದಣಿ ಸ್ಥಳಗಳಲ್ಲಿ ಬೀಡಿ, ಸಿಗರೇಟುಸೇದುತ್ತಿದ್ದ ವ್ಯಕ್ತಿಗಳಿಗೆ ಸ್ಥಳದಲ್ಲಿಯೇ ಎಚ್ಚರಿಕೆ ನೀಡಿ,ಧೂಮಪಾನ ಮಾಡಬಾರದೆಂದು ಅರಿವುಮೂಡಿಸಿ, ದಂಡ ವಸೂಲಿ ಮಾಡಿದ್ದಾರೆ.
ತಂಬಾಕು ಮುಕ್ತ ಗ್ರಾಮ: ತಂಬಾಕು ಮುಕ್ತ ಮಂಡ್ಯಜಿಲ್ಲೆ ಗುರಿಯನ್ನು ಈಡೇರಿಸುವ ಉದ್ದೇಶದಿಂದಪಾಂಡವಪುರ ತಾಲೂಕಿನಲ್ಲಿ ಪ್ರಥಮವಾಗಿ ಪ್ರಸಿದ್ಧಯಾತ್ರಾಸ್ಥಳ ಮೇಲುಕೋಟೆ ಗ್ರಾಮವನ್ನು ತಂಬಾಕುಮುಕ್ತ ಗ್ರಾಮವನ್ನಾಗಿ ಪರಿವರ್ತನೆ ಮಾಡಲುಆರೋಗ್ಯ ಇಲಾಖೆ ತೀರ್ಮಾನಿಸಿದೆ.
ಸಕಲ ಸಿದ್ಧತೆ: ಮೇಲುಕೋಟೆ ಗ್ರಾಮದಲ್ಲಿಆರೋಗ್ಯ ಇಲಾಖೆ ಅಧಿಕಾರಿಗಳು ತಂಬಾಕುಮುಕ್ತ ಗ್ರಾಮ ಮಾಡಲು ಪ್ರಚಾರನಡೆಸುವುದು, ಮನೆ ಮನೆಗೆ ತೆರಳಿ ಮನವಿಮಾಡಿಕೊಳ್ಳುವುದು, ಡಂಗೂರ ಸಾರುವುದು,ಕರಪತ್ರ ಅಂಟಿಸುವುದು, ಗ್ರಾಪಂಸಹಕಾರದೊಂದಿಗೆ ಮೇಲುಕೋಟೆ ಗ್ರಾಮವನ್ನುತಂಬಾಕು ಮುಕ್ತ ಗ್ರಾಮ ಮಾಡಲು ನಿರ್ಧರಿಸಿ,ಕಾರ್ಯಚಟುವಟಿಕೆ ಪ್ರಾರಂಭಿಸಲು ಸಕಲಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಕಾನೂನು ಉಲ್ಲಂಘಸಿದರೆ 2 ವರ್ಷ ಜೈಲು ಶಿಕ್ಷೆಹಾಗೂ 1 ಸಾವಿರ ರೂ.ಗಳವರೆಗೆ ದಂಡವಿಧಿಸಲಾಗುವುದು. ಪುನಃ ಎರಡನೇ ಬಾರಿ ತಪ್ಪುಮಾಡಿದರೆ 5 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರರೂ. ದಂಡ ವಿಧಿಸುವ ಕಾನೂನು ಇದೆ ಎಂದುಅಧಿಕಾರಿಗಳು ಎಚ್ಚರಿಸಿದರು.