Advertisement

19.69 ಲಕ್ಷ ರೂ. ಉಳಿತಾಯ ಬಜೆಟ್‌

03:58 PM Apr 01, 2022 | Team Udayavani |

ಗಜೇಂದ್ರಗಡ: ನರೇಗಲ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಚಲವಾದಿ ಅವರು 2022-23ನೇ ಸಾಲಿನ 19.692 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿದರು.

Advertisement

ಬಜೆಟ್‌ ಸಭೆಯಲ್ಲಿ ಮಾತನಾಡಿದ ಆಡಳಿತ ಪಕ್ಷದ ನಾಮನಿರ್ದೇಶಿತ ಸದಸ್ಯ ಬಸವರಾಜ ವಂಕಲಕುಂಟಿ, ಪಟ್ಟಣದ ಐತಿಹಾಸಿಕ ಹಿರೇಕೆರೆಯನ್ನು ಗ್ರಾಮಸ್ಥರು ನೆಲ-ಜಲ ಸಂರಕ್ಷಣಾ ಸಮಿತಿ ರಚನೆ ಮಾಡಿಕೊಂಡು ಸಮುದಾಯದ ಸಹಭಾಗಿತ್ವ ಹಾಗೂ ರೈತರ ಸಹಕಾರದಲ್ಲಿ ಹೂಳು ತೆಗೆಯುವ ಮೂಲಕ ಅಭಿವೃದ್ಧಿ ಮಾಡಿದ್ದರು. ಆದರೆ, ಈಗ ಮತ್ತೆ ಮುಳ್ಳಿನ ಕಂಟಿಗಳು ಬೆಳೆದು ಕೆರೆಯ ಸೌಂದರ್ಯ ಹಾಳಾಗಿದೆ. ಆದ್ದರಿಂದ, ಗ್ರಾಮಸ್ಥರ ಜೀವ ಜಲದ ಮೂಲವಾದ ಕೆರೆಯ ಅಭಿವೃದ್ಧಿ ಹಾಗೂ ಸ್ವತ್ಛತೆಗೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮೊದಲ ಆದ್ಯತೆ ನೀಡಿಬೇಕೆಂದರು.

ಪಟ್ಟಣ ಪಂಚಾಯಿತಿ ವಿರೋಧ ಪಕ್ಷದ ನಾಯಕ ದಾವೂದ್‌ಅಲಿ ಕುದರಿ ಮಾತನಾಡಿ, ಪಟ್ಟಣವನ್ನು ಸ್ವಚ್ಛವಾಗಿಡುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರ ವೇತನವನ್ನು ಸರಿಯಾದ ಸಮಯಕ್ಕೆ ಕೊಡಬೇಕೆಂದು ಆಗ್ರಹಿಸಿದರು.

ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲಾಗುವ ವಿಷಯಗಳ ಬಗ್ಗೆ ಪಟ್ಟಣ ಪಂಚಾಯ್ತಿ ಸದಸ್ಯರು ಕೇಳಿದರೆ ಸರಿಯಾದ ಮಾಹಿತಿಯನ್ನು ಇಲ್ಲಿನ ಸಿಬ್ಬಂದಿ ನಿಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಸದಸ್ಯ ರಾಚಯ್ಯ ಮಾಲಗಿತ್ತಿಮಠ ಮಾತನಾಡಿ, ಮೂಲಭೂತ ಸೌಕರ್ಯ ಎಂದರೆ ಚರಂಡಿ, ರಸ್ತೆಗಳು ಅಷ್ಟೇ ಅಂದುಕೊಳ್ಳಬಾರದು. ಸಾರ್ವಜನಿಕರ ಕುಡಿಯುವ ನೀರಿಗೂ ಮಹತ್ವ ನೀಡಬೇಕು. ಹಲವು ಶುದ್ಧ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ಸದಸ್ಯರು ಹೇಳಿದರು ಸಹ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಕುಮಾರಸ್ವಾಮಿ ಕೋರಧಾನ್ಯಮಠ, ಫಕೀರಪ್ಪ ಮಳ್ಳಿ, ಮುತ್ತಪ್ಪ ನೂಲ್ಕಿ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಶ್ರೀಶೈಲಪ್ಪ ಬಂಡಿಹಾಳ, ಬಸೀರಾಬಾನು ನದಾಫ್‌, ವಿಶಾಲಾಕ್ಷಿ ಹೊಸಮನಿ, ಜ್ಯೋತಿ ಪಾಯಪ್ಪಗೌಡ್ರ, ಮಂಜುಳಾ ಹುರಳಿ, ಮಲಿಕಸಾಬ ರೋಣದ, ಈರಪ್ಪ ಜೋಗಿ, ಅಕ್ಕಮ್ಮ ಮಣ್ಣೊಡ್ಡರ, ಶಕುಂತಲಾ ಧರ್ಮಾಯತ, ಎಸ್‌.ಎ.ಜಕ್ಕಲಿ, ವೆಂಕಟೇಶ ಮಡಿವಾಳರ, ಪರಶುರಾಮ ರಾಂಪೂರ ಇದ್ದರು.

ಮುಖ್ಯಾಧಿಕಾರಿ ಗೈರು-ಆಕ್ರೋಶ: ಈ ಹಿಂದೆ ನಡೆದ ಬಜೆಟ್‌ ಪೂರ್ವಭಾವಿ ಸಭೆಗೆ ಆರೋಗ್ಯದ ನೆಪವೊಡ್ಡಿ ಗೈರಾಗಿದ್ದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಹನುಮಂತಪ್ಪ ಮಣ್ಣವಡ್ಡರ, ಇದೀಗ ಬಜೆಟ್‌ ಮಂಡನೆಗೂ ಗೈರಾಗಿದ್ದಾರೆ. ಚುನಾಯಿತ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಫಲಾಯನ ಮಾಡಿದ್ದಾರೆ. ಮುಖ್ಯಾ ಧಿಕಾರಿಗಳ ಅನುಪಸ್ಥಿತಿಯಲ್ಲಿ ಬಜೆಟ್‌ ಮಂಡನೆ ಸಮಂಜಸವಲ್ಲ ಎಂದು ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next