Advertisement

ಕೋವಿಡ್-19 ತೀವ್ರತೆಯ ದೇಶದ ಜನಸಾಮಾನ್ಯರಲ್ಲಿ ನಿರ್ಲಕ್ಷ್ಯ ಭಾವನೆ ಹೆಚ್ಚಾಗುತ್ತಿದೆಯೇ?

04:17 PM Mar 19, 2020 | keerthan |

ಮಣಿಪಾಲ: ಕೋವಿಡ್-19 ವೈರಸ್ ಹರಡುವ ತೀವ್ರತೆಯ ಕುರಿತಾದಂತೆ ದೇಶದ ಜನಸಾಮಾನ್ಯರಲ್ಲಿ ನಿರ್ಲಕ್ಷ್ಯ ಭಾವನೆ ಹೆಚ್ಚಾಗುತ್ತಿದೆಯೇ?- ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.

Advertisement

ಲೋನ್ ವಾಕರ್: ಹೌದು ಏಕೆಂದರೆ ಕೊರೋನ ವಿರುದ್ಧ ಕೈಗೊಂಡ ಕಠಿಣ ಕ್ರಮಗಳು ಕೇವಲ ಜನಸಾಮಾನ್ಯರಿಗೆ ಮಾತ್ರ ಸೀಮಿತವಾಗಿದೆ.ಸ್ವತಃ ಸರಕಾರಿ ಅಧಿಕಾರಿಗಳು(ಮುಖ್ಯಮಂತ್ರಿ ಸಹಿತ)ಕೈಗೊಂಡ ಕ್ರಮಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿಲ್ಲ.ಹೀಗೆ ಅಸಡ್ಡೆ ಮುಂದುವರಿದಲ್ಲಿ ಈ ರೋಗ ಮುಂದಿನ ದಿನಗಳಲ್ಲಿ ಬಹು ದೊಡ್ಡ ಅಪಾಯ ತಂದೊಡ್ಡಬಹುದು.

ಬೀಜಾಡಿ ನರಸಿಂಹ: ಹೆಚ್ಚಿನ ಪ್ರಕರಣಗಳು ವಿದೇಶಿದಿಂದ ಬಂದವರಿಂದಲೇ ಹರಡಿರುವುದರಿಂದ ಎಲ್ಲಾ ಏರ್‌ಪೋರ್ಟ್ ಗಳಲ್ಲಿ ಮೊದಲೇ ಕಠಿಣವಾದ ಮುಂಜಾಗ್ರತಾ ಕ್ರಮ ವಹಿಸಿದ್ದರೆ ಇಷ್ಟರ ಮಟ್ಟಿಗೆ ಹರಡುತ್ತಿರಲಿಲ್ಲ. ಆದರೂ ಹೆಚ್ಚಿನ ಜನರಲ್ಲಿ ಆತಂಕ ಇದೆ. ಇವರಿಗೆ ಸರಿಯಾದ ಮುಂಜಾಗ್ರತಾ ಕ್ರಮದ ಮಾಹಿತಿ ಇಲ್ಲ.

ಸಣ್ಣಮಾರಪ್ಪ. ಚಂಗಾವರ; ಭಾರತದಲ್ಲಿ ಬಿಸಿಲು ಹೆಚ್ಚು ಇರುವುದರಿಂದ ಬೇಗ ಹರಡುವುದಿಲ್ಲ, ನಮ್ಮ ಸಂಸ್ಕೃತಿಯನ್ನು ಬೇರೆಯವರು ಪಾಲಿಸುತ್ತಿದ್ದಾರೆ ಎನ್ನುವ ಮನಸ್ಥಿತಿ ಜನರಲ್ಲಿದೆ. ನಿಯಂತ್ರಣ ತರಬೇಕಾದ ಸರ್ಕಾರಗಳು ಎಡವಿದಂತೆ ಕಾಣುತ್ತಿದೆ. ಈ ಎಲ್ಲ ಕಾರಣಗಳಿಂದ ಜನಸಾಮಾನ್ಯರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ.

ಸಂತೋಷ್ ಡಿಸೋಜಾ: ಕೊರೋನಾ ವೈರಸ್ 25° ಉಷ್ಣಾಂಶದಲ್ಲಿ ‌ಸಾಯುತ್ತದೆ ಎಂದು ಕೆಲವು ರಾಜಕಾರಣಿಗಳು ‌ಮತ್ತು ಸರಕಾರದ ‌ಪ್ರತಿನಿಧಿಗಳು ಹೇಳುತ್ತಿದ್ದಾರೆ. ಒಬ್ಬರೊಬ್ಬರು ಒಂದೊಂದು ಹೇಳಿಕೆ ‌ನೀಡುತ್ತಿದ್ದಾರೆ. ಇದು ನಿಜವೇ ಎಂದು ಕೇಂದ್ರ ಸರಕಾರ ಸ್ಪಷ್ಟ ಪಡಿಸಲಿ. ಇದರ ಬಗ್ಗೆ ‌ಆನೇಕ ಜನರಿಗೆ ಗೊಂದಲ ಇದೆ.

Advertisement

ಮಧು ಮಧು: ಹೌದು ಇದು ನಗರ ಪ್ರದೇಶಗಳಲ್ಲಿ ಮಾತ್ರ ಕರೋನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಯಾವುದೇ ಮುನ್ನೆಚ್ಚರಿಕೆ ಕ್ರಮಗಳು ಜನಸಾಮಾನ್ಯರಿಗೆ ತಿಳಿಸುವ ಕೆಲಸಗಳು ನಡೆಯುತ್ತಿಲ್ಲ ಸ್ವಚ್ಛತೆ ಯಾವುದೇ ಅದ್ಯತೆಗಳಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next