ಬೆಂಗಳೂರು: ನರೇಗಾ ಯೋಜನೆಯಲ್ಲಿ ಕೇಂದ್ರದಿಂದ 1,861 ಕೋ. ರೂ. ಬಿಡುಗಡೆ ಆಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಬಿಡುಗಡೆ ಯಾಗಿರುವ ಹಣದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ 1,039 ಕೋ.ರೂ. ಬಾಕಿ ಕೊಡಬೇಕಿದೆ. ರಾಜ್ಯ ಸರಕಾರದಿಂದಲೂ 257 ಕೋ. ರೂ. ಅನುದಾನ ಬಾಕಿ ಇದೆ. ಹಿಂದೆ ಕೆಲವರಿಗೆ ಕೂಲಿ ಮತ್ತು ಸಲಕರಣೆಗಳ ಬಿಲ್ ಬಾಕಿ ಇತ್ತು. ಎಲ್ಲವನ್ನೂ ಪಾವತಿಸಿದ ಬಳಿಕ 1,077ಕೋ.ರೂ. ಬಾಕಿ ಉಳಿಯಲಿದೆ ಎಂದರು.
ರಾಜ್ಯದಲ್ಲಿ ಒಬ್ಬ ಕೂಲಿ ಕಾರ್ಮಿಕನಿಗೆ 275 ರೂ. ವರೆಗೆ ಕೂಲಿ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿಕೆ ನರೇಗಾ ಹಣದ ಬಳಕೆ ಮಾಡಿಕೊಳೆ¤àವೆ ಎಂದು ಹೇಳಿದರು. ಕೊರೊನಾದಿಂದಾಗಿ ನರೇಗಾ ಕೂಲಿ ಹಣದಲ್ಲಿ ಹೆಚ್ಚಳ ಆಗಿದೆ. ಇನ್ನು ಮುಂದೆ ನರೇಗಾ ಕಾಮಗಾರಿಗಳನ್ನು ಚುರುಕು ಗೊಳಿಸಲಾಗುವುದು. ಸಾಮಾ ಜಿಕ ಅಂತರ ಪಾಲಿಸಿ ದುಡಿಮೆ ಮಾಡಿ ಸುತ್ತೇವೆ. ಕೋವಿಡ್ 19ದಿಂದ ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರಿಗೆ ಸರಕಾರ ಎಲ್ಲ ರೀತಿ ಯಲ್ಲೂ ನೆರವಾಗಲಿದೆ ಎಂದರು.
ಜನಪ್ರತಿನಿಧಿಗಳ ವೇತನದ ಕಡಿತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿ ಈ ಬಗ್ಗೆ ಹೇಳಿದ್ದಾರೆ. ಜನಪ್ರತಿನಿಧಿಗಳ ವೇತನದಲ್ಲಿ ಕಡಿತ ಮಾಡಿದರೆ ನಮ್ಮೆಲ್ಲರ ಬೆಂಬಲ ಇರಲಿದೆ. ಅಂತಿಮ ತೀರ್ಮಾನ ಮುಖ್ಯ ಮಂತ್ರಿಯವರದೇ. ನಾನು ನನ್ನ ನಾಲ್ಕು ತಿಂಗಳ ವೇತನ ನೀಡಿದ್ದೇನೆ ಎಂದು ತಿಳಿಸಿದರು.ಪಂಚಾಯತ್ ರಾಜ್ ತಿದ್ದುಪಡಿ ಮಸೂದೆ ಬಗ್ಗೆ ಸರಕಾರದಿಂದ ಅಧ್ಯಾದೇಶ ಹೊರಡಿಸಲಾಗಿದೆ. ಸರಕಾರದ ಅಧ್ಯಾದೇಶಕ್ಕೆ ರಾಜ್ಯ ಪಾಲರ ಒಪ್ಪಿಗೆ ಸಿಕ್ಕಿದೆ ಎಂದರು.
ಡಿಕೆಶಿಗೆ ತಿರುಗೇಟು
ನಾನು ಎಲ್ಲಿ ಮಲಗಿದ್ದೇನೆ ಅಂತ ಡಿ.ಕೆ..ಶಿವಕುಮಾರ್ ಕೇಳಿದ್ದಾರೆ. ಅವರಿಗೆ ತೃಪ್ತಿಪಡಿಸಲು ನಾನು ಎಲ್ಲಿ ಮಲಗಿದ್ದೇನೆ? ಎಲ್ಲಿ ಓಡಾಡಿದ್ದೇನೆ ಎಂದು ಹೇಳಲು ಹೋಗುವುದಿಲ್ಲ. ನಾನು ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಹೊತ್ತಿದ್ದೇನೆ. ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಎಲ್ಲಿದೆ? ಎಂದು ಅವರು ಹೇಳಿದರೆ ಅದನ್ನು ಬಗೆಹರಿಸುತ್ತೇವೆ. ಮನೆಯಲ್ಲಿ ಮಲಗಿದ್ದರೆ ನರೇಗಾ ಹಣ ತರಲಿಕ್ಕೆ ಆಗಗುತ್ತಿತ್ತೇ ಎಂದು ಈಶ್ವರಪ್ಪ ಪ್ರಶ್ನಿಸಿದರು.