Advertisement
ಶುಕ್ರವಾರ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆ, ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಜಲಧಾರೆ ಯೋಜನೆ ಅಭಿಪ್ರಾಯ ಸಂಗ್ರಹಣೆಯ ವಿಡಿಯೋ ಸಂವಾದದಲ್ಲಿ ಅವರು ಈ ವಿಷಯ ತಿಳಿಸಿದರು.
Related Articles
Advertisement
ಸದರಿ ಯೋಜನೆಯಲ್ಲಿ 2052ನೇ ಇಸ್ವಿಯ ಹಂತದಲ್ಲಿನ ಜನಸಂಖ್ಯೆ ಆಧಾರದ ದೂರಗಾಮಿ ಚಿಂತನೆಯಿಂದ ಯೋಜನೆ ರೂಪಿಸಲಾಗಿದೆ. 2011ರ ಜನಗಣತಿ ಅನ್ವಯ 2022ರ ಅವಧಿ ಗೆ 17.77 ಲಕ್ಷ, 2037ರ ಅವ ಧಿಗೆ 20.59 ಲಕ್ಷ ಹಾಗೂ 2052ರ ಅವಧಿಗೆ 23.42 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಸುವ ಯೋಜನಾ ವರದಿಯನ್ನು ಸ್ತುಪ್ ಕನ್ಸಲ್ಟಂಟ್ ವತಿಯಿಂದ ಸಿದ್ಧಪಡಿಸಲಾಗಿದೆ. 2022ನೇ ವರ್ಷದಲ್ಲಿ 1.58 ಟಿಎಂಸಿ, 2037 ನೇ ವರ್ಷದಲ್ಲಿ 1.83 ಟಿಎಂಸಿ ಹಾಗೂ 2052ನೇ ವರ್ಷದಲ್ಲಿ 2.08 ಟಿಎಂಸಿ ಅಡಿ ನೀರಿನ ಅಗತ್ಯ ಬೀಳಲಿದೆ ಎಂದು ಯೋಜನೆಯಲ್ಲಿ ಅಳವಡಿಸಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ಮೇಲ್ ಜಲ ಸಂಗ್ರಹಗಾರಗಳಿಗೆ (ಒಎಚ್‌ಟಿ) ನೀರು ಪೂರೈಸುವ ಮತ್ತು ನೀರಿನ ಮಿತವ್ಯಯ ಹಾಗೂ ನಿರ್ವಹಣೆಗಾಗಿ ಸ್ಕಾಡಾ ತಾಂತ್ರಿಕತೆ ಅಳವಡಿಸಲಾಗುತ್ತದೆ. ಸ್ತುಪ್ ಕನ್ಸಲ್ಟಂಟ್ ಸಂಸ್ಥೆ ಯೋಜನೆ ಸಿದ್ಧಪಡಿಸಿದೆ ಎಂದು ಯೋಜನೆ ಅಧಿಕಾರಿಗಳು ವಿವರಿಸಿದರು.
ಈ ಸಂದರ್ಭದಲ್ಲಿ ಶಾಸಕ ಅರುಣ ಶಹಾಪುರ ವಿಡಿಯೋ ಸಂವಾದದ ಮೂಲಕ ಜಿಲ್ಲೆಯ ವಲಸಿಗ ಸಮುದಾಯ ಬಿಟ್ಟು ಹೋಗದಂತೆ ನೋಡಿಕೊಳ್ಳಲು, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಅಧಿಕೃಕೃತ ಜನಸಂಖ್ಯೆ ಅಂಕಿಅಂಶ ಸಂಗ್ರಹಣೆಗೆ, ಗ್ರಾÂವಿಟಿ ಮೂಲಕ ನೀರು ಪೂರೈಕೆಯ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸುವಂತೆ ಸಲಹೆ ನೀಡಿದರು. ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾತನಾಡಿ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಯೋಜನೆ ಸಾಧಕ-ಬಾಧಕ ಕುರಿತು ಅಭಿಪ್ರಾಯ ಪಡೆಯಬೇಕು. ಯೋಜನೆ ಜಾರಿಗಾಗಿ ರೈತರ ಸಹಕಾರ, ಭೂಸ್ವಾ ಧೀನ ಪರಿಹಾರ, ಪೈಪ್ ಲೈನ್ ಅಳವಡಿಕೆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಪೂರ್ವಭಾವಿ ಪರಿಶೀಲನೆ ನಡೆಸುವಂತೆ ಹೇಳಿದರು.