Advertisement
ರಥಬೀದಿ ಗೆಳೆಯರು ಬಳಕೆದಾರರ ವೇದಿಕೆ ಕಚೇರಿಯಲ್ಲಿ ಗಾಂಧೀ ಜಯಂತಿ ನಿಮಿತ್ತ ಮಂಗಳವಾರ ಆಯೋಜಿಸಿದ್ದ ವಿಷ್ಣು ಭಟ್ಟ ಶಾಸ್ತ್ರಿ ಗೋಡ್ಸೆಯ “ನನ್ನ ಪ್ರವಾಸ’ ಗ್ರಂಥದ ಕುರಿತು ಅದರ ಅನುವಾದಕರಾದ ಭಾಸ್ಕರ ಮಯ್ಯ ಅವರು ಮಾತನಾಡಿ, ಪುಣೆ ವರಸಾಯಿಯಲ್ಲಿ ಜನಿಸಿದ ಒಬ್ಬ ಸಾಮಾನ್ಯ ಪುರೋಹಿತ ವಿಷ್ಣು ಭಟ್ಟ ಗೋಡ್ಸೆ ಪ್ರಥಮ ಸ್ವಾತಂತ್ರÂ ಸಂಗ್ರಾಮದಲ್ಲಿ ನಡೆದ ಘಟನೆಯನ್ನು ಕಣ್ಣಾರೆ ಕಂಡು ದಾಖಲಿಸಿರುವುದು ವಿಶೇಷ ಎಂದರು.ಬಡತನದಿಂದಾಗಿ ಹಣ ಸಂಪಾದನೆಗೆಂದು ಗ್ವಾಲಿಯರ್‌ಗೆ ತೆರಳಿದ ವಿಷ್ಣು ಭಟ್ಟರಿಗೆ ದಕ್ಕಿದ ಸಂಭಾವನೆಗಳನ್ನು ದಂಗೆಕೋರರು, ಬ್ರಿಟಿಷ್ ಸಿಪಾಯಿ ಗಳು ದೋಚಿದರು. ಝಾನ್ಸಿ ರಾಣಿ ಲಕ್ಷ್ಮೀಬಾಯಿ ದೈನಂದಿನ ಚಟುವಟಿಕೆಗಳನ್ನು ದಾಖಲಿಸಿದ ವಿಷ್ಣು ಭಟ್ಟರು ಕೊನೆಗೆ ಗಂಗಾಜಲವನ್ನು ಹೊತ್ತುಕೊಂಡು ಬಂದು ಅದರಲ್ಲಿ ತಂದೆ ತಾಯಿಗಳಿಗೆ ಸ್ನಾನ ಮಾಡಿಸಿ ತೃಪ್ತರಾದರು.
Related Articles
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಾತ್ಯಾಟೋಪೆ, ಮಂಗಲ್‌ಪಾಂಡೆ, ಅಸಂಖ್ಯಾಕ ಸಿಪಾಯಿಗಳು ಬ್ರಾಹ್ಮಣರಾಗಿದ್ದರು. ಆದರೆ ಈಗ ಎಲ್ಲದಕ್ಕೂ ಬ್ರಾಹ್ಮಣರೇ ಕಾರಣವೆಂಬ ದ್ವೇಷ ಜಗಜ್ಜಾಹೀರಾಗಿದೆ. ಕಥಾನಕದಲ್ಲಿ ಬರುವ “ಕರಿಯರು’ ಎಂಬ ಶಬ್ದ “ಭಾರತೀಯ’ರನ್ನುದ್ದೇಶಿಸಿ ಇದೆ ವಿನಾ ಈಗಿನಂತ ಪರಿಶಿಷ್ಟರು ಎಂಬ ಅರ್ಥದಲ್ಲಲ್ಲ ಎಂದು ಡಾ|ಮಯ್ಯ ಹೇಳಿದರು.
Advertisement
ಗಾಂಧಿಯನ್ನು ಚರಕಕ್ಕೆ ಕಟ್ಟಿಹಾಕಿದವರು!ಒಂದನೆಯ ಮಹಾಯುದ್ಧದ ವೇಳೆ ಭಾರತೀಯರನ್ನು ಬ್ರಿಟಿಷ್ ಸೇನೆಗೆ ಸೇರಿಸುವಲ್ಲಿ ಪಾತ್ರ ವಹಿಸಿದ್ದ ಗಾಂಧೀಜಿ ಎರಡನೆಯ ಮಹಾಯುದ್ಧದಲ್ಲಿ ಬ್ರಿಟಿಷರ ವಿರುದ್ಧ “ಭಾರತ ಬಿಟ್ಟು ತೊಲಗಿ’ ಚಳವಳಿ ನಡೆಸಿದ್ದರು. ಇದು ಒಂದಕ್ಕೊಂದು ವಿರೋಧಾಭಾಸವಲ್ಲ. ವಿಕಾಸದ ಮೆಟ್ಟಿಲು. ತನಗೆ ಸರಿ ಕಂಡದ್ದನ್ನು ಧೈರ್ಯದಿಂದ ಹೇಳಿದವರು ಗಾಂಧಿ. ಮಾರ್ಕ್ಸ್ವಾದದಂತೆ ಗಾಂಧೀಯಿಸಮ್‌ನ್ನು ಅವರ ಅನುಯಾಯಿಗಳು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾದರು. ಅನಂತಮೂರ್ತಿ, ಆಶಿಶ್ ನಂದಿ, ಪ್ರಸನ್ನ ಅವರು ಗಾಂಧಿಯನ್ನು ಚರಕಕ್ಕೆ ಕಟ್ಟಿ ಹಾಕಿದರು. ಸ್ವಾತಂತ್ರಾéಅನಂತರ ರೈಲು, ತಂತಿ ಜತೆಗೆ ಗ್ರಾಮಸ್ವರಾಜ್‌ಗಾಗಿ ನೆಹರೂಗೆ ಪತ್ರ ಬರೆದರೂ ಸ್ಪಂದಿಸಲಿಲ್ಲ. 1947ರ ಘಟನೆಯೆಂದರೆ ಬ್ರಿಟಿಷರಿಂದ ಭೂಮಾಲಕರು, ಬಂಡವಾಳಶಾಹಿಗಳಿಗೆ ದೇಶವನ್ನು ಹಸ್ತಾಂತರ ಮಾಡಿದ್ದಷ್ಟೆ. ಮುಂದಿನ ಸ್ವಾತಂತ್ರ್ಯ ಜಾರಿಗೊಳಿಸಲು ಭೂಮಾಲಕರಿಗೂ, ಕಾಂಗ್ರೆಸ್‌ನವರಿಗೂ ಗಾಂಧೀಜಿ ಬೇಡವಾಗಿದ್ದರು. 1947ರ ಪ್ರಾರ್ಥನಾ ಸಭೆಯಲ್ಲಿ “ಎಲ್ಲರೂ ಕೈಬಿಡಬಹುದು. ದೇವರು ಕೈಬಿಡಲಾರ’ ಎಂದು ಹೇಳಿದ್ದರು. 120 ವರ್ಷ ಬದುಕುತ್ತೇನೆಂದವರು ಇಂತಹ ಪರಿಸ್ಥಿತಿಗೆ ತಲುಪಿದ್ದರು.
– ಡಾ| ಗುಂಡ್ಮಿ ಭಾಸ್ಕರ ಮಯ್ಯ ಅಯೋಧ್ಯೆಯಲ್ಲಿ 400-500 ರಾಮಮಂದಿರಗಳಿದ್ದವು
ವಿಷ್ಣು ಭಟ್ಟ ಗೋಡ್ಸೆಯವರು 1857ರ ಅವಧಿಯಲ್ಲಿ ಅಯೋಧ್ಯೆಯಲ್ಲಿ 400-500 ರಾಮಮಂದಿರಗಳಿದ್ದವು. ಹನುಮಾನ್ ಮಂದಿರವಿತ್ತು. 8 ಕೃಷ್ಣ ಮಂದಿರಗಳಿದ್ದವು. ಅಲ್ಲಿನ ಮಂಗಗಳಿಗೆ ಜಿಲೇಬಿ ಅಂದರೆ ಇಷ್ಟ. ರಾಮಜನ್ಮಭೂಮಿ ಮೈದಾನವಾಗಿದೆ. 50-40 ಗಜಗಳ ಸುತ್ತಳತೆಯ ಗೋಡೆಗಳಿದ್ದವು. ಕೌಸಲ್ಯ ಮಂದಿರದಲ್ಲಿಯೂ ಮೈದಾನವಿದೆ. ರಾಮನವಮಿ ದಿನ ಲಕ್ಷಾಂತರ ಜನರು ಸೇರುತ್ತಿದ್ದರು ಎಂದು ದಾಖಲಿಸಿದ್ದಾರೆ.
– ಪ್ರೊ| ಮುರಲೀಧರ ಉಪಾಧ್ಯ ಹಿರಿಯಡಕ ಡಾ| ಗುಂಡ್ಮಿ ಭಾಸ್ಕರ ಮಯ್ಯ ಮಾತನಾಡಿದರು.