ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1857 ಕೋವಿಡ್ ಪಾಸಿಟಿವ್ ಪ್ರಕಣಗಳು ಪತ್ತೆಯಾಗಿದ್ದು, 30 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಆ.12) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 1950 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2865067ಕ್ಕೆ ತಲುಪಿದೆ.
ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 22728 ಇದೆ. ಕೋವಿಡ್ ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 1.15 % ಹಾಗೂ ಸೋಂಕಿನಿಂದ ಮೃತ ಪಟ್ಟವರ ಶೇಕಡಾವಾರು ಪ್ರಮಾಣ 1.61% ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-11, ಬಳ್ಳಾರಿ-3, ಬೆಳಗಾವಿ-45, ಬೆಂಗಳೂರು ಗ್ರಾಮಾಂತರ-44, ಬೆಂಗಳೂರು ನಗರ-321, ಬೀದರ್ -0, ಚಾಮರಾಜನಗರ-22, ಚಿಕ್ಕಬಳ್ಳಾಪುರ-9, ಚಿಕ್ಕಮಗಳೂರು-107, ಚಿತ್ರದುರ್ಗ-30, ದಕ್ಷಿಣ ಕನ್ನಡ-475, ದಾವಣಗೆರೆ-20, ಧಾರವಾಡ-9, ಗದಗ-4, ಹಾಸನ-123, ಹಾವೇರಿ-1, ಕಲಬುರಗಿ-4, ಕೊಡಗು-93, ಕೋಲಾರ-24, ಕೊಪ್ಪಳ-0, ಮಂಡ್ಯ-46, ಮೈಸೂರು-116, ರಾಯಚೂರು-2, ರಾಮನಗರ-3, ಶಿವಮೊಗ್ಗ-50, ತುಮಕೂರು-34, ಉಡುಪಿ-191, ಉತ್ತರ ಕನ್ನಡ-68, ವಿಜಯಪುರ-2, ಯಾದಗಿರಿ-0.