Advertisement

18,322 ಕಾರ್ಮಿಕರಿಗೆ ತಲುಪಿಲ್ಲ 2,000

12:08 PM May 01, 2020 | mahesh |

ಚಿಕ್ಕಬಳ್ಳಾಪುರ: ಕೋವಿಡ್ ಸಂಕಷ್ಟದಿಂದ ಪಾರಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್‌ಡೌನ್‌ ಘೋಷಿಸಿವೆ. ಇದರ ಪರಿಣಾಮ ಒಪ್ಪೊತ್ತಿನ ಊಟಕ್ಕೆ ದುಡಿದು ತಿನ್ನುತ್ತಿದ್ದ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಬದುಕು ತತ್ತರವಾಗಿದೆ. ಆದರೆ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಿಗೆ ನೆರವಾಗಲು ಕಾರ್ಮಿಕ ಆಯುಕ್ತಾಲಯ ನೀಡುತ್ತಿರುವ 2,000 ರೂ. ಠೇವಣಿ ಜಿಲ್ಲೆಯ 18,322 ಮಂದಿ ಕಾರ್ಮಿಕರಿಗೆ ಇನ್ನೂ ತಲುಪಿಲ್ಲ.

Advertisement

ರಾಜ್ಯದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಬ್ಯಾಂಕ್‌ ಖಾತೆಗೆ ತಲಾ 2,000 ರೂ. ಠೇವಣಿ ಜಮಾ ಮಾಡಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ. ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ಜಿಲ್ಲೆಯಲ್ಲಿ 27,928 ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದರು. ಆದರೆ ಇದುವರೆಗೂ ಠೇವಣಿ ಹಣ ತಲುಪಿರುವುದು 9,606 ಮಂದಿಗೆ ಮಾತ್ರ. ಇನ್ನೂ 18,322 ಕಾರ್ಮಿಕರಿಗೆ ಹಣ ತಲುಪದೇ ಬದುಕು ನಡೆಸುವುದು ದುಸ್ತರವಾಗಿದೆ. ಉಳಿದ ನೋಂದಾಯಿತ ಕಾರ್ಮಿಕರಿಗೆ 2,000 ಠೇವಣಿ ಬ್ಯಾಂಕ್‌ಗೆ  ಜಮೆ ಆಗುತ್ತಾ? ಅಥವಾ ಇಲ್ಲವಾ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲೆಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣದ ಕಾರ್ಮಿಕರು ಒಟ್ಟು 27,928 ಮಂದಿ ನೋಂದಾಯಿಸಿಕೊಂಡಿದ್ದು, ಆ ಪೈಕಿ 9,606 ಮಂದಿಗೆ ಇಲಾಖೆ 2000 ರೂ. ಠೇವಣಿ ಜಮೆ ಆಗಿದೆ. ಉಳಿದ ಕಾರ್ಮಿಕರಿಗೂ ಹಣ ವರ್ಗಾವಣೆಗೊಳ್ಳಲಿದೆ. ಆರ್‌. ವರಲಕ್ಷ್ಮೀ, ಜಿಲ್ಲಾ ಕಾರ್ಮಿಕ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next