Advertisement

ಪಾಕಿಸ್ತಾನದಲ್ಲಿ ಹಿಂದೂ ಯುವತಿ ಅಪಹರಣದ ವೇಳೆ ಗುಂಡಿಟ್ಟು ಹತ್ಯೆ: ವರದಿ

10:48 AM Mar 22, 2022 | Team Udayavani |

ಕರಾಚಿ: 18 ವರ್ಷದ ಹಿಂದೂ ಯುವತಿಯನ್ನು ಅಪಹರಣ ಮಾಡಲು ಯತ್ನಿಸಿದ ವೇಳೆ ವಿರೋಧ ವ್ಯಕ್ತಪಡಿಸಿದಾಗ ಗುಂಡು ಹೊಡೆದು ಹತ್ಯೆಗೈದಿರುವ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಕಾಂಗ್ರೆಸ್‌ ನಾಯಕರ ಬೆನ್ನು ಬಿದ್ದ ಸಿ.ಎಂ.ಇಬ್ರಾಹಿಂ; ಜಮೀರ್-ತನ್ವೀರ್ ಸೆಳೆಯಲು ಯತ್ನ!

ಯುವತಿ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಆಕೆಯನ್ನು ಅಪಹರಿಸಲು ಯತ್ನಿಸಿದಾಗ, ಆಕೆ ಪ್ರತಿರೋಧ ಒಡ್ಡಿದಾಗ ಗುಂಡು ಹಾರಿಸಿರುವುದಾಗಿ ದ ಪ್ರೈಡೆ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಸಿಂಧ್ ಪ್ರಾಂತ್ಯದಲ್ಲಿ ಪ್ರತಿವರ್ಷ ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಹಿಂದೂ, ಸಿಖ್ ಮಹಿಳೆಯರನ್ನು ಉಗ್ರಗಾಮಿಗಳು ಅಪಹರಿಸಿ, ಬಲವಂತವಾಗಿ ಮತಾಂತರಗೊಳಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಮುದಾಯ ಬಲವಂತದ ವಿವಾಹ ಮತ್ತು ಮತಾಂತರದ ಸಮಸ್ಯೆಯನ್ನು ದೀರ್ಘಕಾಲದಿಂದ ಎದುರಿಸುತ್ತಿದೆ. 2013ರಿಂದ 2019ರ ನಡುವೆ 156 ಬಲವಂತದ ಮತಾಂತರ ಪ್ರಕರಣ ನಡೆದಿದೆ ಎಂದು ಸೆಂಟರ್ ಫಾರ್ ಸೋಶಿಯಲ್ ಜಸ್ಟೀಸ್ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next