Advertisement

18 ಜಾನುವಾರುಗಳ ರಕ್ಷಣೆ

08:40 PM Mar 15, 2021 | Team Udayavani |

ದಾವಣಗೆರೆ: ಅಕ್ರಮವಾಗಿ ಸಾಗಿಸುತ್ತಿದ್ದ 18 ಜಾನುವಾರುಗಳನ್ನ ಬೆಂಗಳೂರಿನ ಪ್ರಾಣಿದಯಾ ಸಂಘದ ಪದಾಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಿ, ದಾವಣಗೆರೆಯ ಮಹಾವೀರ ಗೋಶಾಲೆಗೆ ಬಿಟ್ಟಂತಹ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನ ಪ್ರಾಣಿ ದಯಾ ಸಂಘದವರು ಬೆಳಗ್ಗೆ 5ಕ್ಕೆ ರಾಣಿಬೆನ್ನೂರಿನ ಜಾನುವಾರು ಸಂತೆಗೆ ಭೇಟಿ ನೀಡಿದ್ದರು.

Advertisement

ಸಂತೆಯಲ್ಲಿ ಸುತ್ತಾಡಿ ಯಾರು ಜಾನುವಾರು ಕೊಳ್ಳುತ್ತಾರೆ ಎಂದು ಗಮನಿಸಿದರು. ಅದರಂತೆ ಅಲ್ಲೇ ಗೌಪ್ಯವಾಗಿ ಮಾಹಿತಿ ಕಲೆ ಹಾಕಿದ್ದರು. ಜಾನುವಾರುಗಳ ಹೊತ್ತ ವಾಹನ ಹೊರಟಾಗ ಅದು ಎಲ್ಲಿಗೆ ಹೋಗುತ್ತದೆ ಎಂದು ವಾಹನ ಹಿಂಬಾಲಿಸಿದರು. ಒಂದು ವಾಹನ ಹರಿಹರ ನಗರಕ್ಕೆ ಪ್ರವೇಶ ಮಾಡುತ್ತಿದ್ದಂತೆ ಸ್ಥಳಿಯ ಪೊಲೀಸ್‌ನವರಿಗೆ ಮಾಹಿತಿ ನೀಡಿ ನಂತರ ರಾಣಿಬೆನ್ನೂರಿಗೆ ತೆರಳಿದ್ದಾರೆ. ಎರಡು ವಾಹನಗಳು ದಾವಣಗೆರೆ ಬೈಪಾಸ್‌ ಮೂಲಕ ದಾವಣಗೆರೆ ಆವರಗೆರೆ ಕಡೆಯಿಂದ ನಗರ ಪ್ರವೇಶ ಮಾಡುವಾಗ ಜಿಲ್ಲಾ ಪೊಲೀಸ್‌ ಇಲಾಖೆ ಸಹಕಾರ ಪಡೆದು ಎರಡು ವಾಹನಗಳನ್ನು ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದರು. ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಗಜೇಂದ್ರಪ್ಪ ವಾಹನಗಳಲ್ಲಿದ್ದ ಜಾನುವಾರುಗಳನ್ನು ಮಹಾವೀರ ಗೋ ಶಾಲೆಯ ಮಾಲೀಕರನ್ನು ಸಂರ್ಪಕಿಸಿ ಗೋ ಶಾಲೆಗೆ ಬಿಡುವ ವ್ಯವಸ್ಥೆ ಮಾಡಿದರು.

ಪ್ರಾಣಿದಯಾ ಸಂಘದವರು ಸ್ಥಳೀಯರಾದ ಎಂ.ಜಿ. ಶ್ರೀಕಾಂತ್‌, ಹಿಂದೂ ಜಾಗರಣ ವೇದಿಕೆಯ ಸತೀಶ್‌ ಪೂಜಾರಿ ಹಾಗೂ ರಾಕೇಶ್‌, ವಿಕಾಸ್‌ ಇಟಗಿ, ಪುರುಷೋತ್ತಮ,ತಿಪ್ಪೇಶ್‌ ಇತರರ ನೆರವು ಪಡೆದರು. ಹರಿಹರದಲ್ಲಿ ವಶಕ್ಕೆ ಪಡೆದ ವಾಹನವನ್ನು ದಾಖಲೆ ಇದೆ ಎಂದು ನಮಗೆ ಮಾಹಿತಿ ನೀಡದೇ ವಾಹನ ಬಿಟ್ಟು ಕಳಿಸಿದ್ದಾರೆ ಬಿಟ್ಟು ಕಳಿಸಲಾಗಿದೆ ಎಂದು ಪ್ರಾಣಿ ದಯಾ ಸಂಘದವರು ಬೇಸರ ವ್ಯಕ್ತಪಡಿಸಿದರು

 

Advertisement

Udayavani is now on Telegram. Click here to join our channel and stay updated with the latest news.

Next