Advertisement

ಕೇರಳದಲ್ಲಿ ಕುಂಭ ದ್ರೋಣ ಮಳೆ, ನೆರೆ, ಭೂಕುಸಿತ: 18 ಮಂದಿ ಬಲಿ

12:03 PM Aug 09, 2018 | udayavani editorial |

ತಿರುವನಂತಪುರ: ಇಂದು ನಸುಕಿನ ವೇಳೆ ಕೇರಳದ ವಿವಿಧ ಭಾಗಗಳಲ್ಲಿ  ಸುರಿದಿರುವ ಜಡಿ ಮಳೆ ಮತ್ತು ಭೂಕುಸಿತ ದುರಂತಕ್ಕೆ ಕನಿಷ್ಠ 18 ಮಂದಿ ಬಲಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪ್ರಕೃತಿ ವಿಕೋಪ ನಿಯಂತ್ರಣ ಕೊಠಡಿಯ ಮಾಹಿತಿಯ ಪ್ರಕಾರ ಇಡುಕ್ಕಿಯಲ್ಲಿ 10 ಮಂದಿ, ಮಲಪ್ಪುರಂ ನಲ್ಲಿ ಐವರು, ಕಣ್ಣೂರಿನಲ್ಲಿ ಇಬ್ಬರು ಮತ್ತು ವಯನಾಡ್‌ ಜಿಲ್ಲೆಯಲ್ಲಿ ಓರ್ವರು ಭೂಕುಸಿತದಿಂದ ಮೃತಪಟ್ಟಿದ್ದಾರೆ. 

ವಯನಾಡ್‌, ಪಾಲಕ್ಕಾಡ್‌ ಮತ್ತು ಕೋಯಿಕ್ಕೋಡ್‌ ಜಿಲ್ಲೆಗಳಲ್ಲಿ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ.

ಇಡುಕ್ಕಿಯ ಆದಿಮಲೆ ಪಟ್ಟಣದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟರು. ಸ್ಥಳೀಯರು ಮತ್ತು ಪೊಲೀಸರು ಜತೆಗೂಡಿ ಇಬ್ಬರನ್ನು ಜೀವ ಸಹಿತ ಅವಶೇಷಗಳಡಿಯಿಂದ ಹೊರತೆಗೆದರು. 

ಇಂದು ಬೆಳಗ್ಗೆ ಇಡಮಲಯರ್‌ ಡ್ಯಾಮ್‌ ನಿಂದ ಸುಮಾರು 600 ಕ್ಯೂಸೆಕ್ಸ್‌ ನೀರನ್ನು ಹೊರ ಬಿಡಲಾಯಿತು. ಜಲಾಶಯದಲ್ಲಿನ ನೀರು ತನ್ನ ಪೂರ್ಣ 169 ಮೀಟರ್‌ ಸಾಮರ್ಥ್ಯವನ್ನು ಮೀರಿ 169.95 ಮೀಟರ್‌ ಗೆ ಏರಿದ ಕಾರಣ ನೀರನ್ನು ಹೊರಬಿಡಲೇಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. 

Advertisement

ಇಡುಕ್ಕಿ ಡ್ಯಾಮ್‌ ಇಂದು ಬೆಳಗ್ಗೆ 8 ಗಂಟೆಯ ಹೊತ್ತಿಗೆ  2,398 ಅಡಿ ಮಟ್ಟಕ್ಕೆ ತುಂಬಿಕೊಂಡಿತ್ತು. ಇದರ ಎಫ್ಆರ್‌ಎಲ್‌ ಮಟ್ಟ 2,403 ಅಡಿ. ಅಂತೆಯೇ ಆಡಳಿತೆಯು ಈಗ ಈ ಬಗ್ಗೆ ಕಟ್ಟೆಚ್ಚರ ಘೋಷಿಸಿದೆ.

ಭಾರೀ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಕೋಯಿಕ್ಕೋಡ್‌ ಮತ್ತು ವಯನಾಡ್‌ ಜಿಲ್ಲೆಗಳಲ್ಲಿ ನೆರೆ ಉಂಟಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನ ತಂಡ ಕೋಯಿಕ್ಕೋಡ್‌ಗೆ ಧಾವಿಸಿದೆ. 

ಇಡುಕ್ಕಿ, ಕೊಲ್ಲಂ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಜಡಿ ಮಳೆ ಆಗುತ್ತಿರುವುದರಿಂದ ಶಿಕ್ಷಣಾಲಯಗಳಿಗೆ ರಜೆ ಸಾರಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next