Advertisement

18 ಡೆಂಘೀ ಪ್ರಕರಣ ಪತ್ತೆ

04:11 PM Jun 03, 2018 | Team Udayavani |

ಯಾದಗಿರಿ: ಜನರಲ್ಲಿ ಸ್ವತ್ಛತೆ ಅರಿವು ಕೊರತೆಯಿಂದಾಗಿ ಜನವರಿಯಿಂದ ಮೇ ತಿಂಗಳವರೆಗೆ ಜಿಲ್ಲೆಯಾದ್ಯಂತ 18
ಜನರಲ್ಲಿ ಡೆಂಘೀ ರೋಗ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಯಾದಗಿರಿ 06, ಶಹಾಪುರ 07, ಸುರಪುರ 05 ಸೇರಿದಂತೆ ಒಟ್ಟು 18 ಡೆಂಘೀ ರೋಗ ಪ್ರಕರಣ ಪತ್ತೆಯಾಗಿದೆ. ಅತೀ ಹೆಚ್ಚು ಶಹಾಪುರ ತಾಲೂಕಿನಲ್ಲಿ ಡೆಂಘೀ ರೋಗ ಪತ್ತೆಯಾಗಿರುವುದು ಕಂಡು ಬಂದಿದೆ.

Advertisement

ಯಾದಗಿರಿ ತಾಲೂಕಿನ ನಗರ ಪ್ರದೇಶದಲ್ಲಿ 3, ಗ್ರಾಮೀಣ ಪ್ರದೇಶದಲ್ಲಿ 3 ಡೆಂಘೀ ಪ್ರಕರಣ ಕಂಡು ಬಂದಿದೆ. ಶಹಾಪುರ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 7 ಡೆಂಘೀ ಪ್ರಕರಣ ಕಂಡು ಬಂದಿವೆ. ಆದರೆ ನಗರ ಪ್ರದೇಶದಲ್ಲಿ ರೋಗ ಕಂಡು ಬಂದಿಲ್ಲ. ಸುರಪುರ ತಾಲೂಕಿನಲ್ಲಿ ನಗರ ಪ್ರದೇಶದಲ್ಲಿ 1 ಹಾಗೂ ಗ್ರಾಮೀಣ ಪ್ರದೇಶದಲ್ಲಿ 4 ಡೆಂಘೀ ಪ್ರಕರಣ ಕಂಡು ಬಂದಿವೆ. 

ಯಾದಗಿರಿ ತಾಲೂಕಿನಲ್ಲಿ ಯಂಪಾಂಡ ತಾಂಡಾ, ಠಾಣಗುಂಡಿ, ಲಿಂಗೇರಿ ಸ್ಟೇಷನ್‌, ಶಾಂತಿ ನಗರ ಯಾದಗಿರಿ, ಶಹಾಪುರ ತಾಲೂಕಿನಲ್ಲಿ ಬೆನಕನಳ್ಳಿ, ಗುಂಡಳ್ಳಿ ತಾಂಡಾ, ಕುರಕುಂದಾ, ರಸ್ತಾಪುರ, ಹತ್ತಿಗುಡೂರ, ಸುರಪುರ ತಾಲೂಕಿನಲ್ಲಿ ರುಕಾಪುರ, ಸಿದ್ದಾಪುರ, ಕೆಂಭಾವಿ ಸೇರಿದಂತೆ ನಗರ ಪ್ರದೇಶದಲ್ಲಿ ಡೆಂಘೀ ರೋಗ ಪತ್ತೆಯಾಗಿದೆ.

ಆದರೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. 2014ರಲ್ಲಿ 16, 2015ರಲ್ಲಿ 5, 2016ರಲ್ಲಿ 32, 2017ರಲ್ಲಿ 65 ಡೆಂಘೀ ಪ್ರಕರಣಗಳು ಕಂಡು ಬಂದಿವೆ. ಆದರೆ ಸಾವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಪ್ರತಿ ವರ್ಷ ಡೆಂಘೀ ಪ್ರಕರಣಗಳು ಹೆಚ್ಚುತ್ತಲೆ ಹೋಗುತ್ತಿರುವುದರಿಂದ ಭಯ ಆವರಿಸಿದೆ.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಇದರಿಂದ ಡೆಂಘೀ ಪ್ರಕರಣ ಹೆಚ್ಚಾಗುವ
ಸಾಧ್ಯತೆಗಳಿವೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಜನರು ಆಗ್ರಹಿಸಿದ್ದಾರೆ. 

Advertisement

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಚರಂಡಿ ಸ್ವತ್ಛತೆ ಇಲ್ಲದ ಪರಿಣಾಮ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇಡೀ ಗ್ರಾಮಗಳೇಗಬ್ಬು ನಾರುತ್ತಿವೆ. ಜೊತೆಗೆ ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿದ್ದು, ಇದರಿಂದ ಗ್ರಾಮಸ್ಥರು ಮಲೇರಿಯಾ, ಡೆಂಘೀ, ಚಿಕೂನ್‌ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದಾರೆ. ಇನ್ನೂ ನಗರ ಪ್ರದೇಶದ ಕೆಲ ವಾರ್ಡ್‌ಗಳಲ್ಲಿ ಸ್ವತ್ಛತೆ ಇಲ್ಲದ ಪರಿಣಾಮ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ಸ್ವತ್ಛತೆಗೊಳಿಸಬೇಕು ಜೊತೆಗೆ ಫಾಗಿಂಗ್‌ ಸಿಂಪಡಿಸುವ ಮೂಲಕ ಸೊಳ್ಳೆಗಳ ಕಾಟದಿಂದ ತಪ್ಪಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗಗಳ ಭೀತಿ ಸಾರ್ವಜನಿಕರನ್ನು ಕಾಡುತ್ತಿದ್ದು, ಸ್ಥಳೀಯ ಸಂಸ್ಥೆಗಳು ಮತ್ತು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವುದೇ ಕಾಯ್ದು ನೋಡಬೇಕಿದೆ.

ಆರೋಗ್ಯ ಇಲಾಖೆ ವತಿಯಿಂದ ಗ್ರಾಮಗಳಲ್ಲಿ ಫಾಗಿಂಗ್‌ ಸಿಂಪಡಣೆಗೆ ಕ್ರಮ ಕೈಗೊಂಡಿದ್ದು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಮನೆ ಮನೆಗೆ ತೆರಳಿ ನೀರಿನ ತೊಟ್ಟಿಯಲ್ಲಿ ಮತ್ತು ಮನೆ ಸುತ್ತಲು ನೀರು ಶೇಖರಣೆ ಆಗದಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.  ಡಾ| ಸೂರ್ಯಪ್ರಕಾಶ ಎಂ. ಕಂದಕೂರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಯಾದಗಿರಿ

„ರಾಜೇಶ ಪಾಟೀಲ್‌ ಯಡ್ಡಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next