Advertisement

ತೆರಿಗೆ ವಂಚಕರಿಗೆ ಶಾಕ್! 18 ಕೋಟಿ ಪಾನ್‌ಕಾರ್ಡ್‌ ನಿಷ್ಕ್ರಿಯ?

11:01 AM Aug 22, 2020 | Nagendra Trasi |

ನವದೆಹಲಿ: ಕೇಂದ್ರಸರ್ಕಾರ ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವವರನ್ನು ಹಿಡಿಯಲು ಬಲೆ ಬೀಸಿದೆ. ಹಲವು ಪಾನ್‌ಕಾರ್ಡ್‌ಗಳನ್ನು ಬಳಸಿ, ದೊಡ್ಡದೊಡ್ಡ ವ್ಯವಹಾರ ಮಾಡಿ, ತೆರಿಗೆ ವಂಚಿಸುತ್ತಿದ್ದವರನ್ನು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ, ಕೃತಕ ಬುದ್ಧಿಮತ್ತೆಯ ಮೊರೆಹೋಗಿದೆ.

Advertisement

ಎಲ್ಲ ಲೆಕ್ಕಾಚಾರದ ಪ್ರಕಾರ ನಡೆದರೆ ಮುಂದಿನ ವರ್ಷ ಮಾ.31ರೊಳಗೆ 18 ಕೋಟಿ ಅಕ್ರಮ ಪಾನ್‌ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳ ಲಿವೆ. ಈ ಕಾಡ್‌ ìಗಳನ್ನು ಹೊಂದಿರುವವರು ಆಧಾರ್‌ ಕಾಡ್‌ ìನೊಂದಿಗೆ ಜೋಡಿಸಿಕೊಂಡರೆ ಮಾತ್ರ, ಬಚಾವಾಗಲಿದ್ದಾರೆ. ಆದರೆ ಒಂದಕ್ಕಿಂತ ಹೆಚ್ಚು ಪಾನ್‌ ಹೊಂದುವುದು ಸಾಧ್ಯವಿಲ್ಲದ ಕಾರಣ, ಜೋಡಣೆಯೂ ಸಹಜವಾಗಿಯೇ ಸಾಧ್ಯವಾಗುವುದಿಲ್ಲ.

ಅಲ್ಲಿಗೆ ಈ ಪಾನ್‌ಕಾರ್ಡ್‌ಗಳಿಗೆ ಇತಿಶ್ರೀ ಹಾಡುವುದು ಖಚಿತ. ಬೇರೆಬೇರೆ ಮಾರ್ಗದಲ್ಲಿ ಆದಾಯ ತೆರಿಗೆ ತಪ್ಪಿಸಿಕೊಳ್ಳುವವರ ಪತ್ತೆಗೂ ಕೇಂದ್ರ ಮುಂದಾಗಿದೆ. ದೊಡ್ಡದೊಡ್ಡ ವ್ಯವಹಾರ, ಐಷಾರಾಮಿ ವಸ್ತುಗಳಿಗೆ ಹಣ ಖರ್ಚು ಮಾಡುವ ವ್ಯಕ್ತಿಗಳು, ತಮ್ಮ ಆದಾಯ ಮುಚ್ಚಿಟ್ಟು ತೆರಿಗೆ ಮಾತ್ರ ತಪ್ಪಿಸಿಕೊಳ್ಳುತ್ತಿದ್ದಾರೆ. ಅಂತಹವರ ವ್ಯವಹಾರಗಳನ್ನು ಪತ್ತೆಹಚ್ಚಲು ಕೇಂದ್ರ ತೀರ್ಮಾನಿಸಿದೆ.

1.22 ಕೋಟಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮಂಜೂರು:

ಕೊರೊನಾದಿಂದ ತತ್ತರಿಸುತ್ತಿರುವ ದೇಶದ ರೈತರ ನೆರವಿಗೆ ಬರಲು ಕೇಂದ್ರಸರ್ಕಾರ ಬಲವಾದ ಕ್ರಮ ತೆಗೆದುಕೊಂಡಿದೆ. ಈಗಾಗಲೇ 1.22 ಕೋಟಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ಮಂಜೂರು ಮಾಡಲಾಗಿದೆ.

Advertisement

ಇವುಗಳ ಮೂಲಕ ರಿಯಾಯ್ತಿಯಲ್ಲಿ  1.02 ಲಕ್ಷ ಕೋಟಿ ರೂ. ಸಾಲವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ. ಈ ವರ್ಷ ಮೇ ತಿಂಗಳಲ್ಲಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತ್‌ ಪ್ಯಾಕೇಜ್‌ ಘೋಷಿಸಿದಾಗ, ರೈತರಿಗೂ ನೆರವು ಪ್ರಕಟಿಸಿದ್ದರು. 2 ಲಕ್ಷ ಕೋಟಿ ರೂ. ಸಾಲವನ್ನು ರೈತರಿಗೆ ರಿಯಾಯ್ತಿ ದರದಲ್ಲಿ ನೀಡಲಾಗುವುದು, ಅದರಿಂದ 2.5 ಕೋಟಿ ರೈತರಿಗೆ ನೆರವಾಗಲಿದೆ ಎಂದು ಹೇಳಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಾಸ್ತವವಾಗಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು 1998ರಲ್ಲೇ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಸರಿಯಾಗಿ ಅರ್ಹರಿಗೆಲ್ಲ ಅದನ್ನು ಹಂಚುವ ಕಾರ್ಯಕ್ರಮಕ್ಕೆ ಮೋದಿ ಇತ್ತೀಚೆಗೆ ಉತ್ತರಪ್ರದೇಶದಲ್ಲಿಚಾಲನೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next