Advertisement

18ಕ್ಕೆ 7 ವಿಕೆಟ್‌: ಟಿ20 ವಿಶ್ವದಾಖಲೆ: ಇಂಗ್ಲಿಷ್‌ ಕೌಂಟಿಯಲ್ಲಿ ಅಕರ್ಮನ್‌ ಪರಾಕ್ರಮ

10:04 AM Aug 10, 2019 | Team Udayavani |

ಲಂಡನ್‌: ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ಕಾಲಿನ್‌ ಅಕರ್ಮನ್‌ ಟಿ20 ಕ್ರಿಕೆಟ್‌ನಲ್ಲಿ 7 ವಿಕೆಟ್‌ ಉಡಾಯಿಸಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಬುಧವಾರ ಗ್ರೇಸ್‌ ರೋಡ್‌ನ‌ಲ್ಲಿ ನಡೆದ ಪಂದ್ಯದ ವೇಳೆ ಅವರು ಈ ಸಾಧನೆಗೈದರು.

Advertisement

ಲೀಸೆಸ್ಟರ್‌ಶೈರ್‌ ಕೌಂಟಿ ನಾಯಕನೂ ಆಗಿರುವ 28ರ ಹರೆಯದ ಅಕರ್ಮನ್‌, ವಾರ್ವಿಕ್‌ಶೈರ್‌ ವಿರುದ್ಧದ ಪಂದ್ಯದಲ್ಲಿ 18 ರನ್ನಿತ್ತು 7 ವಿಕೆಟ್‌ ಉಡಾಯಿಸಿದರು. ಇದು ಟಿ20 ಪಂದ್ಯದಲ್ಲಿ ದಾಖಲಾದ ಅತ್ಯುತ್ತಮ ಬೌಲಿಂಗ್‌
ಸಾಧನೆಯಾಗಿದೆ. ಹಿಂದಿನ ದಾಖಲೆ ಮಲೇಶ್ಯದ ಅರುಲ್‌ ಸುಪಯ್ಯ ಹೆಸರಲ್ಲಿತ್ತು. ಸಾಮರ್ಸೆಟ್‌ ಪರ ಆಡುತ್ತಿದ್ದ ಅವರು 2011ರ ಗ್ಲಾಮರ್ಗನ್‌ ಎದುರಿನ ಪಂದ್ಯದಲ್ಲಿ 5 ರನ್ನಿತ್ತು 6 ವಿಕೆಟ್‌ ಉಡಾಯಿಸಿದ್ದರು.

ಅಕರ್ಮನ್‌ ಪರಾಕ್ರಮದಿಂದ 190 ರನ್‌ ಬೆನ್ನಟ್ಟಿ ಹೋಗಿದ್ದ ವಾರ್ವಿಕ್‌ಶೈರ್‌ 134 ರನ್ನಿಗೆ ಕುಸಿಯಿತು. “ಮೊದಲು ನನಗಿದನ್ನು ನಂಬಲಿಕ್ಕಾಗಲಿಲ್ಲ. 7 ವಿಕೆಟ್‌ ಸಾಧನೆ ವಿಶ್ವದಾಖಲೆ ಎಂದು ತಿಳಿದಿರಲಿಲ್ಲ. ಆದರೀಗ ಈ ಪಂದ್ಯ ಬಹಳ ದಿನಗಳ ಕಾಲ ನನ್ನ ನೆನಪಿನಲ್ಲಿ ಉಳಿಯಲಿದೆ. ಗ್ರೇಸ್‌ರೋಡ್‌ ಟ್ರ್ಯಾಕ್‌ ಯಾವತ್ತೂ ಸ್ಪಿನ್ನಿಗೆ ಇಷ್ಟೊಂದು ನೆರವು ನೀಡಿರಲಿಲ್ಲ’ ಎಂದು ಅಕರ್ಮನ್‌ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next