Advertisement

24ನೇ ಮಹಡಿಯಿಂದ ಬಿದ್ದು 17 ವರ್ಷದ ಬಾಲಕ ದಾರುಣ ಸಾವು

08:27 AM Dec 01, 2020 | Mithun PG |

ಕೊಲ್ಕತ್ತ: 24ನೇ ಮಹಡಿಯಿಂದ ಬಿದ್ದು 17 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಕೊಲ್ಕತ್ತಾ ಆನಂದಪುರದಲ್ಲಿ ನಡೆದಿದೆ.

Advertisement

ಮೃತ ಬಾಲಕನನ್ನು ರುದ್ರಾನಿಲ್ ದತ್ತಾ ಎಂದು ಗುರುತಿಸಲಾಗಿದ್ದು, ಈತ ದ್ವಿತೀಯ ಪಿಯುಸಿ ವಿದ್ಯಾರ್ಥಿ ಎನ್ನಲಾಗಿದೆ.

ನ. 30ರ ಸೋಮವಾರ ಮುಂಜಾನೆಯೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹರ್ಬಾನಾ ಹೌಸಿಂಗ್ ಕಾಂಪ್ಲೆಕ್ಸ್ ನಲ್ಲಿ ವಾಸಿಸುತ್ತಿದ್ದ ಬಾಲಕ 24ನೇ ಮಹಡಿಯಿಂದ ಬಿದ್ದಿದ್ದಾನೆ. ಆದರೇ ಇದು ಆತ್ಮಹತ್ಯೆಯೋ . ಅಥವಾ ಆಯತಪ್ಪಿ ಬಿದ್ದಿರುವುದೋ ಎಂದು ಇನ್ನೂ ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಹುಮಹಡಿ ಕಟ್ಟಡದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಕೂಡಲೇ ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜು  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಅಷ್ಟರಲ್ಲಾಗಲೇ  ಆತ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ: ಎರಡು ದಿನ ಮೊದಲೇ ಚರ್ಚೆಗೆ ಆಹ್ವಾನ !

Advertisement

ಘಟನೆ ನಡೆದ ಕೂಡಲೇ ತನಿಖಾ ದಳ ಸ್ಥಳಕ್ಕೆ ಆಗಮಿಸಿತ್ತು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:  ಇಂದು ಅಂತಾರಾಷ್ಟ್ರೀಯ ಏಡ್ಸ್‌ ದಿನ; ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡೋಣ

Advertisement

Udayavani is now on Telegram. Click here to join our channel and stay updated with the latest news.

Next