Advertisement

178.88 ಕೋಟಿ ಬೆಳೆವಿಮೆ ಮಂಜೂರು: ಉದಾಸಿ

05:17 PM Sep 22, 2020 | Suhan S |

ಹಾನಗಲ್ಲ: ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆಯಡಿ 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯಲ್ಲಿ 1,13,857 ರೈತರು ನೋಂದಣಿ ಮಾಡಿಸಿದ್ದು, ಇದರಲ್ಲಿ 75,704 ರೈತರಿಗೆ 178.88 ಕೋಟಿ ರೂ. ಬೆಳೆವಿಮೆ ಮಂಜೂರಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದ್ದಾರೆ.

Advertisement

ಈ ಕುರಿತು ಸೋಮವಾರ ಪ್ರಕಟಣೆ ನೀಡಿರುವ ಅವರು, 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಬೆಳೆವಿಮಾ ವ್ಯಾಪ್ತಿಗೆ ಒಳಪಟ್ಟ ರೈತರಿಗೆ ಶೇ.25ರಂತೆ ಮಧ್ಯಂತರ ಪರಿಹಾರವಾಗಿ ನೀಡಿದ 48.74 ಕೋಟಿ ರೂ. ಹಣ ರೈತರ ಖಾತೆಗೆ ಜಮಾ ಮಾಡಲಾಗಿದೆ.

ಹಾನಗಲ್ಲ ತಾಲೂಕಿನ 16.609 ರೈತರಿಗೆ 15,11 ಕೋಟಿ ಮೊತ್ತ ಈಗಾಗಲೇ ಜಮಾ ಮಾಡಲಾಗಿದೆ.ಇನ್ನುಳಿದ ಶೇ.75 ಪರಿಹಾರ ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ, ರಾಜ್ಯ ಸರ್ಕಾರ ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡುಹಿಡಿಯಲಾದ ಇಳುವರಿ ಮಾಹಿತಿ ಮಾತ್ರ ಪರಿಗಣಿಸಿ ಬೆಳೆವಿಮಾ ನಷ್ಟ ಪರಿಹಾರ ಲೆಕ್ಕ ಹಾಕಿ ಮಾಡಲಾಗಿದೆ. ಅದರಲ್ಲಿ ಈಗಾಗಲೇ ನೀಡಿರುವ ಶೇ.25 ಮಧ್ಯಂತರ ಮೊತ್ತ ಕಡಿತಗೊಳಿಸಿ ಹಾವೇರಿ ಜಿಲ್ಲೆಗೆ 130.14 ಕೋಟಿ ರೂ. ಹಣ ಮಂಜೂರಾಗಿದೆ. ಶೀಘ್ರ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಹಾನಗಲ್ಲ ತಾಲೂಕಿಗೆ ಗ್ರಾಪಂವಾರು ನೋಡುವುದಾದರೆ, 36 ಗ್ರಾಪಂಗಳು ಗೋವಿಜೋಳ (ಮಳೆಯಾಶ್ರಿತ) ಬೆಳೆಗೆ ಶೆ.25ಕ್ಕಿಂತ ಹೆಚ್ಚು ಬೆಳೆವಿಮಾ ಪರಿಹಾರ ಮಂಜೂರಾಗಿದೆ. ಕೇವಲ 5 ಗ್ರಾಪಂಗಳು ಶೇ.25ಕ್ಕಿಂತ ಕಡಿಮೆ ಬೆಳೆ ಪರಿಹಾರ ಹೊಂದಿವೆ. ಭತ್ತ (ನೀರಾವರಿ) ಬೆಳೆಗೆ 26 ಪಂಚಾಯತಿಗಳು ಶೇ.25ಕ್ಕಿಂತ ಹೆಚ್ಚು ಬೆಳೆ ಪರಿಹಾರ ಹೊಂದಿದ್ದರೆ, 7 ಗ್ರಾಪಂಗಳು ಶೇ.25ಕ್ಕಿಂತ ಕಡಿಮೆ ಬೆಳೆವಿಮೆ ಪರಿಹಾರ ಮಂಜೂರಾಗಿದೆ.

ಹಾನಗಲ್ಲ ಹೋಬಳಿಯಲ್ಲಿ ಗೋವಿನಜೋಳ (ನೀರಾವರಿ) ಶೇ.71, ಹತ್ತಿ (ಮಳೆಯಾಶ್ರಿತ) ಶೇ.24, ಸೋಯಾಬಿನ್‌ (ಮಳೆಯಾಶ್ರಿತ) ಶೇ.33, ಅಕ್ಕಿಆಲೂರು ಹೋಬಳಿಯಲ್ಲಿ ಗೋವಿನಜೋಳ (ನೀರಾವರಿ) ಶೇ.54, ಹತ್ತಿ (ಮಳೆಯಾಶ್ರಿತ) ಶೇ.17, ಸೋಯಾಬಿನ್‌ (ಮಳೆಯಾಶ್ರಿತ) ಶೇ.40, ಹತ್ತಿ (ನೀರಾವರಿ) ಶೇ.24, ಬೊಮ್ಮನಹಳ್ಳಿ ಹೋಬಳಿಯಲ್ಲಿ ಗೋವಿನಜೋಳ (ನೀರಾವರಿ) ಶೇ.73, ಸೋಯಾಬಿನ್‌ (ಮಳೆಯಾಶ್ರಿತ) ಶೇ.16, ಹತ್ತಿ (ನೀರಾವರಿ) ಶೇ.38, (ಮಳೆಯಾಶ್ರಿತ) ಶೇ.30, ಶೆಂಗಾ (ಮಳೆಯಾಶ್ರಿತ) ಶೇ.4 ಬೆಳೆವಿಮಾ ಪರಿಹಾರ ಮಂಜೂರಾಗಿದೆ.

Advertisement

ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ಸರ್ಕಾರ ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡುಹಿಡಿಯಲಾದ ಇಳುವರಿ ಮಾಹಿತಿ ಪರಿಗಣಿಸಿ ಬೆಳೆವಿಮಾ ನಷ್ಟ ಪರಿಹಾರ ಲೆಕ್ಕ ಹಾಕಿ ಶೇ.25ಕ್ಕಿಂತ ಕಡಿಮೆ ಬೆಳೆವಿಮಾ ಪರಿಹಾರ ಮಂಜೂರಾಗಿರುವ ಬೆಳೆಗಳಿಗೆ ಈಗಾಗಲೇ ಮಧ್ಯಂತರ ಪರಿಹಾರವಾಗಿ ನೀಡಿರುವ ಶೇ.25 ಬೆಳೆವಿಮೆ ಪರಿಹಾರ ಗಮನಿಸಿದರೆ ಶೇ.25ಕ್ಕಿಂತ ಕಡಿಮೆ ಬೆಳೆವಿಮಾ ಮಂಜೂರಾಗಿರುವ ರೈತರ ಖಾತೆಗಳಿಗೆ ಹೆಚ್ಚುವರಿ ಬೆಳೆವಿಮಾ ಪರಿಹಾರ ಮೊತ್ತ ಜಮಾ ಮಾಡಿದಂತಾಗಿದೆ.

ಹಾನಗಲ್ಲ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ (2020-21)ರ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಯಡಿ 27,481 ರೈತರು ವಿವಿಧ ಬೆಳೆಗಳಿಗೆ ಬೆಳೆವಿಮಾ ನೋಂದಣಿ ಮಾಡಿದ್ದಾರೆ ಎಂದು ಸಿ.ಎಂ. ಉದಾಸಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next