ಮುಂಬೈ: ದೇಶದ ಪ್ರತಿಷ್ಠಿತ ಮಹೀಂದ್ರಾ & ಮಹೀಂದ್ರಾ (Mahindra & Mahindra Ltd) ಲಿಮಿಟೆಡ್ ತನ್ನ ನೂತನ ಮಹೀಂದ್ರಾ ಥಾರ್ ರೊಕ್ಸ್ (Mahindra Thar ROXX) ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಕೇವಲ 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್ ರೊಕ್ಸ್ ಬುಕ್ಕಿಂಗ್ ಆಗಿರುವುದಾಗಿ ತಿಳಿಸಿದೆ.
ಥಾರ್ ರೊಕ್ಸ್ ಬುಕ್ಕಿಂಗ್ಸ್ ಮಹೀಂದ್ರಾದ ಎಲ್ಲಾ ಅಧಿಕೃತ ಡೀಲರ್ ಶಿಪ್ ಮತ್ತು ಮಹೀಂದ್ರ ವೆಬ್ ಸೈಟ್ ನಲ್ಲಿ ಲಭ್ಯವಿರುವುದಾಗಿ ಹೇಳಿದೆ.
ಗುರುವಾರ(ಅ.03) ದಸರಾ ಆರಂಭದ ಪ್ರಯುಕ್ತ ಥಾರ್ ರೊಕ್ಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದು, ಥಾರ್ ರೊಕ್ಸ್ ಬೆಲೆ 12.99 ಲಕ್ಷ ರೂ.ನಿಂದ 22.49 ಲಕ್ಷದವರೆಗೆ(Ex Showroom) ಇರುವುದಾಗಿ ವಿವರಿಸಿದೆ.
ಮಹೀಂದ್ರಾ ಥಾರ್ ರೊಕ್ಸ್ 4X2 ಶ್ರೇಣಿಯಲ್ಲಿ ಲಭ್ಯವಿದ್ದು, 12.99 ಲಕ್ಷ ರೂಪಾಯಿಂದ 20.49 ಲಕ್ಷ ರೂಪಾಯಿವರೆಗೆ ಬೆಲೆ ಇದ್ದು, 4X4 ಥಾರ್ ರೊಕ್ಸ್ ಬೆಲೆ 18.79 ಲಕ್ಷ ರೂಪಾಯಿಂದ 22.49 ಲಕ್ಷ ರೂಪಾಯಿ ಬೆಲೆ ಇರುವುದಾಗಿ ತಿಳಿಸಿದೆ.
ಮಹೀಂದ್ರಾ ಥಾರ್ ರೊಕ್ಸ್ 4X4 ವಿಶೇಷವಾಗಿ 2.2 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 175bhp ಪವರ್ ಹಾಗೂ 370Nm Peak ಟಾರ್ಕ್ ಒಳಗೊಂಡಿದೆ. ಥಾರ್ ರೊಕ್ಸ್ ಎರಡು ಎಂಜಿನ್ ಗಳ ಆಯ್ಕೆಯ ಆಫರ್ ನೀಡಿದ್ದು, 2ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್ ಸೌಲಭ್ಯ ಹೊಂದಿರುವುದಾಗಿ ತಿಳಿಸಿದೆ.