Advertisement

ಧಾರವಾಡ: 174 ಪಾಸಿಟಿವ್ ಪ್ರಕರಣಗಳು ಪತ್ತೆ ; ಒಟ್ಟು 2839ಕ್ಕೇರಿದ ಪ್ರಕರಣಗಳ ಸಂಖ್ಯೆ

09:48 PM Jul 24, 2020 | Hari Prasad |

ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 174 ಜನರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಇದರ ಜೊತೆಗೆ 5 ಜನ ಸೋಂಕಿತರು ಸೋಂಕಿಗೆ ಬಲಿಯಾಗಿ ಸಾವಿನ ಸಂಖ್ಯೆ 85ಕ್ಕೆ ಏರಿಕೆ ಕಂಡಿದೆ.

Advertisement

ಕೋವಿಡ್ 19 ಪಾಸಿಟಿವ್ ಹೊಂದಿದ್ದ ಐದು ಜನ ಸೋಂಕಿತರು ಕಳೆದ ಮೂರು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದಿಂದ ಬಳಲುತ್ತಿದ್ದ ಹುಬ್ಬಳ್ಳಿಯ ಮಂಟೂರ ರಸ್ತೆ ನಿವಾಸಿಯಾದ 65 ವರ್ಷದ ಪುರುಷ, ಧಾರವಾಡ ಮಣಿಕಿಲ್ಲಾ ನಿವಾಸಿಯಾದ 51 ವರ್ಷದ ಮಹಿಳೆ, ಹುಬ್ಬಳ್ಳಿ ಬಂಕಾಪೂರ ಚೌಕ್ ನಿವಾಸಿಯಾದ 46 ವರ್ಷದ ಮಹಿಳೆ, ಹುಬ್ಬಳ್ಳಿಯ  ಗೋಕುಲ ರಸ್ತೆ ನಿವಾಸಿಯಾದ 63 ವರ್ಷದ ಮಹಿಳೆ, ಹಳೆಹುಬ್ಬಳ್ಳಿಯ ಸದರಸೊಪ್ಪ ನಿವಾಸಿಯಾದ 83 ವರ್ಷದ ವೃದ್ದ ಮಹಿಳೆ ಮೃತಪಟ್ಟಿದ್ದು, ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಮತ್ತೆ 174 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2839ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ ಈವರೆಗೆ 1083 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ 1671 ಪ್ರಕರಣಗಳು ಸಕ್ರಿಯವಾಗಿವೆ. ಇನ್ನೂ 23 ಜನ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ‌ ಎಂದು ಡಿಸಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

174 ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು:
ರಾಯಾಪೂರ, ಕೊಪ್ಪದ ಕೇರಿ ಜನತಾ ಪ್ಲಾಟ್, ಗಾಂಧಿನಗರ, ಮಣಿಕಿಲ್ಲಾ, ಹಳೆಯ ಎಸ್‍ಪಿ ವೃತ್ತ, ಆದಿಶಕ್ತಿ ನಗರ, ಸಪ್ತಾಪೂರ, ಪುಡಕಲಕಟ್ಟಿ ಗ್ರಾಮದ ಹೂಗಾರ ಓಣಿ, ನಿಜಾಮುದ್ದೀನ ಕಾಲನಿ ನಾಲ್ಕನೇ ಕ್ರಾಸ್, ಎಸ್ ಡಿ ಎಂ ಆಸ್ಪತ್ರೆ ಅವರಣ,  ಲೈನ್ ಬಜಾರ್ ಭೋವಿಗಲ್ಲಿ, ಕೋಟ್ ಸರ್ಕಲ್, ಅರಣ್ಯ ಕಾಲೊನಿ, ಹಾವೇರಿಪೇಟ ಕುರುಬರ ಓಣಿ, ಕೃಷಿ ವಿಶ್ವವಿದ್ಯಾಲಯ ಎದರು, ಗೊಲ್ಲರ ಓಣಿ ಮೋದಲ ಕ್ರಾಸ್, ಸೈದಾಪುರ ಗೌಡರ ಓಣಿ, ಕುಮಾರೇಶ್ವರ ನಗರ, ಗರಗ ಗ್ರಾಮ, ವಿವೇಕಾನಂದ ನಗರ, ಟೋಲ್‍ನಾಕಾ ನಗರಕರ ಕಾಲೋನಿ,  ಕಲ್ಯಾಣನಗರ, ನೀರಲಕಟ್ಟಿ ಗ್ರಾಮ, ಕೋಟೂರ ಗ್ರಾಮ, ಹಳಿಯಾಳ ನಾಕಾ ದೂರದರ್ಶನ ಕೇಂದ್ರ ಹತ್ತಿರ, ಸತ್ತೂರ ವೈಷ್ಣವಿನಗರ, ಹಳೆಯ ಬಸ್ ನಿಲ್ದಾಣ ಹತ್ತಿರ ಪೊಲೀಸ್ ಕ್ವಾಟರ್ಸ್, ಗಂಗಾಧರ ಕಾಲೋನಿ, ಮುಗದ ಗ್ರಾಮ ಪ್ಯಾಟಿ ಓಣಿ, ಜಿಲ್ಲಾ ಆಸ್ಪತ್ರೆ ಹತ್ತಿರ, ನವಲೂರ ನೇಕಾರ ಓಣಿ, ಚರಂತಿಮಠ ಗಾರ್ಡನ್, ಹೊನ್ನಾಪೂರ ಗ್ರಾಮ, ರಜತಗಿರಿ, ಗುಲಗಂಜಿ ಕೊಪ್ಪ ಶಿವಳಿ ಪ್ಲಾಟ್, ಪೊಲೀಸ್ ಹೆಡ್ ಕ್ವಾರ್ಟರ್ಸ್, ಟೋಲನಾಕಾ ರಚನಾ ಅಪಾರ್ಟಮೆಂಟ್, ಕಾಮನಕಟ್ಟಿ ಓಣಿ, ಮರಾಠಾ ಕಾಲೋನಿ, ಹೊಸಯಲ್ಲಾಪುರ, ರಾಜ್‍ನಗರ, ಕರ್ನಾಟಕ ವಿವಿ ಆವರಣ, ಸುತಗಟ್ಟಿ ಕುಂಬಾರ ಓಣಿ, ಜನತ್ ನಗರ.

ಹುಬ್ಬಳ್ಳಿ ತಾಲೂಕು : ಕುಸುಗಲ್ ರಸ್ತೆ ಸುಭಾಸ ನಗರ, ದೇಶಪಾಂಡೆ ಎಸ್ಟೇಟ್ ಶಂಕರ ಶಾಲೆ ಹತ್ತಿರ, ಕಾರವಾರ ರಸ್ತೆಯ ಪೊಲೀಸ್ ಹೆಡ್ ಕ್ವಾರ್ಟರ್ಸ್, ವಿದ್ಯಾನಗರ, ಕಿಮ್ಸ್ ಆವರಣ, ವಾಳವೆಕರ ಓಣಿ, ಚೇತನಾ ಕಾಲೋನಿ, ಪಗಡಿ ಓಣಿ ವೀರಾಪೂರ ರಸ್ತೆ, ಸಿಲ್ವರ್ ಟೌನ್, ಶಕ್ತಿ ಕಾಲೋನಿ, ಹಳೆಯ ಹುಬ್ಬಳ್ಳಿ, ಮಗಜಿಕೊಂಡಿ ಲೇಔಟ್, ಘಂಟಿಕೇರಿ, ನವ ಅಯೋಧ್ಯಾನಗರ, ಅಮರಗೋಳ ಚವಡಿ ಓಣಿ, ಕನ್ಹಯ್ಯಾ ಅಪಾರ್ಟಮೆಂಟ್, ಮದರ್ ಥೆರೆಸಾ ಕಾಲೋನಿ, ದೇವರಗುಡಿಹಾಳ ಪರಸಾಪೂರ ಓಣಿ, ಗದಗ ರಸ್ತೆ ರೇಲ್ವೆ ಕಲ್ಯಾಣ ಮಂಟಪ ಹತ್ತಿರ, ಕೇಶ್ವಾಪೂರ ಕಾಡಸಿದ್ಧೇಶ್ವರ ಕಾಲೋನಿ, ಆದರ್ಶನಗರ, ಬಾಣತಿಕಟ್ಟ, ಶೆಟ್ಟರ ಕಾಲೋನಿ ಕುಮಾರವ್ಯಾಸ ನಗರ, ಅಕ್ಷಯ ಪಾರ್ಕ್ ಗೋಕುಲ ರಸ್ತೆ, ಎಬೆಂಜರ್ ಅಪಾರ್ಟಮೆಂಟ್, ಅಧ್ಯಾಪಕ ನಗರ, ಹಿರೇಪೇಟ, ರಾಧಾಕೃಷ್ಣನಗರ, ಕುಲಕರ್ಣಿ ಹಕ್ಕಲ ಮೀನು ಮಾರುಕಟ್ಟೆ ಹತ್ತಿರ, ಮಂಟೂರ ರಸ್ತೆ ನ್ಯಾಷನಲ್ ಕಾಲೋನಿ, ಘೋಡಕೆ ಪ್ಲಾಟ್, ರಾಯನಾಳ ಗ್ರಾಮ, ನೇಕಾರ ನಗರ, ಡಾಕಪ್ಪ ಸರ್ಕಲ್, ಪಂಜಿ ಓಣಿ ಚನ್ನಪೇಟ್, ನವನಗರ, ಸಿದ್ಧಾರೂಢ ಮಠ ಬಾಫಣಾ ಲೇಔಟ್, ತಬೀಬ್ ಲ್ಯಾಂಡ್, ಗಣೇಶ ಕಾಲೋನಿ, ಗೋಕುಲಾ ಅಪಾರ್ಟಮೆಂಟ್, ಕೋಟಿಲಿಂಗನಗರ, ಗುರುನಾಥ ನಗರ, ಎಸ್ ಎಂ ಕೃಷ್ಣನಗರ, ಲೋಕಪ್ಪನ ಹಕ್ಕಲ, ನಾವಳ್ಳಿ ಪ್ಲಾಟ್, ಗೋಕುಲ ರಸ್ತೆ ಯಾವಗಲ್ ಪ್ಲಾಟ್, ಮಧೂರಾ ಕಾಲೋನಿ, ಕಾರವಾರ ರಸ್ತೆ ಸುಭಾಸ ನಗರ, ಬೀರಬಂದ್ ಓಣಿ, ಈಶ್ವರನಗರ, ಬೈಲಪ್ಪನವರ ನಗರ, ಆದರ್ಶನಗರ, ಸಿದ್ಧೇಶ್ವರ ಪಾರ್ಕ್, ಹಳೆ ಹುಬ್ಬಳ್ಳಿ ಕರಗಿ ಓಣಿ, ಶಾಂತಿನಗರ.

Advertisement

ಕುಂದಗೋಳ ತಾಲೂಕು: ಕುಂದಗೋಳ ಸಾರ್ವಜನಿಕ ಆಸ್ಪತ್ರೆ, ಗುಡಿಗೇರಿ ಮಾರುಕಟ್ಟೆ, ಮಳಲಿ, ಯಲಿವಾಳ.

ಕಲಘಟಗಿ ತಾಲೂಕು: ಮಿಶ್ರಿಕೋಟಿ, ಆಸ್ತಕಟ್ಟಿ ಗ್ರಾಮ.

ನವಲಗುಂದ ತಾಲೂಕು: ಆಯಟ್ಟಿ ಗ್ರಾಮ.

ಅಣ್ಣಿಗೇರಿ ತಾಲೂಕು: ಅಣ್ಣಿಗೇರಿ ಶಂಕರ ಕಾಲೋನಿ ಹಾಗೂ, ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕು ಬನ್ನೂರ, ಕೊಡಬಾಳ, ಹಾವೇರಿ ಅಶ್ವಿನಿ ನಗರ, ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿ, ಬೈಲಹೊಂಗಲದ ಲತ್ತಿಕಟ್ಟಿ ಓಣಿ, ಬಾಗಲಕೋಟ ಜಿಲ್ಲೆಯ ನವನಗರದಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next