Advertisement
ದೋಹಾಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್ ಕೈಕೊಟ್ಟು ಅರ್ಧಗಂಟೆಯಲ್ಲಿ ಅದು ಮತ್ತೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡಿಂಗ್ ಆಗಲಿದೆ ಎನ್ನುವ ಸಂದೇಶವನ್ನು ಪೈಲಟ್ ಎಟಿಎಸ್ ಕೇಂದ್ರಕ್ಕೆ ರವಾನಿ ಸಿದ ತತ್‌ಕ್ಷಣ ಇಡೀ ವಿಮಾನ ನಿಲ್ದಾಣ ದಲ್ಲಿ ಒಂದು ರೀತಿಯ ತುರ್ತು ಪರಿಸ್ಥಿತಿ ಯನ್ನೇ ಘೋಷಿಸಲಾಗಿತ್ತು. ಸಂದೇಶ ಕಳುಹಿಸುವಾಗ ವಿಮಾನವು ಎಟಿಎಸ್ ಕೇಂದ್ರದಿಂದ 100 ಮೈಲಿ ದೂರದಲ್ಲಿತ್ತು. ಅದ ರಂತೆ ಅಪಾಯಕಾರಿ ಪರಿಸ್ಥಿತಿ ಎದು ರಿ ಸುವುದಕ್ಕೆ ಸಕಲ ಸಿದ್ಧತೆ ಕೈಗೊಂಡಿರ ಬೇಕಾದರೆ ಅಷ್ಟು ಹೊತ್ತು ವಿಮಾನದ ಒಳಗೆ ಕುಳಿತಿದ್ದ 173 ಮಂದಿ ಪ್ರಯಾ ಣಿಕರು ಹಾಗೂ ಮುಂದೆ ಎದು ರಾಗಬಹುದಾದ ಅಪಾಯದ ಸ್ಥಿತಿ ಗೊತ್ತಿದ್ದ ಪೈಲಟ್‌ನ ಮಾನಸಿಕ ಸ್ಥಿತಿ ಹೇಗಿದ್ದಿರ ಬಹುದು. ಈ ವಿಮಾನ ಕೂಡ ತುರ್ತು ಭೂಸ್ಪರ್ಶವಾಗಬೇಕಾದರೆ, ಪ್ರಯಾಣಿಕರೆಲ್ಲ, ತಮ್ಮ ಎರಡೂ ಕಾಲುಗಳನ್ನು ಕುಳಿತ ಸೀಟಿನ ಹಿಂದಕ್ಕೆ ಮಡಚಿ ಎರಡೂ ಕೈ ಗಳನ್ನು ಮುಂದಕ್ಕೆ ಚಾಚಿ ತಲೆಯನ್ನು ಸೀಟಿಗೆ ಒರಗಿಸಿಕೊಂಡು ಯಾವುದೇ ತರಹದ ಅಪಾಯದ ಕ್ಷಣಕ್ಕೂ ಸಿದ್ಧರಾಗಿ ಕುಳಿತು ಕೊಂಡಿದ್ದರು. ಅಂತಹ ಸನ್ನಿವೇಶದಲ್ಲಿ ಪ್ರಯಾಣಿಕರ ಆಕ್ರಂದನ, ಕಿರುಚಾಟಕ್ಕೆ ವಿಮಾನದ ಪೈಲಟ್ ಆಶಿತ್ ಸಿಂಘೆ ಕೂಡ ಒಂದು ಕ್ಷಣ ದಂಗಾಗಿ ಹೋಗಿದ್ದರು ಎನ್ನಲಾಗಿದೆ. ಆದರೂ ಮಾನಸಿಕವಾಗಿ ದೃಢ ಸಂಕಲ್ಪ ಮಾಡಿಕೊಂಡು ಯಾವುದೇ ಆತಂಕವನ್ನು ತೋರ್ಪಡಿಸದೆ ಅತ್ಯಂತ ಯಶಸ್ವಿಯಾಗಿ ವಿಮಾನವನ್ನು ಲ್ಯಾಂಡಿಂಗ್ ಮಾಡಿದ್ದ ಕಾರಣಕ್ಕೆ ಅವರು ಅದರಲ್ಲಿದ್ದ ಪ್ರಯಾಣಿಕರ ಪಾಲಿಗೆ ಆ ಕ್ಷಣಕ್ಕೆ ನಿಜವಾದ ದೇವರೇ ಆಗಿ ಹೋಗಿದ್ದರು.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಇಲ್ಲಿವರೆಗೆ ವಿಮಾನ ತುರ್ತು ಭೂ ಸ್ಪರ್ಶ ವೇಳೆ ಇಷ್ಟೊಂದು ದೊಡ್ಡ ಮಟ್ಟದ ಆತಂಕ ಅಥವಾ ಗಂಭೀರ ವಾತಾವರಣದ ಪರಿಸ್ಥಿತಿ ಎದುರಾಗಿರಲಿಲ್ಲ. ಜಿಲ್ಲಾಡಳಿತದಿಂದ ಹಿಡಿದು ಉನ್ನತ ಪೊಲೀಸ್ ಅಧಿಕಾರಿಗಳ ತನಕ ಸಂಬಂಧ ಪಟ್ಟ ಎಲ್ಲರಿಗೂ ತುರ್ತು ಸಂದೇಶ ರವಾನಿಸಲಾಗಿತ್ತು. ನಿಲ್ದಾಣದ ಎಲ್ಲ ನಾಲ್ಕು ಅಗ್ನಿಶಾಮಕ ಯೂನಿಟ್‌ಗಳನ್ನು ಸನ್ನದ್ಧಗೊಳಿಸಲಾಗಿತ್ತು. ಒಂದು ಘಟಕವನ್ನು ವಿಮಾನ ಬಂದು ನಿಲ್ಲು ವಾಗ ಹಿಂಭಾಗದಲ್ಲಿ, ಒಂದನ್ನು ಮಧ್ಯ ಭಾಗದಲ್ಲಿ ಮತ್ತೂಂದು ಯೂನಿಟ್ ಅನ್ನು ವಿಮಾನದ ಮುಂಭಾಗದಲ್ಲಿ ಸಿದ್ಧಗೊಳಿಸಲಾಗಿತ್ತು. ನಾಲ್ಕನೇ ಯೂನಿಟ್ ಅನ್ನು ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆ ಏನಾ ದರೂ ದುರಂತ ಸಂಭವಿಸಿದರೆ ತತ್‌ಕ್ಷಣ ಅಲ್ಲಿಗೆ ಧಾವಿಸುವುದಕ್ಕೆ ಎನ್ನುವ ರೀತಿ ಸಿದ್ಧ ಗೊಳಿಸಲಾಗಿತ್ತು. ಅದಕ್ಕಿಂತಲೂ ಮುಖ್ಯವಾಗಿ ತುರ್ತು ಭೂಸ್ಪರ್ಶದ ಸಂದೇಶ ಬಂದ ತತ್‌ಕ್ಷಣ ನಿಲ್ದಾಣದ ಅಗ್ನಿಶಾಮಕ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಸಿಬಂದಿಯನ್ನು ಸ್ಥಳಕ್ಕೆ ಕರೆಸಿಕೊಳ್ಳ ಲಾಗಿತ್ತು. ಮಂಗಳೂರಿನ ಅಗ್ನಿಶಾಮಕ ಠಾಣೆಗಳಿಂದಲೂ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ನಿಲ್ದಾಣದ ಹೊರಭಾಗಕ್ಕೆ ಕರೆಸಿಕೊಳ್ಳಲಾಗಿತ್ತು. “ದಿ ಬೆಸ್ಟ್ ಸೇಫ್ ಲ್ಯಾಂಡಿಂಗ್’
173 ಪ್ರಯಾಣಿಕರನ್ನು ಹೊತ್ತ ವಿಮಾನವು ಕೇವಲ ಒಂದು ಎಂಜಿನ್ ಸಾಮರ್ಥ್ಯದಿಂದ ತುರ್ತು ಭೂಸ್ಪರ್ಶ ಮಾಡಬೇಕಾದರೆ ಕಾರ್ಯ ಸ್ಥಗಿತ ಗೊಂಡಿರುವ ಎಂಜಿನ್‌ನಿಂದ ತೈಲ ಸೋರಿಕೆ ಯಾಗಿರುವ ಅಪಾಯ ವಿರು ತ್ತದೆ. ಅಷ್ಟೇ ಅಲ್ಲ, ಲ್ಯಾಂಡಿಂಗ್ ಆಗು ತ್ತಿದ್ದಂತೆ 2ನೇ ಎಂಜಿನ್ ಕೂಡ ಕೈಕೊಡಬಹುದು. ಅದೆಲ್ಲಕ್ಕಿಂತಲೂ ಮುಖ್ಯವಾಗಿ ಈ ಸನ್ನಿವೇಶದಲ್ಲಿ ಗಾಳಿಗೆ ಹೊಂದಾಣಿಕೆಯಾಗದೆ ವಿಮಾನ ರನ್‌ವೇನಿಂದ ಹೊರ ಹೋಗುವ ಅಪಾಯವೂ ಜಾಸ್ತಿಯಿರುತ್ತದೆ. ಆದರೆ, ಇದೆಲ್ಲ ಅಪಾಯದ ಪರಿಸ್ಥಿತಿ ನಡುವೆಯೂ ಪೈಲಟ್ ಆಶಿತ್ ಸಿಂಘೆ ವಿಮಾನ ನಿಲ್ದಾಣದಲ್ಲಿ ರಕ್ಷಣೆಗೆ ನಿಂತಿದ್ದ ಪ್ರತಿಯೊಬ್ಬರೂ ಆಶ್ಚರ್ಯಪಡುವ ರೀತಿ ಲ್ಯಾಂಡಿಂಗ್ ಮಾಡಿಸಿದ್ದಾರೆ. ಹೀಗಾಗಿ, ಮಂಗಳೂರಿನಲ್ಲಿ ಇಲ್ಲಿವರೆಗೆ ಇಂಥ ತುರ್ತು ಪರಿಸ್ಥಿತಿ ಆಗಿರುವ “ದಿ ಬೆಸ್ಟ್ ಸೇಫ್ ಲ್ಯಾಂಡಿಂಗ್’ ಎನ್ನು ವುದು ಅಧಿಕಾರಿಗಳ ಪ್ರಶಂಸೆಯ ಮಾತು.
Related Articles
ಪೈಲಟ್ ಸಿಂಘೆ ಈಗ ಆ ವಿಮಾನದಲ್ಲಿದ್ದ ಪ್ರಯಾಣಿಕರ ಪಾಲಿಗೆ ದೇವರೆನಿಸಿ ಕೊಂಡಿದ್ದಾರೆ. ಸಾರ್ವಜನಿಕರ ಪಾಲಿಗೆ ಹೀರೋ ಆಗಿದ್ದಾರೆ. ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ ಪ್ರದರ್ಶಿಸಿದ ಅವರಿಗೆ ಇಲ್ಲಿ ವರೆಗೆ ಜಿಲ್ಲಾಡಳಿತದಿಂದಾಗಲಿ ಅಥವಾ ಸಂಬಂಧ ಪಟ್ಟ ಇತರೆ ಸಂಸ್ಥೆ ಗಳಿಂದಾಗಲಿ ಯಾವುದೇ ಮನ್ನಣೆ- ಪ್ರಶಂಸೆ ಸಿಕ್ಕಿಲ್ಲ. ಪ್ರಾಧಿಕಾರ ಹಾಗೂ ಏರ್ ಇಂಡಿಯಾ ಸಂಸ್ಥೆಯವರು ಮಾತ್ರ ಇದೆಲ್ಲ ಮಾಮೂಲಿ ಎಂಬಂತೆ ಬಿಂಬಿಸುತ್ತಿದ್ದಾರೆ.
Advertisement
ಪ್ರಯಾಣಿಕರ ಜೀವ ಉಳಿಸಿದ ಪೈಲಟ್ ಅವರನ್ನು ಅಭಿನಂದಿಸುವುದು ಕೂಡ ಅದರ ಕಂಪೆನಿಗೆ ಬಿಟ್ಟ ವಿಚಾರ ಎಂದು ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್ ಅವರು ಹೇಳಿದ್ದಾರೆ.
ಲಾರಿಯಲ್ಲಿ ಹೊರಟ ಹೊಸ ಎಂಜಿನ್ಎಂಜಿನ್ ವೈಫಲ್ಯದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಏರ್ ಇಂಡಿಯಾದ ವಿಮಾನವನ್ನು ಈಗ ಯಥಾ ಸ್ಥಿತಿಯಲ್ಲಿ ನಿಲ್ಲಿಸಲಾಗಿದೆ. ಈ ವಿಮಾನದ ಎಂಜಿನ್ ಅನ್ನೇ ಬದಲಿಸಬೇಕಾಗಿರುವ ಕಾರಣ ಅಲ್ಲಿವರೆಗೆ ಅದನ್ನು ಕಾರ್ಯಾಚರಣೆಗೆ ಬಳಸುವಂತಿಲ್ಲ. ಮೂಲಗಳ ಪ್ರಕಾರ, ಹೊಸ ಎಂಜಿನ್ ಈಗಾಗಲೇ ತಿರುವನಂತಪುರದಿಂದ ಲಾರಿಯಲ್ಲಿ ಹೊರಟಿದ್ದು, ಗುರುವಾರದ ವೇಳೆಗೆ ಅದು ಮಂಗಳೂರು ವಿಮಾನ ನಿಲ್ದಾಣವನ್ನು ತಲುಪುವ ಸಾಧ್ಯತೆ ಯಿದೆ. ಆ ಮೂಲಕ ಆಯುಧ ಪೂಜೆ ವೇಳೆಗೆ ಹೊಸ ಎಂಜಿನ್ ಅಳವಡಿಕೆ ಯಾಗಿ ವಿಮಾನ ಯಾನ ಆರಂಭ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಸುರೇಶ್ ಪುದುವೆಟ್ಟು