ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಫೆಬ್ರವರಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ, ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 17,500 ಪುಟಗಳಷ್ಟು ಆರೋಪಪಟ್ಟಿಯನ್ನು ಪೊಲೀಸರು ಕಾರ್ಕದೂಮಾ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ 2,692 ಪುಟಗಳಷ್ಟು ಆರೋಪ ಪಟ್ಟಿ ಇದೆ. ಉಳಿದ ಪುಟಗಳಲ್ಲಿ ಅದಕ್ಕೆ ಸಂಬಂಧಿಸಿದ ವಿವರಣೆಗಳಿವೆ.
ಅದನ್ನು ಎರಡು ಸ್ಟೀಲ್‌ನ ಟ್ರಂಕ್‌ಗಳ ಮೂಲಕ ಕೋರ್ಟ್‌ಗೆ ತರಲಾಗಿತ್ತು. ಗಲಭೆ, ಅಹಿತಕರ ಘಟನೆಗಳಿಗೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ 15ಮಂದಿಯ ಹೆಸರುಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ.
ನತಾಶಾ ನರ್ವಾಲ್, ದೇವಾಂಗ ಕಾಲಿತಾ, ಆಸಿಫ್ ಇಕ್ಬಾಲ್ ತನ್ಹಾ, ಇಶ್ರತ್ ಜಹಾನ್, ಮೀರನ್ ಹೈದರ್, ಸಫೂರಾ ಜರ್ಗಾರ್ ಮತ್ತು ಖಾಲಿಫ್ ಸೈಪಿ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಅವರೆಲ್ಲರ ವಿರುದ್ಧ ಕಠಿಣ ಕಾನೂನು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯನ್ವಯ ಕೇಸು ದಾಖಲಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಯವರಿಗೆ 70ನೇ ಹುಟ್ಟುಹಬ್ಬದ ಸಂಭ್ರಮ; ರಾಹುಲ್, ಕೇಜ್ರಿವಾಲ್ ಶುಭಾಶಯ
ವಾಟ್ಸ್‌ಆ್ಯಪ್ ಮೂಲಕ ಗಲಭೆಗೆ ಕುಮ್ಮಕ್ಕು ನೀಡಿದ ಮಾಹಿತಿ, ಮೊಬೈಲ್ ಕರೆಗಳ ಆಧಾರದಲ್ಲಿ ಆರೋಪಪಟ್ಟಿ ಸಿದ್ಧ ಪಡಿಸಲಾಗಿದೆ. ಫೆಬ್ರವರಿಯಲ್ಲಿ ನಡೆದಿದ್ದ ಪ್ರಕರಣದಲ್ಲಿ 53 ಮಂದಿ ಅಸುನೀಗಿ, 200ಕ್ಕೂ ಅಧಿಕ ಮಂದಿ ಗಾಯ ಗೊಂಡಿದ್ದರು. ಈಗಾಗಲೇಬಂಧನಕ್ಕೊಳಗಾಗಿರುವ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್, ಶಾರ್ಜಿಲ್ ಇಮಾಮ್ ಹೆಸರು ಚಾರ್ಜ್ ಶೀಟ್‌ನಲ್ಲಿಲ್ಲ. ದೆಹಲಿ ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಬಲ ಟೀಕೆ ವ್ಯಕ್ತವಾಗಿರುವ ಈ ಗಲಭೆ ಪ್ರಕರಣದಲ್ಲಿ 751ಕೇಸುಗಳನ್ನು ದಾಖಲಿಸಲಾಗಿದೆ.