ಮಣಿಪಾಲ: ಮದುವೆ ಎಂದರೆ ವರ್ಷಗಳ ಸಿದ್ಧತೆ. ನಿಶ್ಚಿತಾರ್ಥ ಕಾರ್ಯಕ್ರಮದ ಬಳಿಕ ಏರ್ಪಡುವ ತಯಾರಿಯ ಜತೆಗೆ ಸಂಭ್ರಮ ಮನೆಮಾಡುತ್ತದೆ. ಬಟ್ಟೆ ಶಾಪಿಂಗ್, ಒಡವೆ ಕೊಂಡುಕೊಳ್ಳುವುದು ಮೊದಲಾದ ಕಾರ್ಯಗಳೊಂದಿಗೆ ಭರಪೂರ ಸಿದ್ಧತೆಗಳು ನಡೆಯುತ್ತವೆ. ಮದುವೆಯ ವಾರದ ಮೊದಲು ಅತಿಥಿಗಳು ಆಗಮಿಸುತ್ತಾರೆ. ಸಂಭ್ರಮ ಸಡಗರದ ವಾತಾವರಣ ನೆಲೆಸುತ್ತದೆ.
ಇಂತಹದ್ದೇ ಸಂಭ್ರಮದಲ್ಲಿದ್ದ ಅಹ್ಮದಾಬಾದ್‌ನ 1700 ಕುಟುಂಬಗಳಿಗೆ ನಿರಾಶೆಯಾಗಿದೆ. ಶನಿವಾರ ಮತ್ತು ರವಿವಾರ ಅತೀ ಹೆಚ್ಚು ವಿವಾಹ ಸಮಾರಂಭಗಳನ್ನು ಆಯೋಜಿಸಲಾಗಿತ್ತು. ಆದರೆ ಕೋವಿಡ್ ಹೆಚ್ಚುತ್ತಿರುವುದನ್ನು ಮನಗಂಡು ಯಾವುದೇ ಮುನ್ಸೂಚನೆಯಿಲ್ಲದೆ ವಿಧಿಸಲಾದ ಕರ್ಫ್ಯೂ ವಿವಾಹಿತ ಕುಟುಂಬಗಳನ್ನು ಗೊಂದಲಕ್ಕೀಡು ಮಾಡಿದೆ
ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಹೆಚ್ಚುತ್ತಿರುವ ಕೋವಿಡ್ ಕಾರಣಕ್ಕೆ ಬೆಳಗ್ಗೆ 9ರಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ ವಿಧಿಸಲಾಗಿದೆ. ಶನಿವಾರ ಮತ್ತು ರವಿವಾರ ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಉದ್ಯಾನಗಳು, ಪಾರ್ಟಿ ಪ್ಲಾಟ್‌ಗಳನ್ನು ಬುಕ್ ಮಾಡಲಾಗಿದೆ, ವೆಡ್ಡಿಂಗ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಮತ್ತು ಅತಿಥಿಗಳು ಸಹ ಆಗಮಿಸಿದ್ದಾರೆ.
ಸುಮಾರು 8 ತಿಂಗಳ ಬಳಿಕ ಶನಿವಾರದಿಂದ ವಿವಾಹಗಳು ಪ್ರಾರಂಭವಾಗುತ್ತಿವೆ. ಈಗ ಈ ಎರಡು ದಿನಗಳು (ಶನಿವಾರ-ರವಿವಾರ) ಕರ್ಫ್ಯೂ ವಿಧಿಸಲಾಗಿದೆ. ಇದರಿಂದ ವಿವಾಹ ಕಾರ್ಯಕ್ರಮ ಏರ್ಪಡಿಸುವ ಉದ್ಯಮಿಗಳಿಗೆ ದೊಡ್ಡ ನಷ್ಟವಾಗಲಿದೆ.
ಎರಡು ದಿನಗಳಲ್ಲಿ 1700 ಮದುವೆಗಳು ನಡೆಯಲಿರುವುದರಿಂದ ಉದ್ಯಾನಗಳು, ಪಾರ್ಟಿ ಪ್ಲಾಟ್‌ಗಳು, ಡಿಜೆಗಳು ಮತ್ತು ಅನೇಕ ಸಣ್ಣ ಉದ್ಯಮಗಳಿಗೆ ನಿಷೇಧಾಜ್ಞೆ ಭಾರಿ ನಷ್ಟವನ್ನುಂಟು ಮಾಡಲಿದೆ. ವ್ಯವಹಾರ ಕ್ಷೇತ್ರ ಸಂಪೂರ್ಣವಾಗಿ ಕುಸಿದಿದೆ. ಅನ್ಲಾಕ್ ಮಾಡಿದ ಬಳಿಕ ಚೇತರಿಕೆಯಾಗುವ ಭರವಸೆ ಇತ್ತು. ಈಗ ಅದೂ ವಿಫಲವಾಗಿದೆ.
ಉತ್ತರ ಭಾರತದಲ್ಲಿ ಈ ಸಮಯದಲ್ಲಿ ಹೆಚ್ಚು ವಿವಾಹ ಕಾರ್ಯಗಳು ನಡೆಯುತ್ತವೆ. ಜೂನ್ 15, 25 ಮತ್ತು 29 ರಂದು ನೂರಾರು ವಿವಾಹಗಳು ನಿಶ್ಚಯವಾಗಿದ್ದವು. ಆದರೆ ವಿವಾಹ ಕಾರ್ಯಗಳಉ ಕೋವಿಡ್‌ಗೆ ಬಲಿಯಾಗಿವೆ. ಈಗ ಅದೇ ಪರಿಸ್ಥಿತಿ ಮರುಕಳಿಸಲಿವೆ. ನವೆಂಬರ್ 20-21, 26, 30ರಲ್ಲಿ ಹಲವು ಮುಹೂರ್ತಗಳಿವೆ. ಅದರಲ್ಲಿ ಈ ಎರಡು ದಿನಗಳು ಕರ್ಫ್ಯೂನಲ್ಲಿ ಕಳೆದೋಗುತ್ತವೆ. ಈ ದಿನಗಳು ಕಳೆದರೆ ಡಿಸೆಂಬರ್ 1,2,6,7, 8,9,11 ತಾರೀಖಿನಲ್ಲಿ ಮುಹೂರ್ತಗಳಿವೆ. ಲಾಕ್‌ಡೌನ್ ಪ್ರಕ್ರಿಯೆಯು ಈ ರೀತಿ ಮುಂದುವರಿದರೆ, ವಿವಾಹ ಉದ್ಯಮಗಳು ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ.