ಪುಣೆ, ಸೆ. 24: ಜಿಲ್ಲೆಯಲ್ಲಿನಡೆಯುತ್ತಿರುವ ನನ್ನ ಕುಟುಂಬ-ನನ್ನ ಜವಾಬ್ದಾರಿ ಅಭಿಯಾನದಲ್ಲಿ ಶಂಕಿತರಾಗಿ ಗುರುತಿಸಲ್ಪಟ್ಟ 17,196 ಮಂದಿಯಲ್ಲಿ 2,006 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ ಎಂದು ಸಮೀಕ್ಷೆ ಹೇಳಿದೆ.
ಕೋವಿಡ್ ಪ್ರಕರಣಗಳನ್ನು ಪತ್ತೆ ಹಚ್ಚಲು ರಾಜ್ಯ ಸರಕಾರ ಪ್ರಾರಂಭಿಸಿರುವ ಅಭಿಯಾನದ ಭಾಗವೇ ಈ ಸಮೀಕ್ಷೆ ಯಾಗಿದ್ದು, ಈ ಅಭಿಯಾನವು ಪ್ರತಿಯೊ ಬ್ಬರನ್ನು ತೀವ್ರ ಉಸಿರಾಟದ ಕಾಯಿಲೆಗಳು ಮತ್ತು ಇನ್‌ಫ್ಲುಯೆಂಜಾ ತರಹದ ಅನಾರೋಗ್ಯ ರೋಗಲಕ್ಷಣಗಳಿಗಾಗಿ ಮತ್ತು ಕೊಮೊರ್ಬಿಡ್ ಹೊಂದಿರುವವರನ್ನು ಪರೀಕ್ಷಿಸಲಾಗುತ್ತಿದ್ದು, ಇದರಿಂದ ಅಗತ್ಯವಿದ್ದರೆ ಆರಂಭಿಕ ಕೋವಿಡ್ ಚಿಕಿತ್ಸೆಯನ್ನು ಪ್ರಾರಂಭಿಸಬಹುದು ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆ ಮತ್ತು ಪಿಂಪ್ರಿ-ಚಿಂಚ್ವಾಡ್ ಮಹಾನಗರ ಪಾಲಿಕೆ ಮತ್ತು ಪುಣೆ ಜಿಲ್ಲೆಗಾಗಿ ಜಿಲ್ಲಾ ಪರಿಷತ್ ನಡೆಸಿದ ಸಮೀಕ್ಷೆಯು ಮೌಖೀಕ ಪ್ರಶ್ನಿಸುವಿಕೆ, ತಾಪಮಾನ ಮತ್ತು ಆಮ್ಲಜನಕದ ಮಟ್ಟವನ್ನು ಪತ್ತೆಹಚ್ಚುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನು ವಿವಿಧ ರೋಗಲಕ್ಷಣಗಳಿಗೆ ಪರೀಕ್ಷಿಸುವ ಗುರಿಯನ್ನು ಹೊಂದಿದೆ. ಜಿಲ್ಲೆಯ ಜನಸಂಖ್ಯೆಯು 1 ಕೋಟಿಗಿಂತ ಹೆಚ್ಚಿನದಾಗಿದ್ದು, ಇಲ್ಲಿಯವರೆಗೆ 20.22 ಲಕ್ಷ ಜನರನ್ನು ಪರೀಕ್ಷಿಸಲಾಗಿದೆ. ಇದರಲ್ಲಿ ಸುಮಾರು 17,196 ಮಂದಿ ಕೋವಿಡ್ ಸೋಂಕಿಗೆ ಶಂಕಿತರಾಗಿ ಪರೀಕ್ಷಿಸಲ್ಪಟ್ಟಿದ್ದು, 2,006 ಮಂದಿಯಲ್ಲಿ ಸೋಂಕು ದೃಡಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲಾಧಿಕಾರಿ ರಾಜೇಶ್ ದೇಶ್ಮುಖ್ ಅವರು ಮಾಹಿತಿ ನೀಡಿ, ನಾವು ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆಯನ್ನು ಪ್ರಾರಂಭಿಸಿದ್ದು, ಎಲ್ಲ ಗ್ರಾಮ ಪಂಚಾಯತ್‌ಗಳನ್ನು ಒಮ್ಮೆ ಸಮೀಕ್ಷೆ ನಡೆಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಕೊಮೊರ್ಬಿಡ್ ಪರಿಸ್ಥಿತಿಗಳ ಬಗ್ಗೆ ನಮ್ಮಲ್ಲಿ ಸಂಪೂರ್ಣ ಮಾಹಿತಿ ಇದೆ. ಇಲ್ಲಿಯವರೆಗೆ ಪುಣೆ ನಗರದಲ್ಲಿ 6.26 ಲಕ್ಷಕ್ಕೂ ಅಧಿಕ ಮಂದಿಯನ್ನು ಪರೀಕ್ಷಿಸಲಾಗಿದೆ. ಪಿಂಪ್ರಿ-ಚಿಂಚ್ ವಾಡ್‌ನಲ್ಲಿ 1.26 ಲಕ್ಷ ಮತ್ತು ಪುಣೆ ಗ್ರಾಮೀಣ ಪ್ರದೇಶದಲ್ಲಿ 12.70 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷಿಸಲಾಗಿದೆ ಎಂದಿದ್ದಾರೆ.
ಪುಣೆ ನಗರ ಮತ್ತು ಪಿಸಿಎಂಸಿ ಪ್ರದೇಶಗಳಿಗೆ ಜಿಲ್ಲಾಡಳಿತ ಪ್ರಾರಂಭಿಸಬೇಕಿದ್ದ ಸೀರೊ ಸಮೀಕ್ಷೆ ಇನ್ನೂ ಪ್ರಾರಂಭವಾಗಬೇಕಿದೆ ಎಂದು ವಿಭಾಗೀಯ ಆಯುಕ್ತ ಸೌರಭ್ ರಾವ್ ತಿಳಿಸಿದ್ದಾರೆ. ನಾನು ಸಾಸೂನ್ ಆಸ್ಪತ್ರೆಯಿಂದ ವಿವರವಾದ ಪ್ರಸ್ತಾವನೆಯನ್ನು ಪಡೆದುಕೊಂಡಿದ್ದು, ಅದು ಸಮೀಕ್ಷೆಯನ್ನು ಪ್ರಾರಂಭಿಸಲಿದೆ. ಇದನ್ನು ಭಾರತೀಯ ಜೈನ ಸಂಘಟನೆ ನಡೆಸಲಿದೆ. ಕೆಲವೇ ದಿನಗಳಲ್ಲಿ ನಾವು ಪ್ರಸ್ತಾವನೆಯನ್ನು ಪ್ರಕ್ರಿಯೆಗೊಳಿಸುತ್ತೇವೆ. ಸೀರೊ ಸಮೀಕ್ಷೆಯು ವೈರಸ್‌ನ ನಿಖರವಾದ ಹರಡುವಿಕೆಯನ್ನು ನಿರ್ಧರಿಸುತ್ತದೆ. ಯಾವ ಸಮಯದಲ್ಲಿ ಎಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಚೇತರಿಸಿಕೊಂಡಿರುವುದಾಗಿ ಇದು ತೋರಿಸುತ್ತಾರೆ ಎಂದಿದ್ದಾರೆ.