Advertisement
ರೈತರು ಎರಡು ಕಡೆ ವಿಮೆ ಮಾಡಿಸಿದ್ದಾರೆಂದು ಇಲ್ಲದ ಆಕ್ಷೇಪ ಎತ್ತಿ ವಿನಾಕಾರಣ ತನಿಖೆಯನ್ನು ಐದು ತಿಂಗಳು ನಡೆಸಿ ಒಂದು, ಎರಡುಹಾಗೂ ಮೂರು ಪಟ್ಟಿ ಸಿದ್ಧಪಡಿಸಿ ಡಿಸೆಂಬರ್ ಮೊದಲ ವಾರದಲ್ಲಿ ಮೊದಲ ಪಟ್ಟಿ ರೈತರಿಗೆ ಮಾತ್ರ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗಿ, ತದನಂತರ ಎರಡನೇ ಎರಡನೇ ಪಟ್ಟಿ ರೈತರಿಗೆ ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು.
Related Articles
Advertisement
ಈ ಹಣ 11 ಜಿಲ್ಲೆಗಳಲ್ಲಿನ ಬರಗಾಲ ಪೀಡಿತ ರೈತರಿಗೆ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಇದರಲ್ಲಿ ಕಲಬುರಗಿ-ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿಯಾದ ಬೆಳೆಗೆ ಪರಿಹಾರ ನೀಡಲಿಕ್ಕೆ ಬಾರದು. ಅತಿವೃಷ್ಟಿ ಹಾನಿಗೆ ಪರಿಹಾರವನ್ನು ಕೇಂದ್ರದಿಂದ ಬಿಡುಗಡೆಯಾಗಿ ಬಂದ ನಂತರವಷ್ಟೇ ವಿತರಿಸುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಕೇಂದ್ರದಿಂದ ಸದ್ಯಕ್ಕೆ ಕಲಬುರಗಿ-ಬೀದರ್ ರೈತರಿಗೆ ಬೆಳೆಹಾನಿಗೆ ಪರಿಹಾರ ಬಿಡುಗಡೆಯಾಗುವ ಯಾವುದೇ ಲಕ್ಷಣಗಳಿಲ್ಲ.
ಈ ಹಿನ್ನೆಲೆಯಲ್ಲಿಯೇ ಪರಿಹಾರ ದೊರೆಯುವುದು ಅನುಮಾನವೆಂದೇ ಹೇಳಲಾಗುತ್ತಿದೆ. ಕಳೆದ ಡಿಸೆಂಬರ್ 15ರಂದು ಕಲಬುರಗಿ-ಬೀದರ್ ಜಿಲ್ಲೆಯಲ್ಲಿನ ಅತಿವೃಷ್ಟಿ ಹಾನಿಗೆಂದು ಕೇಂದ್ರ ಗೃಹ ಖಾತೆಯಜಂಟಿ ಕಾರ್ಯದರ್ಶಿ ಬೀನಾ ಪ್ರಸಾದ್ ನೇತೃತ್ವದ ಹಾಗೂ ಕೃಷಿ ಇಲಾಖೆಯ ಎಸ್.ಎಂ. ಕೋಹಲಟ್ಕರ್, ಹಣಕಾಸು ಇಲಾಖೆಯ ಸಲಹೆಗಾರ ದೀನಾನಾಥ, ಕೇಂದ್ರ ಜಲ ಆಯೋಗದ ನಿರ್ದೇಶಕ (ಉಸ್ತುವಾರಿ) ಪಂಕಜ್‌ಕುಮಾರ ಶರ್ಮಾ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ನೀತಾ ತಹಲಿಯಾನಿ ಹಾಗೂ ಗೃಹ ಇಲಾಖೆ ಉಪ ಕಾರ್ಯದರ್ಶಿ ರೀನಾ ಗುಹಾ ಸದಸ್ಯರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಿದೆ.
ಈ ತಂಡ ವರದಿ ನೀಡಿದೆಯಾದರೂ ರಾಜ್ಯ ಸರ್ಕಾರದಿಂದಯಾವುದೇ ಒತ್ತಾಯ ಹೋಗಿಲ್ಲ. ಪ್ರಸಕ್ತ ವರ್ಷ ರಾಜ್ಯದಾದ್ಯಂತ ಬರಗಾಲ ಬಿದ್ದಿದೆಯಾದರೂ ಕಳೆದ ಸೆಪ್ಟೆಂಬರ್ ಮಾಸಾಂತ್ಯದಲ್ಲಿ ಕಲಬುರಗಿ-ಬೀದರ್ ಜಿಲ್ಲೆಯಲ್ಲಿ ಮಾತ್ರ ಅತಿವೃಷ್ಟಿ ಉಂಟಾಗಿ ಕಲಬುರಗಿ ಜಿಲ್ಲೆಯಲ್ಲಿ ಕೇಂದ್ರ ಪ್ರಕೃತಿ ವಿಕೋಪ ನಿಧಿ ನಿಯಮಾವಳಿ ಪ್ರಕಾರವೇ 62 ಕೋಟಿ ರೂ ಬೆಳೆಹಾನಿಯಾಗಿದೆ. ಅದೇ ರೀತಿ ಬೀದರ್ ಜಿಲ್ಲೆಯಲ್ಲಿ 195 ಕೋಟಿ ರೂ. ಬೆಳೆ ಹಾನಿಯಾಗಿದೆ.
ಇದಕ್ಕೆ ಪರಿಹಾರ ಯಾವಾಗ? ಎಂಬುದೇ ಪ್ರಶ್ನೆಯಾಗಿದ್ದು, ಎಲ್ಲ ಪರಿಸ್ಥಿತಿಗಳನ್ನು ಅವಲೋಕಿಸಿದರೆ ಅತಿವೃಷ್ಟಿ ಹಾನಿಯಿಂದಾದ ಬೆಳೆಗೆ ಪರಿಹಾರ ದೊರಕುವುದು ಗಗನಕುಸುಮ ಎನ್ನುವಂತೆ ಕಾಣುತ್ತಿದೆ. 17ರಿಂದ 18 ಸಾವಿರ ರೈತರಿಗೆ ಇನ್ನೂ ಯಾವಾಗ ಬೆಳೆವಿಮೆಪಾವತಿಯಾಗುತ್ತದೆ ಎಂದು ಸಂಬಂಧಪಟ್ಟವರನ್ನು ಕೇಳಿದರೆ ಹಾರಿಕೆ ಉತ್ತರವೇ ಸಿಗುತ್ತಿದೆ. ಒಂದೇಡೆ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಮತ್ತೂಂದೆಡೆ ಅತಿವೃಷ್ಟಿ ಹಾನಿಗೆ ಪರಿಹಾರ ದೊರಕುವ ಲಕ್ಷಣಗಳು ಕಂಡು ಬರುತ್ತಿಲ್ಲ. ಒಟ್ಟಾರೆ ಇದನ್ನೆಲ್ಲ ಅವಲೋಕಿಸಿದರೆ ರೈತರ ಗೋಳಿಗೆ ಪರಿಹಾರ ಹಾಗೂ ಕೊನೆ ಇಲ್ಲವೇ? ಎನ್ನುವಂತಾಗಿದೆ.
* ಹಣಮಂತರಾವ ಭೈರಾಮಡಗಿ