Advertisement

17 ಅಣು ರಿಯಾಕ್ಟರ್‌ ಸ್ಥಾಪನೆಗೆ ಯೋಜನೆ

11:46 PM Oct 19, 2019 | Team Udayavani |

ಹೊಸದಿಲ್ಲಿ: ದೇಶದಲ್ಲಿ ತ್ವರಿತಗತಿಯಲ್ಲಿ ಅಣು ವಿದ್ಯುತ್‌ ಘಟಕಗಳನ್ನು ಸ್ಥಾಪಿಸುವ ಯೋಜನೆ ರೂಪಿಸಿರುವ ಕೇಂದ್ರ ಸರಕಾರ, 17 ಹೊಸ ರಿಯಾಕ್ಟರ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಏಳು ರಿಯಾಕ್ಟರ್‌ಗಳು ನಿರ್ಮಾಣ ಹಂತದಲ್ಲಿವೆ. ತ್ವರಿತಗತಿಯ ನಿರ್ಮಾಣಕ್ಕಾಗಿ ಫ್ಲೀಟ್‌ ಮೋಡ್‌ ವಿಧಾನ ಅನುಸರಿಸಲಾಗುತ್ತದೆ ಎಂದು ಅಣು ವಿದ್ಯುತ್‌ ಇಲಾಖೆ ಕಾರ್ಯದರ್ಶಿ ಕೆ.ಎನ್‌. ವ್ಯಾಸ್‌ ಹೇಳಿದ್ದಾರೆ.

Advertisement

2030ರ ವೇಳೆಗೆ ಹೊಸ 21 ಅಣು ವಿದ್ಯುತ್‌ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದ್ದು, ಈ ಯೋಜನೆ ನಿಗದಿಯಂತೆ ಸಾಗುತ್ತಿದೆ. ಇದಕ್ಕೆ ಪೂರಕವಾಗಿ ಫ್ಲೀಟ್‌ ಮೋಡ್‌ ವಿಧಾನವನ್ನು ಅನುಸರಿಸಲಾಗುತ್ತಿದೆ. ಇದ ರಿಂದ ನಿರ್ಮಾಣ ವೆಚ್ಚ ಕಡಿಮೆಯಾಗುತ್ತದೆ ಮತ್ತು ನಿರ್ಮಾಣವೂ ವೇಗವಾಗಿ ಸಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕಳೆದ ಕೆಲವು ದಶಕಗಳಲ್ಲಿ ನಾವು ಒಟ್ಟು 22 ರಿಯಾಕ್ಟರ್‌ಗಳನ್ನು ಸ್ಥಾಪಿಸಿದ್ದೇವೆ. ನ್ಯೂಕ್ಲಿಯರ್‌ ರಿಯಾಕ್ಟರ್‌ ತಂತ್ರಜ್ಞಾನ ದಲ್ಲಿ ನಾವು ಗಮನಾರ್ಹ ಸಂಶೋಧನೆ ಹಾಗೂ ಅಭಿವೃದ್ಧಿ ಸಾಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next