Advertisement

ಚಾಮರಾಜನಗರ: ಇಂದು 964 ಮಾದರಿಗಳ ಪರೀಕ್ಷೆ, 17 ಪಾಸಿಟಿವ್ ಪ್ರಕರಣಗಳು ಪತ್ತೆ

06:05 PM Jul 17, 2020 | keerthan |

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 17 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಜಿಲ್ಲೆಯ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 234ಕ್ಕೆ ಎರಿಕೆಯಾಗಿದೆ.

Advertisement

ಇಂದು ಜಿಲ್ಲೆಯಲ್ಲಿ ಒಟ್ಟು 964 ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು ಅದರಲ್ಲಿ 17 ಪಾಸಿಟಿವ್ ಎಂದು ದೃಢಪಟ್ಟಿದ್ದಾಗಿವೆ. ಇನ್ನು 270 ಮಾದರಿಗಳ ಫಲಿತಾಂಶ ಬಾಕಿಯಿದೆ.

ಜಿಲ್ಲೆಯಲ್ಲಿ ಒಟ್ಟು 234 ಕೋವಿಡ್ -19ಸೋಂಕು ಪ್ರಕರಣಗಳಾಗಿದ್ದು, ಪ್ರಸ್ತುತ 96 ಸಕ್ರಿಯ ಪ್ರಕರಣಗಳಿವೆ. 6 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಮರಾಜನಗರ ತಾಲೂಕಿನಲ್ಲಿ 6, ಗುಂಡ್ಲುಪೇಟೆ ತಾಲೂಕಿನಲ್ಲಿ 6, ಕೊಳ್ಳೇಗಾಲ ತಾಲೂಕಿನಲ್ಲಿ 4 ಮತ್ತು ಯಳಂದೂರು ತಾಲೂಕಿನಲ್ಲಿ 1 ಪ್ರಕರಣಗಳು ದೃಢಪಟ್ಟಿವೆ. ಇಂದಿನ ಪ್ರಕರಣಗಳಲ್ಲಿ 6 ಮಂದಿ ಬೆಂಗಳೂರಿನಿಂದ, ಮೂವರು ಮೈಸೂರಿನಿಂದ ಬಂದವರಿದ್ದಾರೆ.

ಚಾಮರಾಜನಗರ ತಾಲೂಕು: 20 ವರ್ಷದ ಯುವಕ, 5ನೇ ವಾರ್ಡ್, ನೂರ್ ಮಸೀದಿ ಸಮೀಪ, ಚಾಮರಾಜನಗರ.  5 ವರ್ಷದ ಬಾಲಕಿ ಸೋಮವಾರಪೇಟೆ. 50 ವರ್ಷದ ಪುರುಷ ಕಣ್ಣೇಗಾಲ, 56 ವರ್ಷದ ಪುರುಷ ಕುದೇರು, 24 ವರ್ಷದ ಯುವಕ ಬಾಗಳಿ. 47 ವರ್ಷದ ಪುರುಷ ಮೂಡಲ ಅಗ್ರಹಾರ.

Advertisement

ಗುಂಡ್ಲುಪೇಟೆ ತಾಲೂಕು: 18 ವರ್ಷದ ಯುವಕ ಮಹದೇವಪ್ರಸಾದ್ ನಗರ. 23 ವರ್ಷದ ಯುವಕ, ಕೆಬ್ಬೇಪುರ. 28 ವರ್ಷದ ಯುವತಿ ನಾಯಕರ ಬೀದಿ, ಗುಂಡ್ಲುಪೇಟೆ. 52 ವರ್ಷದ ಪುರುಷ, ಜಾಕೀರ್ ಹುಸೇನ್ ನಗರ. 25 ವರ್ಷದ ಯುವಕ ಹೂರದಹಳ್ಳಿ, 57 ವರ್ಷದ ಪುರುಷ ಹಳೆ ಆಸ್ಪತ್ರೆ ರಸ್ತೆ, ಗುಂಡ್ಲುಪೇಟೆ.

ಕೊಳ್ಳೇಗಾಲ ತಾಲೂಕು:  39 ವರ್ಷದ ಪುರುಷ, ಗರಡಿ ರಸ್ತೆ, ಕೊಳ್ಳೇಗಾಲ. 35 ವರ್ಷದ ಯುವಕ ಕೊಳ್ಳೇಗಾಲ. 50 ವರ್ಷದ ಮಹಿಳೆ ಕೊಳ್ಳೇಗಾಲ. 62 ವರ್ಷದ ಪುರುಷ, ಚೌಡೇಶ್ವರಿ ದೇವಸ್ಥಾನದ ರಸ್ತೆ ಕೊಳ್ಳೇಗಾಲ.

ಯಳಂದೂರು ತಾಲೂಕು: 22 ವರ್ಷದ ಯುವಕ ಮಾಂಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next