Advertisement

ಉಡುಪಿಗೆ 17 ಕೋ.ರೂ. ನೆರೆ ಪರಿಹಾರ ಬಿಡುಗಡೆ

12:21 AM Oct 22, 2020 | mahesh |

ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಸಂತ್ರಸ್ತರಾದವರಿಗೆ ಪರಿಹಾರಕ್ಕಾಗಿ ರಾಜ್ಯ ಸರಕಾರವು 17.93 ಕೋ.ರೂ. ವಿಶೇಷ ಪ್ಯಾಕೇಜ್‌ ಪರಿಹಾರ ಬಿಡುಗಡೆ ಮಾಡಿದೆ.

Advertisement

ಜೂನ್‌ ತಿಂಗಳಿನಿಂದ ಸೆಪ್ಟಂಬರ್‌ ಅಂತ್ಯದ ವರೆಗೆ ಉಡುಪಿ ಜಿಲ್ಲೆ ಯಲ್ಲಿ 4,485 ಮಿ.ಮೀ. ಮಳೆ ಯಾಗಿದ್ದು, ವಾಡಿಕೆಗಿಂತ ಶೇ. 14ರಷ್ಟು ಹೆಚ್ಚು ಮಳೆಯಾಗಿದೆ. ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕಾರ್ಕಳ ಮತ್ತು ಬ್ರಹ್ಮಾವರ ತಾಲೂಕುಗಳ ಸುಮಾರು 77 ಗ್ರಾಮಗಳು ಜಲಾ ವೃತ ಗೊಂಡಿದ್ದು, 3,694 ಮನೆಗಳಿಗೆ ಮಳೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಹಾನಿಯಾಗಿವೆ. ಅಲ್ಲದೆ ಕೃಷಿ ಮತ್ತು ತೋಟಗಾರಿಕೆ ಬೆಳೆ ಗಳು ಜಲಾವೃತಗೊಂಡಿವೆ. ಮಳೆ ಯಿಂದಾಗಿ ರಸ್ತೆಗಳು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಜಲಾ ವೃತ  ಗೊಂಡಿವೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಮಾರ್ಗ ಸೂಚಿಯಂತೆ 40 ಕೋಟಿ ರೂ. ಬಿಡುಗಡೆಗೆ ಉಡುಪಿ ಜಿಲ್ಲಾಧಿಕಾರಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದರು.

ಅವರ ಮನವಿ ಮೇರೆಗೆ ರಾಜ್ಯ ಸರಕಾರ 17.93 ಕೋ.ರೂ. ಬಿಡುಗಡೆ ಮಾಡಿದ್ದು, ಅತಿವೃಷ್ಟಿಯಿಂದ ಹಾನಿ ಗೊಳಗಾದ ಪ್ರದೇಶಗಳಲ್ಲಿ ತುರ್ತು ಪರಿಹಾರ ಕೈಗೊಳ್ಳುವಂತೆ ಸೂಚಿಸಿ ಆದೇಶ ಹೊರಡಿಸಲಾಗಿದೆ.

ಮಂಗಳೂರಿನ ಪಚ್ಚನಾಡಿ ಸಂತ್ರಸ್ತರಿಗೆ 14 ಕೋ.ರೂ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯರಾಶಿಯು ಮಂದಾರ ಭಾಗಕ್ಕೆ ಜರಿದು ನಷ್ಟ ಉಂಟಾ ಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು 14 ಕೋ.ರೂ. ಪರಿಹಾರ ಮೊತ್ತವನ್ನು ಕೂಡ ಬಿಡುಗಡೆ ಮಾಡಿದೆ.

ಪಚ್ಚನಾಡಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಉಂಟಾದ ಭೂ ಕುಸಿತ ದಿಂದ ಮಂದಾರದಲ್ಲಿ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ಅಂದಾಜು 20 ಕೋ.ರೂ. ಪರಿಹಾರ ಪಾವತಿಸುವಂತೆ ಸರಕಾರಕ್ಕೆ ಶಾಸಕರು ಮತ್ತು ಸಂಸದರ ನಿಯೋಗ ವಿಶೇಷ ಮನವಿ ಸಲ್ಲಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next