Advertisement
ಚುನಾವಣ ಫಲಿತಾಂಶ ಬಂದು ಒಂಬತ್ತು ದಿನಗಳ ಬಳಿಕ ಸೋಮವಾರ ಮೊದಲ ಕಲಾಪ ಸಮಾವೇಶಗೊಂಡಿದ್ದು, ಮೊದಲ ದಿನ 182 ಮಂದಿ ಶಾಸಕರು ಪ್ರಮಾಣ ಸ್ವೀಕರಿಸಿದರು. ಶಾಸಕರು ಭಗವಂತ, ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು. ಆದರೆ ಕೆಲವರು ವ್ಯಕ್ತಿಗಳು, ಮನೆ ದೇವರು, ಊರ ದೇವರು, ಕ್ಷೇತ್ರದ ಜನತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಆಕ್ಷೇಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದೇವರ ಹೆಸರಿ ನಲ್ಲಿ ಪ್ರಮಾಣ ಸ್ವೀಕರಿಸಿದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ದೇವರ ಸಮಾನರಾದ ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣ ಸ್ವೀಕಾರ ಮಾಡಿದರು. ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಗೈರಾಗಿದ್ದರು. ಪ್ರಮುಖರೇ ಇಲ್ಲ
ವಿಪಕ್ಷ ಸಾಲಿನಲ್ಲಿ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್. ಕೆ.ಎಸ್. ಈಶ್ವರಪ್ಪ, ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಮುರುಗೇಶ್ ನಿರಾಣಿ, ಸೋಮಣ್ಣ ಅವರಂತಹ ಘಟಾನುಘಟಿಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
Related Articles
ಸದನದ ಅತ್ಯಂತ ಹಿರಿಯ ಸದಸ್ಯ 93 ವರ್ಷದ ಶಾಮನೂರು ಶಿವಶಂಕರಪ್ಪ ಹಾಗೂ ಕಿರಿಯ ಶಾಸಕ ನಂಜನಗೂಡು ಕ್ಷೇತ್ರದ 28 ವರ್ಷದ ದರ್ಶನ್ ಧ್ರುವನಾರಾಯಣ.
Advertisement
ಸ್ಪೀಕರ್ ಆಗಿದ್ದವರೂ ಇಲ್ಲಸ್ಪೀಕರ್ ಆಗಿದ್ದ ಒಬ್ಬರೂ ಈ ಬಾರಿ ಪುನರಾಯ್ಕೆಯಾಗಿಲ್ಲ. ರಮೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ್ ಶೆಟ್ಟರ್, ಕೆ.ಜೆ.ಬೋಪಯ್ಯ ಅವರು ಈ ಬಾರಿ ಸದನದಲ್ಲಿಲ್ಲ. ಮಾಜಿ ಸಿಎಂಗಳ ಪುತ್ರರಿದ್ದಾರೆ
ಹೊಸ ವಿಧಾನಸಭೆಯಲ್ಲಿ ಏಳು ಮಂದಿ ಮಾಜಿ ಮುಖ್ಯಮಂತ್ರಿಗಳ ಪುತ್ರರು ಶಾಸಕರಾಗಿದ್ದಾರೆ. ಮಾಜಿ ಸಿಎಂ ದೇವೇ ಗೌಡರ ಪುತ್ರರಾದ ಕುಮಾರಸ್ವಾಮಿ, ರೇವಣ್ಣ, ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪನವರ ಪುತ್ರ ವಿಜಯೇಂದ್ರ, ಎಸ್.ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ, ಆರ್.ಗುಂಡೂರಾವ್ ಪುತ್ರ ದಿನೇಶ್ ಗುಂಡುರಾವ್, ಧರಂ ಸಿಂಗ್ ಪುತ್ರ ಅಜಯ ಸಿಂಗ್ ಇದ್ದಾರೆ.