Advertisement

ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜಯಂತ್ಯುತ್ಸವ

02:49 PM Sep 04, 2021 | Team Udayavani |

ಅಂಧೇರಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಅಂಧೇರಿ ಸ್ಥಳೀಯ ಕಚೇರಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜಯಂತ್ಯುತ್ಸವು ಆ. 29ರಂದು ಅಪರಾಹ್ನ 4ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಿತು.

Advertisement

ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಬಾಬು ಕೆ. ಪೂಜಾರಿ, ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಕೋಟ್ಯಾನ್‌, ಉಪಾಧ್ಯಕ್ಷರಾದ ಸುರೇಶ್‌ ಬಿ. ಸುವರ್ಣ, ಜಗನ್ನಾಥ್‌ ಕರ್ಕೇರ, ಗೌರವ ಕೋಶಾಧಿಕಾರಿ ಸುಧಾಕರ ಎಂ. ಜತ್ತನ್‌ ಅವರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಅವರು ಬ್ರಹ್ಮಶ್ರೀ ನಾರಾಯಣಗುರುಗಳ ಜೀವನದ ಬಗ್ಗೆ ವಿವರಿಸಿದರು. ಬಿಲ್ಲವರ ಅಸೋಸಿಯೇಶನ್‌ ಇದರ ಉಪಾಧ್ಯಕ್ಷ ಶಂಕರ್‌ ಡಿ. ಪೂಜಾರಿ ಅವರು ಬಿಲ್ಲವ ಭವನದಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳು ಎಸ್‌ಎಸ್‌ಸಿ ಮತ್ತು ಪದವಿ ಪಡೆದ ಬಳಿಕ ಏನು ಮಾಡಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿದರು.

ಇದನ್ನೂ ಓದಿ:ಅಭಿಮಾನಿಗಳಿಂದ ಒತ್ತಾಯ ಬಂದರೆ ಅಭಿಷೇಕ್ ರಾಜಕೀಯ ಪ್ರವೇಶದ ಬಗ್ಗೆ ನೊಡೋಣ: ಸುಮಲತಾ

ಗುರುಪೂಜೆಯ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಶನ್‌ ಜತೆ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌, ಯುವ ಅಭ್ಯುದಯದ ಕಾರ್ಯಾಧ್ಯಕ್ಷ ನಾಗೇಶ್‌ ಕೋಟ್ಯಾನ್‌, ಶಿವಸೇನೆಯ ಕೊಂಡಿವಿಟಾ ಅಂಧೇರಿ ಪರಿಸರದ ಶಾಖಾ ಪ್ರಮುಖ ಪ್ರಮೋದ್‌ ಸಾವಂತ್‌, ಮರೋಲ್‌ ಶಿವಸೇನಾ ಯುವಸೇನೆಯ ಪ್ರಮುಖ ಕಿರಣ್‌ ಪೂಜಾರಿ, ಬಿಲ್ಲವರ ಅಸೋಸಿಯೇಶನ್‌ ಘಾಟ್‌ಕೋಪರ್‌ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Advertisement

ವಿದ್ಯಾದಾಯಿನಿ ಭಜನ ಮಂಡಳಿ ಪೋರ್ಟ್‌ ಇವರಿಂದ ಭಜನೆ ಸೇವೆ ನಡೆಯಿತು. ಅಲಂಕಾರ ಸೇವೆಯಲ್ಲಿ ದಿನೇಶ್‌ ಪೂಜಾರಿ ಮತ್ತು ಪ್ರಸಾದ ಸೇವೆಯಲ್ಲಿ ಪ್ರಸಾದ್‌ ಪೂಜಾರಿ ಅವರು ಸಹಕರಿಸಿದರು. ಮಹಾಪೂಜೆ ಬಳಿಕ ಸಾಯಿಸಿದ್ಧಿ ಕ್ಯಾಟರರ್ಸ್‌ನ ಮಾಲಕ ಶಂಕರ್‌ ಪೂಜಾರಿ ಪೆಲತ್ತೂರು ಇವರ ಸೇವಾರ್ಥಕವಾಗಿ ಅನ್ನಸಂತರ್ಪಣೆ ಜರಗಿತು. ಮಹಾದಾನಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪೂಜೆಯಲ್ಲಿ ಪಾಲ್ಗೊಂಡರು.

ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಯೋಗಾನಂದ್‌ ಸಾಲ್ಯಾನ್‌, ಅಚ್ಯುತ ಕೋಟ್ಯಾನ್‌, ಸಂತೋಷ್‌ ಪೂಜಾರಿ ಸಹಕರಿಸಿದರು. ಗುರುಪೂಜೆಯು ಯಶಸ್ವಿ ಯಾಗಲು ಬಾಬು ಕೆ. ಪೂಜಾರಿ, ಚಂದ್ರಶೇಖರ ಪೂಜಾರಿ, ಸುರೇಶ್‌ ಬಿ. ಸುವರ್ಣ, ಸುಷ್ಮಾ ಎಸ್‌. ಕೋಟ್ಯಾನ್‌, ಕೇಶವ್‌ ಅಂಚನ್‌, ಎಲ್ಲ ಸಮಿತಿ ಸದಸ್ಯರು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next