Advertisement

ತಲೆಯೆತ್ತಿದೆ ಅತೀ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ

12:02 AM Apr 08, 2022 | Team Udayavani |

ಕುಣಿಗಲ್‌: ಜಗತ್ತಿನಲ್ಲೇ ಅತೀ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹವನ್ನು ಹೊಂದಿದ ಖ್ಯಾತಿಗೆ ಸದ್ಯದಲ್ಲೇ ಕರ್ನಾಟಕ ಪಾತ್ರವಾಗಲಿದೆ.

Advertisement

ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಬಿದನಗೆರೆ ಬಸವೇಶ್ವರ ಮಠದಲ್ಲಿ ಈ ವಿಗ್ರಹ ನಿರ್ಮಾಣಗೊಂಡಿದ್ದು, ಎ. 10ರ ಶ್ರೀರಾಮ ನವಮಿಯಂದು ಪ್ರಧಾನಿ ಮೋದಿ ವಿಗ್ರಹವನ್ನು ವರ್ಚುವಲ್‌ ಆಗಿ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಶ್ರೀ ಕ್ಷೇತ್ರದ ಪೀಠಾಧಿಕಾರಿ ಡಾ| ಧನಂಜಯ ಗುರೂಜಿ ತಿಳಿಸಿದ್ದಾರೆ.

8 ವರ್ಷಗಳ ಕಾಮಗಾರಿ :

ವಿಗ್ರಹ ನಿರ್ಮಾಣ ಕಾಮಗಾರಿ ಆರಂಭವಾದದ್ದು 2014ರ ಅಕ್ಟೋಬರ್‌ನಲ್ಲಿ. ಸುಮಾರು 50 ಕಾರ್ಮಿಕರು, ಶಿಲ್ಪಿಗಳು ಶ್ರಮ ವಹಿಸಿ 8 ವರ್ಷಗಳಲ್ಲಿ ನಿರ್ಮಾಣ ಪೂರ್ಣಗೊಳಿಸಿದ್ದಾರೆ. ಕಾಮಗಾರಿಗೆ 85 ಸಾವಿರ ಚೀಲ ಸಿಮೆಂಟ್‌, 308 ಟನ್‌ ಕಬ್ಬಿಣ, 500 ಲೋಡ್‌ ಎಂ. ಸ್ಯಾಂಡ್‌ ಹಾಗೂ ಜಲ್ಲಿ ಬಳಸಲಾಗಿದೆ. 5,800 ಲೀ.ಗಳಷ್ಟು ಬಣ್ಣ ಬಳಸಲಾಗಿದ್ದು, ವಿಗ್ರಹದ ತಳಭಾಗದಿಂದ ಮೇಲಿನ ಭಾಗದ ವರೆಗೆ 4,800 ಕೆ.ಜಿ. ತಾಮ್ರ ಉಪಯೋಗಿಸಲಾಗಿದೆ. ಕಿರೀಟಕ್ಕೆ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಕೆ.ಜಿ.ಗಟ್ಟಲೆ ಒಂದು ರೂ. ನಾಣ್ಯ ಬಳಸಲಾಗಿದೆ.

ಏನಿದರ ವೈಶಿಷ್ಟ್ಯ? :

Advertisement

01.ಇದು ವಿಶ್ವದಲ್ಲೇ ಅತೀ ಎತ್ತರದ್ದು, 161 ಅಡಿ ಎತ್ತರದ ಪಂಚಮುಖೀ ಆಂಜನೇಯ ಸ್ವಾಮಿ ವಿಗ್ರಹ.

  1. ದಕ್ಷಿಣಾಭಿಮುಖವಾಗಿ ನಿಂತಿರುವ ಪಂಚಮುಖೀ ಆಂಜನೇಯಸ್ವಾಮಿಯ ಪಾದದ ಕೆಳಗೆ ಸುಮಾರು 24 ಸ್ತಂಭಗಳಿವೆ.
  2. ಪ್ರತೀ ಕಂಬದಲ್ಲೂ ವಿವಿಧ ದೇವರು ಹಾಗೂ ಹಲವು ಪ್ರಾಣಿಗಳ ಚಿತ್ರವನ್ನು ಅದ್ಭುತವಾಗಿ ಕೆತ್ತನೆ ಮಾಡಲಾಗಿದೆ.
  3. ಮೂರ್ತಿಯ 5 ಮುಖಗಳು, ಗದೆ, ಬಾಲ, ಶಲ್ಯದ ಕೆತ್ತನೆಯು ಮನಸೂರೆಗೊಳ್ಳುವಂತಿದೆ.

 

ಕ್ಷೇತ್ರದ ಹಿನ್ನೆಲೆ : ತ್ಯ ಶನೇಶ್ವರ ಸ್ವಾಮಿ ದೇಗುಲವನ್ನು ಸ್ಥಾಪಿಸಿದರು. ಬಳಿಕ ಉದ್ಭವ ಬಸವಣ್ಣ, ಶನಿಶಿಂಗ್ನಾಪುರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ. ಶ್ರೀ ಕ್ಷೇತ್ರಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ವೃದ್ಧಾಶ್ರಮ, ಅನಾಥಾಶ್ರಮ, ಉಚಿತ ಆರೋಗ್ಯ ಶಿಬಿರ, ಸರಳ ವಿವಾಹ, ಬಡವರಿಗೆ ಧನ ಸಹಾಯ, ವಸತಿ ಸೌಲಭ್ಯ, ದಾಸೋಹ ಸಹಿತ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಸ್ವಾಮೀಜಿ, ಗಣ್ಯರು ಭಾಗಿ :

ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಮತ್ತಿತರ ಸ್ವಾಮೀಜಿಗಳು, ಕೇಂದ್ರ ಸಚಿವ ರಾದ ಪ್ರಹ್ಲಾದ ಜೋಶಿ, ನಾರಾಯಣಸ್ವಾಮಿ ಪಾಲ್ಗೊಳ್ಳಲಿದ್ದಾರೆ.

2014 : ಅಕ್ಟೋಬರ್‌ನಲ್ಲಿ ಕಾಮಗಾರಿ ಪ್ರಾರಂಭ

8 : ವರ್ಷ ಪೂರ್ಣಗೊಳ್ಳಲು ತಗಲಿದ ಅವಧಿ

50 : ವಿಗ್ರಹ  ನಿರ್ಮಾಣದಲ್ಲಿ ತೊಡಗಿದ್ದ ಶಿಲ್ಪಿಗಳು

161 : ಅಡಿ ವಿಗ್ರಹದ ಎತ್ತರ

5,800 : ವಿಗ್ರಹಕ್ಕೆ ಬಳಸಿದ ಬಣ್ಣ

4,800 : ಕೆ.ಜಿ. ಬಳಸಲಾದ ತಾಮ್ರ

Advertisement

Udayavani is now on Telegram. Click here to join our channel and stay updated with the latest news.

Next