Advertisement
ದೀಪು ಕುಮಾರ್(9) ಎಂಬ ಹುಡುಗ ಸೋಮವಾರ ಕಣ್ಮರೆಯಾಗಿದ್ದ. ಮರುದಿನ ದುಗ್ರಿ ಪ್ರದೇಶದ ನಿರ್ಜನ ಸ್ಥಳದಲ್ಲಿ ತಲೆಕತ್ತರಿಸಿದ ದೇಹದ ಭಾಗ ಸಿಕ್ಕಿತ್ತು. ಇಬ್ಬರು ಒಂದೇ ಪ್ರದೇಶದಲ್ಲಿ ವಾಸವಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Related Articles
ಈ ಪ್ರಕರಣ ಬೇಧಿಸಲು ಪೊಲೀಸರು ಮುಂದಾದದ ನಂತರ, ಸುತ್ತಮುತ್ತ ಪ್ರದೇಶದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ನರರಾಕ್ಷಸ ಹುಡುಗನ ಭಯಾನಕ ಕೃತ್ಯ ಬಯಲಿಗೆ ಬಂದಿತ್ತು ಎಂದು ವರದಿ ತಿಳಿಸಿದೆ. ಸಿಸಿಟಿವಿ ಫೂಟೇಜ್ ನಲ್ಲಿ ದೀಪು ಜೊತೆ ಈ ಹುಡುಗ ಇದ್ದಿರುವುದನ್ನು ಪತ್ತೆ ಹಚ್ಚಿದ್ದರು. ತದನಂತರ ಪೊಲೀಸರು ಹುಡುಗನನ್ನು ಶುಕ್ರವಾರ ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ವೇಳೆ ಹುಡುಗನನ್ನು ಕೊಂದು, ಮಾಂಸ ತಿಂದು, ರಕ್ತ ಕುಡಿದಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
Advertisement