Advertisement

16ರಿಂದ 3 ದಿನ ಉತ್ತನಹಳ್ಳಿ ತ್ರಿಪುರ ಸುಂದರಿ ಜಾತ್ರೆ

09:46 PM Feb 05, 2020 | Lakshmi GovindaRaj |

ಮೈಸೂರು: ಮಾರಿಸಾರು ಉತ್ತನಹಳ್ಳಿ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಶ್ರೀ ಜ್ವಾಲಾಮುಖೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವು ಫೆ.16ರಿಂದ 18 ರವರೆಗೆ ನಡೆಯಲಿದೆ. ಫೆ.16ರಂದು ಭಾನುವಾರ ಮಾಘ ಬಹುಳ ಅಷ್ಟಮಿ ವಿಶಾಖದ ಅಂಗವಾಗಿ ರಾತ್ರಿ 9 ಗಂಟೆಗೆ ಕನ್ಯಾ ಕನ್ನಡಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ಫೆ.17ರಂದು ಸೋಮವಾರ ಮಡೆಪೂಜೆ ಮತ್ತು ತಂಬಿಟ್ಟು ಪೂಜೆ ನಡೆಯಲಿದೆ. ಫೆ.18ರಂದು ದೇವಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ.

Advertisement

ನಾಟಕಗಳ ಪ್ರದರ್ಶನ: ಉತ್ತನಹಳ್ಳಿ ಜಾತ್ರೆ ಪ್ರಯುಕ್ತ ಫೆ. 17ರ ಸೋಮವಾರ ರಾತ್ರಿ 9.30ಕ್ಕೆ ಶ್ರೀಶನೈಶ್ಚರಸ್ವಾಮಿ ಭಕ್ತ ಮಂಡಳಿಯಿಂದ ಮಹಿಷಾಸುರ ಮರ್ದಿನಿ ಪೌರಾಣಿಕ ನಾಟಕ, ಏಳಿಗೆಹುಂಡಿಯಲ್ಲಿ ಕನಕದಾಸ ಯುವಕರ ಬಳಗದಿಂದ ಭೂಮಿ ತೂಕದ ಹೆಣ್ಣು ಸಾಮಾಜಿಕ ನಾಟಕ ಮತ್ತು ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿಮಾನಿಗಳ ಬಳಗದಿಂದ ದಕ್ಷಯಜ್ಞ ಪೌರಾಣಿಕ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಗೊಂದಲಕ್ಕೆ ತೆರೆ: ಮೈಸೂರು ನಗರ ಹೊರವಲಯದ ಸರ್ಕಾರಿ ಉತ್ತನಹಳ್ಳಿಯ ಶ್ರೀಜ್ವಾಲಾಮುಖೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವು ಕ್ಯಾಲೆಂಡರ್‌ ಪ್ರಕಾರ ಫೆ. 16 ರಂದೇ ನಡೆಯಲಿದ್ದು, ಈ ಸಂಬಂಧ ಮೂರು ದಿನಗಳಿಂದ ಸೃಷ್ಟಿಯಾಗಿದ್ದ ಗೊಂದಲಕ್ಕೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತೆರೆ ಎಳೆದಿದ್ದಾರೆ.

ಒಂಟಿಕೊಪ್ಪಲು ಪಂಚಾಂಗ ಮತ್ತು ಅರಮನೆ ಪಂಚಾಂಗದಲ್ಲಿ ನಮೂದಾಗಿದ್ದ ದಿನಾಂಕಗಳ ಗೊಂದಲದಿಂದಾಗಿ ಉತ್ತನಹಳ್ಳಿ ಗ್ರಾಮಸ್ಥರು ಗೊಂದಲಕ್ಕೀಡಾಗಿದ್ದರು. ಈ ಸಂಬಂಧ ಸೋಮವಾರವಷ್ಟೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರನ್ನೂ ಭೇಟಿ ಮಾಡಿ ಫೆ.16 ರಂದು ಜಾತ್ರೆ ನಡೆಸಲು ಅನುವು ಮಾಡಿಕೊಡುವಂತೆ ಗ್ರಾಮಸ್ಥರು ಕೇಳಿಕೊಂಡಿದ್ದರು. ಮಂಗಳವಾರ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಅವರನ್ನು ಭೇಟಿಯಾದ ಗ್ರಾಮಸ್ಥರು ಫೆ.16 ರಂದು ಆಚರಿಸಲು ಸಹಕಾರ ನೀಡುವಂತೆ ಕೋರಿದ್ದರು.

ಗ್ರಾಮಸ್ಥ ರ ಮನವಿ ಆಲಿಸಿದ ಜಿಲ್ಲಾಧಿಕಾರಿ, ಮುಜರಾಯಿ ತಹಶೀಲ್ದಾರ್‌ ಯತಿರಾಜ್‌ ಸಂಪತ್‌ಕುಮಾರನ್‌ ಅವರಿಗೆ ಸೂಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದರು. ಸಂಜೆ ಆಗಮಿಕರ ಸಭೆ ನಡೆಸಿದ ಯತಿರಾಜು ಸಂಪತ್‌ಕುಮಾರನ್‌ ಅಂತಿಮವಾಗಿ ಫೆ.16ರಂದೇ ಜಾತ್ರೆ ನಡೆಸ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಆದೇಶಿಸಿದ್ದಾರೆ. ಅಲ್ಲದೇ ಬಸ್‌ ವ್ಯವಸ್ಥೆ ಕಲ್ಪಿಸಲು ಕೆಎಸ್ಸಾರ್ಟಿಸಿ ನಗರ ವಿಭಾಗದ ಸಂಚಾರ ನಿಯಂತ್ರಣಾಧಿಕಾರಿಗಳಿಗೂ ಪತ್ರ ಬರೆದಿದ್ದಾರೆ.

Advertisement

ದೇಗುಲದ ಆಡಳಿತ ಮಂಡಳಿ ವಿರುದ್ಧ ದೂರು: ಉತ್ತನಹಳ್ಳಿ ಜಾತ್ರಾ ಮಹೋತ್ಸವದ ಗೊಂದಲಕ್ಕೆ ಕಾರಣರಾದ ದೇವಸ್ಥಾನದ ಪಾರುಪತ್ತೇದಾರ ಸುರೇಶ್‌ ಮತ್ತು ಆಗಮಿಕ ಮಹದೇವಪ್ರಸಾದ್‌ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾವಿರಾರು ಭಕ್ತರ ನಂಬಿಕೆ ವಿಚಾರದಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಉತ್ತನಹಳ್ಳಿ ಮತ್ತು ಏಳಿಗೆಹುಂಡಿ ಗ್ರಾಮಸ್ಥರು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಅವರಿಗೆ ದೂರು ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗ್ರಾಪಂ ಸದಸ್ಯ ಶಿವಬೀರ, ಮಾಜಿ ಸದಸ್ಯ ಬಸವರಾಜು, ಜೆ. ಮರಿಯಪ್ಪ, ಶಿವಣ್ಣ, ಜೆ. ಗೋಪಿ, ಚೌಲಿó ಮಂಜು, ಬಿ. ಯಶವಂತಕುಮಾರ್‌, ಪಿ. ರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next