ಮಂಗಳೂರು: ಇಲ್ಲಿನ ಕೋವಿಡ್-19 ಹಾಟ್ ಸ್ಪಾಟ್ ಆಗಿರುವ ಫಸ್ಟ್ ನ್ಯೂರೊ ಮೂಲದ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮತ್ತೊಂದು ಆಘಾತ ಕಾಡಿದೆ. ಇಂದು ಒಂದೇ ದಿನ 16 ಮಂದಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.
ಐತಿಹಾಸಿಕ ಏರ್ ಲಿಫ್ಟ್ ಸಲುವಾಗಿ ಕಳೆದ ಮಂಗಳವಾರ ದುಬೈನಿಂದ ಮಂಗಳೂರಿಗೆ ಬಂದಿಳಿದಿದ್ದ ವಿಮಾನದಲ್ಲಿ ಬಂದವರಲ್ಲಿ 165 ಮಂದಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ.
ವಿಮಾನದಲ್ಲಿ ಬಂದಿದ್ದ 170 ಜನರನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಗಂಟಲು ದ್ರವ ಸಂಗ್ರಹಿಸಿ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಗರ್ಭಿಣಿಯರಿಗೆ ಹೋಂ ಕ್ಯಾರಂಟೈನ್ ಮಾಡಲಾಗಿತ್ತು.
ಇಂದು ಗಂಟಲು ದ್ರವ ವರದಿ ಜಿಲ್ಲಾಡಳಿತರದ ಕೈಸೇರಿದ್ದು, 15 ಮಂದಿಗೆ ಕೋವಿಡ್-19 ಸೋಂಕು ಇರುವುದು ದೃಢವಾಗಿದೆ. ಮತ್ತೋರ್ವರಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇದಿರಂದ ಜಿಲ್ಲೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ.
ರಾಜ್ಯದಲ್ಲಿ ಇಂದು 45 ಸೋಂಕು ಪ್ರಕರಣ ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1032ಕ್ಕೆ ಏರಿದೆ. ಇದರಲ್ಲಿ 520 ಪ್ರಕರಣಗಳು ಆಕ್ಟಿವ್ ಇದ್ದು, 35 ಜನರು ಮೃತಪಟ್ಟಿದ್ದಾರೆ. 476 ಪ್ರಕರಣಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಓರ್ವ ಕೋವಿಡ್ ಅಲ್ಲದ ಕಾರಣದಿಂದ ಮೃತಪಟ್ಟಿದ್ದಾನೆ.